ಮಲಗಿದ್ದಲ್ಲೇ ಹೆಣವಾದ ದಂಪತಿ

ಮಲಗಿದ್ದಲ್ಲೇ ಹೆಣವಾದ ದಂಪತಿ

ಕೋಲಾರ: ಕೋಲಾರ ಜಿಲ್ಲೆಯ ಕೆ.ಮಲ್ಲಂಡಹಳ್ಳಿ ಎಂಬ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.

ಮಳೆಗೆ ಮರ-ಮನೆ ಬಿದ್ದು ಸಾವು-ನೋವು ಸಂಭವಿಸುವ ಪ್ರಕರಣಗಳು ಮುಂದುವರಿದಿದ್ದು, ಇಲ್ಲೊಂದು ಕಡೆ ಮನೆಯ ಗೋಡೆ ಕುಸಿದು ಗಂಡ-ಹೆAಡತಿ ಇಬ್ಬರೂ ಮಲಗಿದ್ದಲ್ಲೇ ಹೆಣವಾಗಿದ್ದಾರೆ.

ನಾಗರಾಜಪ್ಪ (65) ಮತ್ತು ಲಕ್ಷ್ಮಮ್ಮ (60) ಸಾವಿಗೀಡಾದ ಗಂಡ-ಹೆಂಡತಿ. ಮನೆಯಲ್ಲಿದ್ದ ಸೀನಪ್ಪ ಎಂಬ ಇನ್ನೊಬ್ಬರು ಗಾಯಗೊಂಡಿದ್ದಾರೆ.

ಗ್ರಾಮಸ್ಥರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಸೀನಪ್ಪ ಅವರನ್ನು ದುರಂತ ಸ್ಥಳದಿಂದ ಪಾರು ಮಾಡಿದ್ದಾರೆ.

ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ.

Related