ಖತರ್ನಾಕ್ ಕಳ್ಳರಿಗೆ ಬಲೆ ಬೀಸಿದ ಪೋಲಿಸ್ ತಂಡ

  • In Crime
  • October 18, 2024
  • 639 Views
ಖತರ್ನಾಕ್ ಕಳ್ಳರಿಗೆ ಬಲೆ ಬೀಸಿದ ಪೋಲಿಸ್ ತಂಡ

ಚಿಕ್ಕಬಳ್ಳಾಪುರ: ಖತರ್ನಾಕ್ ಕಳ್ಳರು ದೇವಸ್ಥಾನದಲ್ಲಿದ್ದ ಹಲವಾರು ಬೆಳ್ಳಿ ಮತ್ತು ಪೂಜಾ ಸಾಮಗ್ರಿಯನ್ನು ಕಳ್ಳತನ ಮಾಡಿ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಹೌದು, ಗುಡಿಬಂಡೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ದಪ್ಪರ್ತಿ ಗ್ರಾಮದಲ್ಲಿರುವ ದಿನಾಂಕ :02/10/2024 ರಂದು ರಾತ್ರಿ 01-30 ರ ಸಮಯದಲ್ಲಿ ಶ್ರೀ ವೇಣುಗೋಪಾಲ ಸ್ವಾಮಿದೇವಸ್ಥಾನದಲ್ಲಿ ಯಾರೋ ಕಳ್ಳರು ದೇವಸ್ಥಾನದ ಬಾಗಿಲು ಮುರಿದು ದೇವಸ್ಥಾನದಲ್ಲಿ ಅಳವಡಿಸಿದ್ದ ಸಿ.ಸಿ ಟಿವಿಗಳನ್ನು ಬೇರೆ ಕಡೆಗೆ ತಿರುಗಿಸಿ, ವೈರ್ ಗಳನ್ನು ಕಟ್ ಮಾಡಿ ಡಿವಿಆರ್ ಅನ್ನು ತೆಗೆದು ಹಾಕಿ ಬಿರುವಿನಲ್ಲಿದ್ದ ಸುಮಾರು 1.50 ಲಕ್ಷ ಬೆಲೆಬಾಳುವ 2.75 ಕೆ.ಜಿ ಬೆಳ್ಳಿ ಕವಚ, ಸುಮಾರು 60 ಸಾವಿರ ಬೆಲೆ ಬಾಳುವ 1 ಕೆಜಿ ಬೆಳ್ಳಿಯ ಪೂಜೆ ಸಾಮಾನು, ಸುಮಾರು 70 ಸಾವಿರ ಬೆಲೆ ಬಾಳುವ 15 ಗ್ರಾಂ ಚಿನ್ನದ ತಾಳಿ ಮತ್ತು ಹುಂಡಿಯಲ್ಲಿದ್ದ ಸುಮಾರು 20 ಸಾವಿರ ಹಣ ಕಳವಾಗಿದ್ದು, ಈ  ಬಗ್ಗೆ ಶ್ರೀ ಮುರಳಿ.ಡಿ.ಎಸ್ ರವರು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ನೀಡಿದ್ದು, ದೂರಿನ ಅನ್ವಯ ಮೊಕದ್ದಮೆ ಸಂಖ್ಯೆ: 153/2024 ಕಲಂ: 305,331(4)) ಬಿ.ಎನ್.ಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಗಣೇಶ್ ಕೆ, ಪಿ.ಎಸ್‌.ಐ, ಗುಡಿಬಂಡೆ ರವರು ತನಿಖೆಯನ್ನು ಕೈಗೊಂಡಿರುತ್ತೆ. ಇದನ್ನೂ ಓದಿ: ಸಿಲಿಕಾನ್‌ ಸಿಟಿ ಸಮೀಪ ಮತ್ತೊಂದು ವಿಮಾನ ನಿಲ್ದಾಣಕ್ಕೆ ಭರದ ಸಿದ್ಧತೆ

ನಂತರ ಮಾನ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸ್ ಐಪಿಎಸ್ ರವರ ಆದೇಶದಂತೆ ತಂಡವನ್ನು ರಚಿಸಿ ದಿನಾಂಕ:14-10-2024 ರಂದು ಈ ಪ್ರಕರಣದ ಆರೋಪಿಗಳಾದ ಎl- ಚಾಕಲಿ ಪವನ್ ಕುಮಾರ್ ಮತ್ತು ಎ2-ನಾಗಲೂರಿ ರಮಣಯ್ಯ @ಎರಿಕುಲ ವೆಂಕಟರಮಣ ರವರುಗಳನ್ನು ದಸ್ತಗಿರಿ ಮಾಡಿ, ದಪ್ಪರ್ತಿ ಗ್ರಾಮದಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿತರು ಮತ್ತು ಮಾಲು ಪತ್ತೆ ಕಾರ್ಯವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಷೆ ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ರಾಜ ಇಮಾಮ್ ಖಾಸಿಂ ಹಾಗೂ ಸಿಬ್ಬಂಧಿಯವರು ಆರೋಪಿತರು ಮತ್ತು ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Related