ರೇಣುಕಾ ಸ್ವಾಮಿ ಅಂಗಲಾಚಿ ಬೇಡುತ್ತಿರುವ ಫೋಟೋ ವೈರಲ್

ರೇಣುಕಾ ಸ್ವಾಮಿ ಅಂಗಲಾಚಿ ಬೇಡುತ್ತಿರುವ ಫೋಟೋ ವೈರಲ್

ಬೆಂಗಳೂರು: ಕೊಲೆ ಆರೋಪವನ್ನು ಎದುರಿಸುತ್ತಿರುವ ನಟ ದರ್ಶನ್ ವಿರುದ್ಧ ಈಗಾಗಲೇ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಿದ್ದು, ಎಲ್ಲಾ ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷಿಗಳು ದೊರತಿವೆ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನು ಇದರ ಬೆನ್ನಲ್ಲೇ ಇದೀಗ ಕೊಲೆಯಾಗುವ ಮುಂಚೆ ರೇಣುಕಾ ಸ್ವಾಮಿ ಚಡ್ಡಿನಲ್ಲಿ ದರ್ಶನ್ ಅವರಿಗೆ ಕೈ ಮುಗಿದು ಕೇಳುತ್ತಿರುವ ಮತ್ತು ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ಒಂದು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಈ ಫೋಟೋವನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಪಟ್ಟಣಗೆರೆ ಶೆಡ್​ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.

ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆಯಲ್ಲಿರುವ ಶೆಡ್​ಗೆ ಕರೆದುಕೊಂಡು ಹೋಗಲಾಗಿತ್ತು. ರೇಣುಕಾ ಸ್ವಾಮಿಗೆ ಸಾಕಷ್ಟು ಟಾರ್ಚರ್ ನೀಡಲಾಗಿತ್ತು. ಈ ಟಾರ್ಚರ್​ನಿಂದಲೇ ಅವರು ಮೃತಪಟ್ಟಿದ್ದರು. ಈಗ ಅವರು ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ನೋಡಿ ಅನೇಕರಿಗೆ ದುಃಖ ಆಗಿದೆ.

ರೇಣುಕಾ ಸ್ವಾಮಿ ಕೊಲೆ ಕೇಸ್ ವಿಚಾರಣೆಯನ್ನು ವಿಶೇಷ ಕೋರ್ಟ್​ಗೆ ನೀಡುವಂತೆ ಮನವಿ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸರ್ಕಾರದ ಮುಂದೆ ಈ ಬೇಡಿಕೆಯನ್ನು ಇಡಲಾಗುತ್ತಿದೆ. ಇದನ್ನೂ ಓದಿ: ಬಳ್ಳಾರಿ ಜೈಲಿನಲ್ಲಿ ದಾಸನಿಗೆ ಸಕಲ ಸೌಲಭ್ಯಕ್ಕೆ ಬ್ರೇಕ್

ಒಟ್ಟಿನಲ್ಲಿ ಅದೇನೆ ಆಗಲಿ ಕೂತು ಮಾತಾಡಿಕೊಂಡು ಬಗೆಹರಿಸಿದ್ದರೆ ಈ ಸಮಸ್ಯೆ ಬಗೆಹರಿಯುತ್ತಿತ್ತೋ ಏನು. ಇದೀಗ ಜೈಲಿನಲ್ಲಿರುವ ದರ್ಶನ್ ಹೊರಗಡೆ ಇರುತ್ತಿದ್ದರೋ ಏನೋ? ಕೊಲೆಯಾಗಿ ಸ್ಮಶಾನ ಸೇರಿರುವ ರೇಣುಕಾ ಸ್ವಾಮಿಯವರು ಜೈಲು ಸೆರೆವಾಸ ಅನುಭವಿಸುತ್ತಿದ್ದರೇನೋ. ಆದರೆ ದುಡುಕಿನ ನಿರ್ಧಾರದ ಮೇಲೆ ಇದೀಗ ಒಂದು ಪ್ರಾಣ ಪಕ್ಷಿ ಹಾರಿ ಹೋಗುವುದರ ಜೊತೆಗೆ 17 ಮಂದಿ ಜೈಲು ಸೆರೆವಾಸ ಅನುಭವಿಸುತ್ತಿದ್ದಾರೆ

Related