ರಾಷ್ಟ್ರೀಯ ಮಾನ್ಯತೆ ಪಡೆದ ಆಕ್ಸ್ಫರ್ಡ್ ಸಂಸ್ಥೆ

ರಾಷ್ಟ್ರೀಯ ಮಾನ್ಯತೆ ಪಡೆದ ಆಕ್ಸ್ಫರ್ಡ್ ಸಂಸ್ಥೆ

ಆನೇಕಲ್: ಚೀನಾ ದೇಶದಲ್ಲಿ ಕೊರೋನಾ ಶೇ. 70 ರಷ್ಟು ಅಧಿಕಗೊಂಡಿದ್ದರು ಭಾರತದಲ್ಲಿ ಬಿಎಫ್ 7 ವೈರಸ್ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲವೆಂದು ರಾಜೀವ್ ಗಾಂಧಿ ವಿವಿ ಉಪಕುಲಪತಿಗಳಾದ ಎಂ.ಕೆ. ರಮೇಶ್ ನುಡಿದರು.

ಆರೋಗ್ಯ ಸೇವೆಗೆ ರಾಷ್ಟ್ರೀಯ ಮಾನ್ಯತೆ ಪಡೆದಂತಹ ಅತ್ತಿಬೆಲೆಯಲ್ಲಿರುವ ಆಕ್ಸ್ಫರ್ಡ್ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗೆ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆ ಒದಗಿಸುವವರ ರಾಷ್ಟ್ರೀಯ ಮಾನ್ಯತಾ ಮಂಡಳಿ, ಓಂಃಊ ಸರ್ಟಿಫಿಕೇಟನ್ನು ರಾಜೀವ್ ಗಾಂಧಿ ವಿವಿ ಉಪಕುಲಪತಿಗಳಾದ ಎಂ.ಕೆ. ರಮೇಶ್‌ರವರು ನೀಡಿ ಮಾತನಾಡಿದರು.

ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆ ಒದಗಿಸುವವರ ರಾಷ್ಟ್ರೀಯ ಮಾನ್ಯತಾ ಮಂಡಳಿಯು 2005ರಲ್ಲಿ ರೂಪುಗೊಂಡಿದ್ದು, ಇದು ಭಾರತದ ಆಸ್ಪತ್ರೆಗಳಿಗೆ ಪ್ರಮುಖ ಮಾನ್ಯತೆಯಾಗಿದೆ.  ಇಲ್ಲಿಯವರೆಗೆ ಭಾರತದಲ್ಲಿ 838 ಕ್ಕೂ ಹೆಚ್ಚು ಆಸ್ಪತ್ರೆಗಳು ಓಂಃಊ ನಿಂದ ಮಾನ್ಯತೆ ಪಡೆದಿವೆ ಎಂದರು.

ಕೋವಿಡ್‌ನಿಂದಾಗಿ ಭಾರತಕ್ಕೆ ಯಾವುದೇ ಆತಂಕವಿಲ್ಲ. ನಮ್ಮ ದೇಶದ ಜನತೆಗೆ ರೋಗನಿರೋಧಕ ಶಕ್ತಿ ಹೆಚ್ಚಿದ್ದು ಕೊರೋನಾ ವೈರಸ್‌ನ ಆತಂಕ ಪಡುವ ಅವಶ್ಯಕತೆ ಇಲ್ಲ. ಬಿಎಫ್ 7 ವೈರಸ್ ಬಗ್ಗೆ ಯಾರೂ ಆತಂಕ ಪಡಬಾರದೆಂದು ತಿಳಿಸಿದರು. ಭಾರತದಲ್ಲಿ ತಂತ್ರಜ್ಞಾನದಲ್ಲಿ ಹಿಂದುಳಿದಿಲ್ಲ. ವಿದೇಶದಲ್ಲಿರುವ ತಂತ್ರಜ್ಞಾನ ನಮ್ಮ ದೇಶದಲ್ಲೂ ಇದೆ.  ಲ್ಯಾಕ್ಟೋಸ್ಕೋಪಿ, ರೋಬೋಟಿಕ್ ಸರ್ಜರಿ ಲಗ್ಗೆ ಇಟ್ಟಿದೆ. ಮುಂದಿನ ದಿನಗಳಲ್ಲಿ ಪರಿಣಿತ ವೈದ್ಯರು ಇರುವ ಚಿಕಿತ್ಸೆಯನ್ನು ನಮ್ಮಲ್ಲಿ ಹೆಚ್ಚು ಅಳವಡಿಸಿಕೊಳ್ಳಬಹುದು. ಕೋವಿಡ್‌ನ್ನು ಅತ್ಯುತ್ತಮವಾಗಿ ಎದುರಿಸಿದಂತಹ ದೇಶ ಭಾರತ. ನಾವೆಲ್ಲರೂ ಹೆಮ್ಮೆ ಪಡುವಂತಹ ಸಂಗತಿ ಎಂದರು.

ಆಕ್ಸ್ಫರ್ಡ್ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗೆ ಅತ್ಯುನ್ನತ ಓಂಃಊ ಸರ್ಟಿಫಿಕೇಟನ್ನು ಪಡೆದಿರುವುದು ಹೆಮ್ಮೆ ಪಡುವಂತಹ ಸಂಗತಿ ಎಂದು ಛರ‍್ಮೆನ್ ಎಸ್.ಎನ್.ಎಲ್.ವಿ. ನರಸಿಂಹರಾಜುರವರು ನುಡಿದರು. ಉತ್ತಮ ಆಸ್ಪತ್ರೆ ನಿರ್ಮಾಣಕ್ಕೆ ಅತ್ಯವಶ್ಯಕ ವೈದ್ಯಕೀಯ ಸಲಕರಣೆಗಳು ವೈದ್ಯರು ಅಗತ್ಯ. ಜನ ಸಾಮಾನ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು. ದಕ್ಷಿಣ ಭಾರತದಲ್ಲೇ ಉತ್ತಮ ಆಸ್ಪತ್ರೆಯಾಗಿದ್ದು, ಉತ್ತಮ ಚಿಕಿತ್ಸೆ ಪಡೆಯಲು ರೋಗಿಗಳು ಮುಂದಾಗಬೇಕೆಂದರು.

ಈ ಸಂದರ್ಭದಲ್ಲಿ ಆಕ್ಸ್ಫರ್ಡ್ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಸೂಪರೆಡೆಂಟ್ ಡಾ. ಜಿ. ಮೋಹನ್, ಪ್ರಾಂಶುಪಾಲರಾದ ಡಾ. ಎಂ.ಬಿ. ಸಾಣೇಕೊಪ್ಪ ಹಾಗೂ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related