ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಶಾಸಕ

ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಶಾಸಕ

ಚಿಕ್ಕಮಗಳೂರು : ಕಳಸಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ಎದುರು ಕಳ್ಳಿಕೊಪ್ಪಲು ಗ್ರಾಮಸ್ಥರು ರೇಷನ್ ವಿಚಾರವಾಗಿ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಇಂದು ಶಾಸಕ ಸಿ.ಟಿ ರವಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ನಾನು ಅಕ್ಕಿ ಕೊಟ್ಟಿರಲಿಲ್ಲ, ನಾನು ಕೊಟ್ಟಿದ್ದು ಸಾಂಬಾರು ಪದಾರ್ಥ ವಸ್ತುಗಳು. ಗ್ರಾ.ಪಂ ನಿಮಗೆ ಅಕ್ಕಿ ನೀಡಿದ್ದಾರೆ. ಅವರು ಪೂರ್ಣ ಪ್ರಮಾಣದಲ್ಲಿ ನೀಡಿದರು. ಅಕ್ಕಿ, ಗೋಧಿ ನೀಡಲು ತಹಶೀಲ್ದಾರ್‌ಗೆ ಹೇಳಿದ್ದೇನೆ ಎಂದು ಭರವಸೆ ನೀಡಿದರು.

ಕಳ್ಳಿಕೊಪ್ಪಲು ಗ್ರಾಮದಲ್ಲಿ ಸೋಂಕಿಗೆ ತುತ್ತಾಗಿದ್ದ ಕುಟುಂಬಗಳು ನ್ಯಾಯಬೆಲೆ ಅಂಗಡಿಯಲ್ಲಿ ತಮಗೆ ಸರ್ಕಾರದ ರೇಷನ್ ನೀಡುತ್ತಿಲ್ಲ ಎಂದು ಆರೋಪಿಸಿ ಕಳಸಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ಎದುರು ಧರಣಿ ನಡೆಸಿದ್ದರು.

ಕಳ್ಳಿಕೊಪ್ಪಲು ಗ್ರಾಮದ 47 ಕುಟುಂಬದ 75 ಜನರಿಗೆ ಪಾಸಿಟಿವ್ ಬಂದಿತ್ತು. ಎಲ್ಲರಿಗೂ ಕ್ವಾರಂಟೈನ್ ಮಾಡಿ. ತಾಲೂಕು ಆಡಳಿತ ಕಿಟ್ ನೀಡಿತ್ತು. 10 ಕೆ.ಜಿ ಅಕ್ಕಿ, ಎಣ್ಣೆ, ಬೆಳೆ, ಉಪ್ಪು ಸೇರಿ ವಿವಿಧ ಸಾಮಾಗ್ರಿಗಳ ಕಿಟ್ ನೀಡಲಾಗಿತ್ತು.

Related