ಬೃಹತ್ ಉದ್ಯೋಗ ಮೇಳ

ಬೃಹತ್ ಉದ್ಯೋಗ ಮೇಳ

ಬೆಂಗಳೂರು: ವಿಜಯನಗರ ಕ್ಷೇತ್ರದಲ್ಲಿರುವ  ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಉದ್ಯೋಗ  ಆಯೋಜಿಸುವುದರಿಂದ  ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬಹುದು ಎಂದು ಉದ್ಯೋಗ ಮೇಳದ ಆಯೋಜಕರು ಬಿಜೆಪಿ ಹಿರಿಯ ಮುಖಂಡರಾದ ಎಚ್. ಆರ್. ರವೀಂದ್ರ ಹೇಳಿದರು.

ನಗರದ ವಿಜಯನಗರ ವಿಧಾನಸಭಾ ವ್ಯಾಪ್ತಿಯ ಹಂಪಿ ನಗರದ ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಎಚ್. ಆರ್. ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾಭ್ಯಾಸ ತಕ್ಕಂತೆ ಉದ್ಯೋಗ ಸಿಗದೆ   ಪರದಾಡುತ್ತಿರುತ್ತಾರೆ ಉದ್ಯೋಗ ಮೇಳ ಆಯೋಜನೆಯಿಂದ  ಪ್ರತಿಭೆಗೆ ತಕ್ಕಂತಹ ಕೆಲಸಗಳು ದೊರೆಯುವ ಅವಕಾಶ ಹೆಚ್ಚಿರುತ್ತದೆ  ಮಧ್ಯವರ್ತಿಗಳ ಹಾವಳಿ ಇಲ್ಲದೆ  ಕೆಲಸವನ್ನು ಪಡೆಯುವ  ಸದಾವಕಾಶವಾಗಿರುತ್ತದೆ ಎಂದರು.

200ಕ್ಕೂ ಹೆಚ್ಚು ಕಂಪನಿಗಳು ಒಂದೇ ಕಡೆ ಇರುವುದರಿಂದ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಒಂದು ಕಡೆ  ಉದ್ಯೋಗ ದೊರೆಯುತ್ತದೆ  ತಿಳಿಸಿದರು.

ಹತ್ತು ಸಾವಿರಕ್ಕೂ ಅಭ್ಯರ್ಥಿಗಳು ಭಾಗವಹಿಸಿದ್ದು ಸಾವಿರಾರು ಮಂದಿ  ಮೇಳದಲ್ಲಿಯೇ  ಉದ್ಯೋಗ  ಪಡೆದುಕೊಂಡಿದ್ದಾರೆ ಕ್ಷೇತ್ರದಲ್ಲಿ ಮೊದಲ ಪ್ರಯತ್ನ ಇದಾಗಿದ್ದು ಇನ್ನು ಮುಂದೆ ಜನೋಪಾಯವಾಗಿ ಕಾರ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ  ಆಯೋಜಿಸ ಲಾಗುವುದು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಅಶ್ವಿನ್  ಕುಮಾರ್, ಕ್ರಿಕೆಟ್ ಆಟಗಾರ ದೊಡ್ಡ ಗಣೇಶ್, ಬಿಬಿಎಂಪಿ ಮಾಜಿ ಸದಸ್ಯ ಡಾ:ರಾಜು, ಮಂಡಲ ಅಧ್ಯಕ್ಷ ಟಿ.ವಿ.ಕೃಷ್ಣ ಬಿಜೆಪಿ, ಮುಖಂಡ ವೆಂಕಟೇಶ್ ಬಾಬಿ, ಬಿಜೆಪಿ ಮುಖಂಡರು ಸಾರ್ವಜನಿಕರು ಭಾಗವಹಿಸಿದ್ದರು.

Related