ಬೆಂಗಳೂರು: ಕನ್ನಡ ಚಿತ್ರರಂಗದ ನಟ ಪುನೀತ್ ರಾಜಕುಮಾರ್ ಅವರ ಈಗಾಗಲೇ ನಮ್ಮನ್ನೆಲ್ಲ ಅಗಲಿ ವರ್ಷಗಳೇ ಕಳೆದರೂ ಕೂಡ ಅವರ ಮಾತು, ನಡೆ-ನುಡಿ, ಡ್ಯಾನ್ಸಸ್, ಸಿನಿಮಾಗಳು ನಮ್ಮ ಜೊತೆ ಇಂದಿಗೂ ಕೂಡ ಜೀವಂತವಾಗಿವೆ.
ಹೌದು, ಪುನೀತ್ ರಾಜಕುಮಾರ್ ಅವರು ಯಾರಿಗೂ ತಿಳಿಯದ ಹಾಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರ ಜೊತೆಗೆ ಎಷ್ಟೋ ಅನಾಥ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ.
ಇನ್ನು ಪುನೀತ್ ರಾಜಕುಮಾರ್ ಅವರಿಗೆ 50 ವರ್ಷವಾಗಿದ್ದು ನಿನ್ನೆ (ಸೋಮವಾರ ಮಾರ್ಚ್ 17) ರಂದು ಅವರ ಹುಟ್ಟುಹಬ್ಬವನ್ನು ಕರ್ನಾಟಕದ ಜನತೆ ಬಹಳ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
ಪುನೀತ್ ಅವರ ಹೆಸರಿನಲ್ಲಿ ಅವರ ಅಭಿಮಾನಿಗಳು ಅನ್ನದಾನ, ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ಇದನ್ನೂ ಓದಿ: ಇಂದು ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ
ಇನ್ನು ಪುನೀತ್ ರಾಜ್‌ಕುಮಾರ್ ರವರ ಬಯೋಗ್ರಫಿ ಬರೆಯಲಾಗಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಅಪ್ಪು ಜನ್ಮದಿನದಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಘೋಷಣೆ ಮಾಡಿದ್ದಾರೆ.
ಪುನೀತ್ ಎನ್ನುವುದಕ್ಕಿಂತ ಅಪ್ಪು ಎಂಬುದೇ ಹೆಚ್ಚು ಸೂಕ್ತ ಎನಿಸುತ್ತದೆ. ಈ ಕಾರಣಕ್ಕೆ ಫ್ಯಾನ್ಸ್ ಕೂಡ ಅವರನ್ನು ಅಪ್ಪು ಎಂದೇ ಕರೆಯುತ್ತಾರೆ. ಹೀಗಾಗಿ ‘ಅಪ್ಪು’ ಅನ್ನೋ ಹೆಸರಿನಲ್ಲೇ ಪುನೀತ್ ಬಯೋಗ್ರಫಿ ಬರೆಯಲಾಗಿದೆ. ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಒಟ್ಟಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ ಎನ್ನಲಾಗುತ್ತಿದೆ.