ಶಹಾಪುರ: ರೈತರು ಬೆಳೆದ ಬೆಳೆಗೆ ನಿರಂತರವಾಗಿ ನೀರು ಹರಿಸಲು ನಡೆಯುತ್ತಿರುವ ರೈತರ ಹೋರಾಟ ಮುಂದುವರೆದಿದ್ದು, ನ. 20 (ಶುಕ್ರವಾರ) ಸಂಪೂರ್ಣ ಶಹಾಪುರ ಬಂದ್ ಗೆ ರೈತ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ ಹಾಗೂ ಚೆನ್ನಪ್ಪ ಆನೆಗುಂದಿ ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿ, ನವೆಂಬರ್ 19ರಂದು ಮುಖ್ಯಮಂತ್ರಿಗಳು ಸಭೆ ಮಾಡಿ ರೈತರಿಗೆ ಸಿಹಿ ಸುದ್ದಿ ನೀಡುತ್ತಾರೆ ಎನ್ನುವ ಭರವಸೆ ರೈತರಲ್ಲಿ ಮೂಡಿತು.
ಆದರೆ ಈ ಭಾಗದ ಶಾಸಕರನ್ನು ಆಹ್ವಾನಿಸದೆ ನೀರು ಹರಿಸುವ ಕುರಿತು ಯಾವುದೇ ಸಭೆ ಮಾಡದೇ ನಿರಾಸೆ ಮೂಡಿಸಿದ್ದಾರೆ. ಗುರುವಾರ ನಡೆಯುವ ಸಭೆಯಲ್ಲಿ ರೈತರ ಬೆಳೆಗಳಿಗೆ ನೀರು ಸಿಗುತ್ತದೆ ಎನ್ನುವ ಆಶಾ ಭಾವನೆ ಮೂಡಿತ್ತು.
ಆದರೆ ರೈತ ವಿರೋಧಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಿರಂತರವಾಗಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಇದರಿಂದ ರೈತರ ಮೇಲಿನ ಅವರ ನಿಷ್ಕಾಳಜಿಗೆ ಸಾಕ್ಷಿಯಾಗಿದೆ.
ಮೈ ಕೊರೆಯುವ ಚಳಿಯಲ್ಲಿ ರೈತರು ಹಗಲು ರಾತ್ರಿ ಹೋರಾಟ ನಡೆಸುತ್ತಿರುವ ರೈತರ ಜೀವ ಸರ್ಕಾರದ ಲೆಕ್ಕಕ್ಕಿಲ್ಲ.
ಇದರಿಂದ ರೈತರ ಹೋರಾಟ ಇನ್ನಷ್ಟು ಬಿಗಿಗೊಳ್ಳಲಿದ್ದು ನಾಳೆ ಸಂಪೂರ್ಣ ಶಹಾಪುರ್ ಬಂದ್ ಕರೆ ನೀಡಲಾಗಿದೆ ಆದ್ದರಿಂದ ಎಲ್ಲ ಸಂಘಟನೆಯ ಮುಖಂಡರು ಪದಾಧಿಕಾರಿಗಳು ರೈತರು ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ.
