Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಹಿಳಾ ಉದ್ಯಮಿಗಳು ಕಲಿತು, ಸಂಪರ್ಕ ಬೆಳೆಸಿ-ಒಟ್ಟಾಗಿ ಬೆಳೆಯಬೇಕು: ಕೆ. ರತ್ನಪ್ರಭಾ
  • Bangalore
  • Politics
  • State

ಮಹಿಳಾ ಉದ್ಯಮಿಗಳು ಕಲಿತು, ಸಂಪರ್ಕ ಬೆಳೆಸಿ-ಒಟ್ಟಾಗಿ ಬೆಳೆಯಬೇಕು: ಕೆ. ರತ್ನಪ್ರಭಾ

Praja Vahini November 19, 2026 1 minute read
WhatsApp Image 2026-11-19 at 16.07.47
Spread the love

ಬೆಂಗಳೂರು: ಮಹಿಳಾ ಉದ್ಯಮಿಗಳು ಕೇವಲ ಉದ್ಯಮಗಳನ್ನು ಆರಂಭಿಸುವುದಕ್ಕೆ ಸೀಮಿತವಾಗದೆ, ಆರ್ಥಿಕವಾಗಿ ಸದೃಢವಾದ, ತಂತ್ರಜ್ಞಾನ ಆಧಾರಿತ ಮತ್ತು ಸುಸ್ಥಿರ ಉದ್ಯಮಗಳನ್ನು ಕಟ್ಟುವತ್ತ ಹೆಜ್ಜೆ ಹಾಕಬೇಕು. ಎಲ್ಲರೂ ಒಟ್ಟಾಗಿ ಬೆಳೆದಾಗ ಮಾತ್ರ ಇದು ಸಾಧ್ಯ ಎಂದು ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ (ಐಎಎಸ್) ಹಾಗೂ ಉಬುಂಟು ಮಹಿಳಾ ಉದ್ಯಮಿಗಳ ಸಂಘಟನೆಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಕೆ. ರತ್ನಪ್ರಭಾ ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನಾಚರಣೆಯ ಅಂಗವಾಗಿ ಇಂದು (ಗುರುವಾರ 19. ನ) ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಐಎಎಸ್ ಅಧಿಕಾರಿಗಳ ಸಂಘದಲ್ಲಿ ಸೊಲಾನಾ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಉಬುಂಟು ಸ್ಪ್ರಿಂಗ್ ಬೋರ್ಡ್: ಬ್ಲೂಪ್ರಿಂಟ್ ಫಾರ್ ಬಿಸಿನೆಸ್ ಗ್ರೋತ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಳಿಗ್ಗೆ 9:30 ರಿಂದ ಸಂಜೆ 4 :00 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿಗಳು, ಉದ್ಯಮ ನಾಯಕರು, ವೃತ್ತಿಪರರು ಹಾಗೂ ಹಣಕಾಸು ಮತ್ತು ಸ್ಟಾರ್ಟ್ಅಪ್ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರತ್ನಪ್ರಭಾ ಅವರು, ಈ ಉಪಕ್ರಮವು ಕೇವಲ ಸಾಂಪ್ರದಾಯಿಕ ಸಂಪರ್ಕ (ನೆಟ್‌ವರ್ಕಿಂಗ್) ಕಾರ್ಯಕ್ರಮಕ್ಕಿಂತ ಭಿನ್ನವಾಗಿದೆ. ಮಹಿಳಾ ಉದ್ಯಮಿಗಳು ಪರಸ್ಪರ ಕಲಿಯಲು, ಅರ್ಥಪೂರ್ಣ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಮತ್ತು ತಮ್ಮ ಉದ್ಯಮಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಬಣ್ಣಿಸಿದರು.

ಮಹಿಳಾ ಉದ್ಯಮಿಗಳ ಪಯಣವನ್ನು ಸ್ಮರಿಸಿದ ಅವರು, ಒಂದೇ ಒಂದು ಯಂತ್ರ, ಒಂದು ಕಲ್ಪನೆ ಮತ್ತು ಸಣ್ಣ ಕೊಠಡಿಯಿಂದ ಉದ್ಯಮ ಆರಂಭಿಸಿ ದೊಡ್ಡ ಕಂಪನಿ ಕಟ್ಟುವ ಕನಸು ಕಾಣುವ ಮಹಿಳೆಯರ ಕುರಿತು ಮಾತನಾಡಿದರು. ಬೆಲೆ ನಿಗದಿ ಮತ್ತು ಮಾತುಕತೆಯಲ್ಲಿ (ನೆಗೋಷಿಯೇಷನ್) ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು, ಕೃತಕ ಬುದ್ಧಿಮತ್ತೆ ಅಳವಡಿಸಿಕೊಳ್ಳುವುದು, ಲಾಭ-ನಷ್ಟದ ಲೆಕ್ಕಾಚಾರಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಹಣಕಾಸಿನ ನೆರವು ಪಡೆದುಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಇದರೊಂದಿಗೆ ಪ್ರತಿಯೊಬ್ಬರೂ ತಮ್ಮ ಉದ್ಯಮದ ಮೌಲ್ಯವನ್ನು ಗುರುತಿಸಿಕೊಳ್ಳಬೇಕು ಎಂದರು.

ಎಲ್ಲರಿಂದ ನಾವು ಎಂಬ ಉಬುಂಟು ತತ್ವ

ಒಕ್ಕೂಟದ ತತ್ವಶಾಸ್ತ್ರವನ್ನು ವಿವರಿಸಿದ ಅವರು, ‘ಉಬುಂಟು’ ಎಂದರೆ “ನಾವಿರುವುದರಿಂದ ನಾನಿದ್ದೇನೆ” (ಎಲ್ಲರಿಂದ ನಾವು) ಎಂಬ ನಂಬಿಕೆಯಾಗಿದೆ. ಅಂದರೆ ವೈಯಕ್ತಿಕ ಪ್ರಗತಿಯು ಸಾಮೂಹಿಕ ಬೆಂಬಲದಿAದ ಮತ್ತಷ್ಟು ಬಲಗೊಳ್ಳುತ್ತದೆ. ಮಹಿಳೆಯರು ಉದ್ಯಮಶೀಲತೆಯಲ್ಲಿ ಏಕಾಂಗಿಯಾಗಿ ಹೋರಾಡಬಾರದು ಎಂಬ ಉದ್ದೇಶದಿಂದಲೇ ಈ ತತ್ವದಡಿ ‘ಸ್ಪ್ರಿಂಗ್ ಬೋರ್ಡ್’ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಪ್ರಾದೇಶಿಕ ಕಚೇರಿಯ ಸಿಡ್ಬಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಲ್. ಆರ್. ನಾರಾಯಣ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪ್ರಿಂಗ್ ಬೋರ್ಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಐಐಎಂ ಬೆಂಗಳೂರಿನ ಎನ್‌ಎಸ್‌ಆರ್‌ಸಿಇಎಲ್ (NSRCEL) ಸಿಇಒ ಶ್ರೀಮತಿ ರಸಿಕಾ ಪ್ರಶಾಂತ್ ಗೌರವ ಅತಿಥಿಯಾಗಿದ್ದರು. ಚಾರ್ಟರ್ಡ್ ಅಕೌಂಟೆಂಟ್, ಆಡಿಟರ್, ಏಂಜೆಲ್ ಇನ್ವೆಸ್ಟರ್ ಹಾಗೂ ಉದ್ಯಮಿ ಶ್ರೀಮತಿ ಪೂರ್ಣಿಮಾ ಬೆಳ್ಳೂರು ಅವರು ಸಹಯೋಗ ಮತ್ತು ಸಾಮೂಹಿಕ ಪ್ರಗತಿಯ ಕುರಿತು “ಒಟ್ಟಾಗಿ ಬೆಳೆಯುವುದು” ಎಂಬ ವಿಷಯದ ಮೇಲೆ ಮುಖ್ಯ ಭಾಷಣ ಮಾಡಿದರು. ಸೊಲಾನಾ ಫೌಂಡೇಶನ್ ಸಂಸ್ಥಾಪಕಿ ಶ್ರೀಮತಿ ಆಶಾ ಅರೋಂದೇಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ಐಐಎಂ ಬೆಂಗಳೂರಿನ ಎನ್‌ಎಸ್‌ಆರ್‌ಸಿಇಎಲ್ ಕಾರ್ಯಕ್ರಮ ವ್ಯವಸ್ಥಾಪಕ ಶ್ರೀ ವಿಶಾಲ್ ಎಸ್. ಪ್ರಮುಖ ಭಾಷಣಕಾರರಲ್ಲಿ ಒಬ್ಬರಾಗಿದ್ದರು.

ರತ್ನಪ್ರಭಾ ಅವರು ರೂಪಿಸಿದ ಚೌಕಟ್ಟಿನಡಿ, ಬ್ರ‍್ಯಾಂಡ್ ಸ್ಥಾನೀಕರಣ (ಬ್ರ‍್ಯಾಂಡ್ ಪೊಸಿಷನಿಂಗ್), ಸಂಧಾನ ಕಲೆ, ಸಂವಹನ, ಮಾರುಕಟ್ಟೆ ಮತ್ತು ಮಾರಾಟ ಹಾಗೂ ಗ್ರಾಹಕ ಬ್ರ‍್ಯಾಂಡ್‌ನ ಲಾಭ-ನಷ್ಟ ನಿರ್ವಹಣೆಯ ಕುರಿತು ವಿಶೇಷ ಗೋಷ್ಠಿಗಳು ನಡೆದವು. “ಹರ್ ಮನಿ” ಸಂವಾದ ಗೋಷ್ಠಿಯಲ್ಲಿ ಹಣ ಗಳಿಕೆ, ನಿರ್ವಹಣೆ ಮತ್ತು ವೆಚ್ಚದ ಕುರಿತು ಚರ್ಚಿಸಲಾಯಿತು. ದಿನದ ಕೊನೆಯಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಕೃತಕ ಬುದ್ಧಿಮತ್ತೆ ಮತ್ತು ಹಣಕಾಸು ನಿರ್ವಹಣೆಯ ಕುರಿತ ಗೋಷ್ಠಿಗಳು ಜರುಗಿದವು. ಎಐ ಮತ್ತು ಹಣಕಾಸು ನಿರ್ವಹಣೆಯು ಮಹಿಳಾ ನೇತೃತ್ವದ ಉದ್ಯಮಗಳ ಭವಿಷ್ಯವನ್ನು ನಿರ್ಧರಿಸುವ ಎರಡು ಪ್ರಮುಖ ಸಾಧನಗಳಾಗಿವೆ ಎಂದು ರತ್ನಪ್ರಭಾ ಬಣ್ಣಿಸಿದರು.

ವಿವಿಧ ನಗರಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಸಂಪರ್ಕ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದ ಅವರು, ಪ್ರತಿಯೊಂದು ಚಹಾ ವಿರಾಮ, ಭೋಜನದ ಸಂಭಾಷಣೆ ಮತ್ತು ಪ್ರಶ್ನೋತ್ತರ ಅವಧಿಯೂ ಹೊಸ ಸಂಪರ್ಕಕ್ಕೆ ವೇದಿಕೆಯಾಗಿದೆ. ನಿಮ್ಮ ಪಕ್ಕದಲ್ಲೇ ಕುಳಿತಿರುವವರು ನಿಮ್ಮ ಭವಿಷ್ಯದ ಗ್ರಾಹಕರು, ಮಾರ್ಗದರ್ಶಕರು ಅಥವಾ ಸಹಭಾಗಿಗಳಾಗಿರಬಹುದು ಎಂದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸಿಡ್ಬಿ, ಎನ್‌ಎಸ್‌ಆರ್‌ಸಿಇಎಲ್ ಹಾಗೂ ಸಮಯ ನೀಡಿದ ಭಾಷಣಕಾರರು ಮತ್ತು ಸಂವಾದಕರಿಗೆ ಅವರು ಧನ್ಯವಾದ ಅರ್ಪಿಸಿದರು.

ಸಿಡ್ಬಿ ಮತ್ತು ಐಐಎಂ ಬೆಂಗಳೂರಿನ ಎನ್‌ಎಸ್‌ಆರ್‌ಸಿಇಎಲ್ ಸಂಸ್ಥೆಗಳ ಭಾಗವಹಿಸುವಿಕೆಯು, ಮಹಿಳಾ ಉದ್ಯಮಿಗಳು ಸವಾಲುಗಳನ್ನು ಮೆಟ್ಟಿನಿಂತು ತಮ್ಮ ಉದ್ಯಮಗಳನ್ನು ವಿಸ್ತರಿಸಲು ಸಾಂಸ್ಥಿಕ ಬೆಂಬಲ, ಮಾರ್ಗದರ್ಶನ ಮತ್ತು ಹಣಕಾಸಿನ ಲಭ್ಯತೆಯ ಮಹತ್ವವನ್ನು ಎತ್ತಿ ತೋರಿಸಿತು.

ಉಬುಂಟು ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಕೆ. ರತ್ನಪ್ರಭಾ, ಉಬುಂಟು ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಬಾಲಕೃಷ್ಣನ್, ಸಿಡ್ಬಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀ ಎಲ್. ಆರ್. ನಾರಾಯಣ, ಎನ್‌ಎಸ್‌ಆರ್‌ಸಿಇಎಲ್ ಸಿಇಒ ಶ್ರೀಮತಿ ರಸಿಕಾ ಪ್ರಶಾಂತ್, ಕಾರ್ಯಕ್ರಮ ವ್ಯವಸ್ಥಾಪಕ ಶ್ರೀ ವಿಶಾಲ್ ಎಸ್., ಶ್ರೀಮತಿ ಪೂರ್ಣಿಮಾ ಬೆಳ್ಳೂರು ಹಾಗೂ ಸೊಲಾನಾ ಫೌಂಡೇಶನ್ ಸಂಸ್ಥಾಪಕಿ ಶ್ರೀಮತಿ ಆಶಾ ಅರೋಂದೇಕರ್ ಉಪಸ್ಥಿತರಿದ್ದರು.

ಸಂವಾದಕರಾಗಿ ಬೆಂಗಳೂರಿನ ವಿಮೂರ್ ಫೌಂಡೇಶನ್ ಸಂಸ್ಥಾಪಕಿ ಶ್ರೀಮತಿ ಪವಿತ್ರಾ ಮುದ್ದಯ್ಯ, ಪುದುಚೇರಿಯ ಸಾಮಾಜಿಕ ಉದ್ಯಮಿ ಮತ್ತು ಮಾಧ್ಯಮ ವೃತ್ತಿಪರರಾದ ಶ್ರೀಮತಿ ಸೂರ್ಯ ದಿನಕರ್, ಕೇರಳದ ‘ಹರ್ ಮನಿ ಟಾಕ್ಸ್’ ಸಂಸ್ಥಾಪಕಿ ಹಾಗೂ ಸಿಇಒ ಶ್ರೀಮತಿ ನಿಸರಿ ಮಹೇಶ್ ಮತ್ತು ಬೆಂಗಳೂರಿನ ‘ಮಾರ್ಗ್’ ಸಂಸ್ಥೆಯ ಸಿಇಒ ಹಾಗೂ ಸಹ-ಸಂಸ್ಥಾಪಕಿ ಶ್ರೀಮತಿ ಸುದೇಶ್ನಾ ಬಸು ಪಾಲ್ಗೊಂಡಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಕುಲ್ಗಾಂವ್ ಎನ್‌ಕೌಂಟರ್‌ನಲ್ಲಿ ಲಷ್ಕರ್ ಉಗ್ರ ಲತೀಫ್ ಭಟ್ ಹತ್ಯೆ
Next: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸಿದ್ದು

Views:

3

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.