Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಅಂಗವಿಕಲ ವ್ಯಕ್ತಿಯಿಂದ ಅಂಗವಿಕಲನ ಕುಟುಂಬಕ್ಕೆ ಸೂರಿನ ಆಸರೆ
  • State
  • ಶಹಾಪುರ

ಅಂಗವಿಕಲ ವ್ಯಕ್ತಿಯಿಂದ ಅಂಗವಿಕಲನ ಕುಟುಂಬಕ್ಕೆ ಸೂರಿನ ಆಸರೆ

Praja Vahini November 3, 2026 1 minute read
WhatsApp Image 2026-11-03 at 16.47.34
Spread the love

ಗಂಗನಾಳ ಗ್ರಾಮದಲ್ಲಿ ಮಾದರಿಯ ಸಾರ್ಥಕ ಹುಟ್ಟುಹಬ್ಬ ಆಚರಣೆ

ಶಹಾಪುರ: ಹುಟ್ಟುಹಬ್ಬಕ್ಕೆ ಅನಗತ್ಯವಾಗಿ ಪಾರ್ಟಿ, ಕೇಕ್ ಕತ್ತರಿಸುವುದು ಮತ್ತು ಅದ್ಧೂರಿ ಆಚರಣೆಗಳಿಗೆ ಹಣ ವ್ಯಯಿಸುವ ಬದಲು ಆಶ್ರಯವಿಲ್ಲದ ಬಡ ಕುಟುಂಬಕ್ಕೆ ಉಚಿತವಾಗಿ ಮನೆ ನಿರ್ಮಾಣಕ್ಕೆ ದೇಣಿಗೆ ನೀಡಿರುವ ವ್ಯಕ್ತಿ ಅಂಗವಿಕಲ ಎನ್ನುವ ಅಚ್ಚರಿಯ ಜೊತೆಗೆ ಅವರ ಕೆಲಸ ಇಡೀ ಜಿಲ್ಲೆಯಲ್ಲಿಯೇ ಮಾದರಿಯಾಗಿದ್ದು ಎಲ್ಲೇಡೆ ಶ್ಲಾಘನೀಯ ಮಹಾಪೂರ ವ್ಯಕ್ತಪಡಿಸುತ್ತಿದ್ದಾರೆ.

ತಾಲೂಕಿನ ಗಂಗನಾಳ ಗ್ರಾಮದ ಭೀಮನಗೌಡ ತಂದೆ ಮಲ್ಲಿಕಾರ್ಜುನಗೌಡ ಅವರೇ ತನ್ನ ಹುಟ್ಟುರಿನಲ್ಲಿ ನೇಲೆಸಿರುವ ಅಂಗವಿಕಲ ಬಡ ಕುಟುಂಬಕ್ಕೆ ಸೂರಿಗಾಗಿ ದೇಣಿಗೆ ನೀಡಿದ್ದಾರೆ. ಇವರ ಸಾರ್ಥಕ ಕಾರ್ಯವನ್ನು ಮೆಚ್ಚಿ ಸಂಗಡಿಗರು ಸಹ ಕೈಲಾದಷ್ಟು ಸಹಾಯ ಮಾಡಿದ್ದಾರೆ.

ಹುಟ್ಟು ಅಂಗವಿಕಲನಾಗಿ ತಾನು ದುಡಿದಿದ್ದರಲ್ಲೇ ಸಾರ್ಥಕ ಬದುಕು ಕಟ್ಟಿಕೊಂಡಿರುವ ಇವರು ಆ ಬಡ ಕುಟುಂಬದ ನೋವನ್ನು ಕಣ್ಣಾರೆ ಕಂಡಿದ್ದು ಸೂರು ಕಟ್ಟಿಸಿಕೊಡಲು ಮುಂದೆ ಬಂದಿದ್ದಾರೆ. ಹಾಗೂ ಕುಟುಂಬದ ದುಃಖವನ್ನು ಅರಿತುಕೊಂಡಿರುವ ಅವರು ಹುಟ್ಟು ಹಬ್ಬದ ನೆಪದಲ್ಲಿ ಅನವಶ್ಯಕ ದುಂದು ವೆಚ್ಚವನ್ನು ಕಡಿಮೆಮಾಡಿ ಅದೇ ಹಣವನ್ನು ಬಡವರಿಗೂ, ಅನಾಥಶ್ರಮಕ್ಕೊ ದಾನವಾಗಿ ನೀಡಿದರೆ ಎಷ್ಟೋ ಮಕ್ಕಳ ಒಡಲು ತುಂಬುವAತಾದರೆ ಒಳ್ಳೆಯದಲ್ಲವೇ ಎನ್ನುವ ಅಭಿಪ್ರಾಯ ಅವರ ಮನಸ್ಸಿನಲ್ಲಿದೆ.

ಇದರಿಂದ ಜನರ ಶುಭಹಾರೈಕೆಯ ಪ್ರೀತಿ ಪಡೆಯುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಸಾರುವ ಕೆಲಸ ಮಾಡುವುದು ಸರಿಯಾದ ವಿಧಾನ ಎಂಬ ಭಾವನೆಯನ್ನು ಹೊಂದಿದ್ದಾರೆ.

ಹುಟ್ಟುಹಬ್ಬಗಳು ಸರಳತೆ, ಮಾನವೀಯ ಮೌಲ್ಯ ಸಂಸ್ಕಾರಯುತವಾಗಿ ಯಾವ ಆಚರಣೆಗಳು ನಡೆದರೂ ಅವುಗಳಿಗೆ ಗೌರವಿರುತ್ತದೆ. ಆಚರಣೆಗಳಲ್ಲಿ ಮನಸ್ಸಿರಬೇಕು, ಸಾಮರಸ್ಯವಿರಬೇಕು. ಅಂದಾಗಲೇ ಹುಟ್ಟು ಹಬ್ಬಕ್ಕೊಂದು ಗೌರವ ಸ್ವಾರ್ಥವಾಗಲಿದೆ ಎನ್ನುವ ಆಶಯ ಅವರಲ್ಲಿದ್ದು, ಬಡ ಕುಟುಂಬಕ್ಕೆ ವಾಸಿಸಲು ಮನೆ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷ ಯಮನಪ್ಪ ಆಗಸ್ಥಾಳ, ತಾಲೂಕ ಅಧ್ಯಕ್ಷ ಸಂಗಣ್ಣ ದೊಡ್ಮನಿ, ಬಸವರಾಜ ನಾಟೇಕರ, ಸಣ್ಣ ಸೈದಪ್ಪ ಬಾಣತಿಹಾಳ, ಗುರು ಬಾಣತಿಹಾಳ, ಸಿದ್ದಣ್ಣ ಕಿಲಾರಿ, ಸಿದ್ರಾಮ ಸಾಹುಕಾರ ಕಾವಲಿ, ಹೊನ್ನಪ್ಪ ಗಂಗನಾಳ, ಪವನ್‌ಕುಮಾರ ಶಿಂಧೆ, ಅಶೋಕ ಡಿಚ್ಚಿ, ಚಂದ್ರಶೇಖರ ಯಾದಗಿರಿ, ಶಾಂತಗೌಡ ನಾಗನಟಿಗಿ, ಮಲ್ಲಣಗೌಡ ತಿಪ್ಪನಹಳ್ಳಿ, ತಿರುಪತಿಗೌಡ ಬಾಣತಿಹಾಳ, ಭೀಮನಗೌಡ ದರಿಯಾಪುರ, ಭೀಮಾಶಂಕರ ಹುಲ್ಕಲ್, ಬೀಮರಾಯ ಜುನ್ನಾ, ಸಂಗನಗೌಡ, ಸಿದ್ದು ಮುಂಡಾಸ, ದೇವಿಂದ್ರಪ್ಪ ಮೇಟಿ, ಅಯ್ಯಪ್ಪ ಮುಂಡಾಸ, ಶರಣು ಸಗರ, ಮಹಾದೇವಪ್ಪ, ಭೀಮನಗೌಡ, ಮಹೇಶ ರಸ್ತಾಪುರ, ಹಣಮಂತ್ರಾಯಗೌಡ, ಬಾಪುಗೌಡ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಇದ್ದರು,

ಪ್ರತಿಯೊಬ್ಬರು ದುಂದುವೆಚ್ಚ ಮಾಡದೇ ಸಾರ್ಥಕ ಹುಟ್ಟುಹಬ್ಬ ಆಚರಿಸಿಕೊಳ್ಳಿ

ಆಡಂಭರ, ಡಂಭಾಚಾರಕ್ಕೆ ಮನಸೋಲದೇ ಪ್ರೀತಿ ವಿಶ್ವಾಸ, ಪರಸ್ಪರ ಗೌರವಕ್ಕೆ ಬೆಲೆಕೊಟ್ಟು ಒಗ್ಗಾಟ್ಟಾಗಿ ಚೆನ್ನಾಗಿರಬೇಕು. ಇತರರೂ ಚೆನ್ನಾಗಿರಲು ಎಂಬ ಭಾವ ನಮ್ಮಲ್ಲಿ ಮೂಡುವಂತೆ ಬಾಳೋಣ, ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳೋಣ ಮತ್ತು ಜನುಮ ದಿನದ ಶೂಭ ಸಮಯದಲ್ಲಿ ನಮ್ಮನ್ನು ಪರರು ನೆನಪಿಸಿಕೊಳ್ಳುವಂತೆ ಉತ್ತಮ ಕಾರ್ಯಗಳನ್ನು ಮಾಡಿ ಹುಟ್ಟಿದ ದಿನದ ಸಾರ್ಥಕತೆಯನ್ನು ಪಡೆಯೋಣ. ಸರಳತೆ ಹಾಗೂ ಉದಾತ್ತ ಚಿಂತನೆಗಳು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯೋಣ. ಪ್ರತಿಯೊಬ್ಬರು ದುಂದುವೆಚ್ಚ ಮಾಡದೇ ಸಾರ್ಥಕ ಹುಟ್ಟುಹಬ್ಬ ಆಚರಿಸಿಕೊಳ್ಳಿ  ಎಂದು ಭೀಮನಗೌಡ ಗಂಗನಾಳ. ದಾನಿಗಳು ಹೇಳಿದರು.

About the Author

Praja Vahini

Editor

View All Posts

Spread the love

Post navigation

Previous: ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ
Next: ಮೈಸೂರಿನಲ್ಲಿ ಬೃಹತ್ ಅಹಿಂದ ಸಮಾವೇಶಕ್ಕೆ ಪ್ಲ್ಯಾನ್!

Views:

143

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.