Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾಗಿ ಶಿಲ್ಪಾ ನಾಗ್ ಅಧಿಕಾರ ಸ್ವೀಕಾರ
  • Bangalore
  • Front news
  • Politics
  • State

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾಗಿ ಶಿಲ್ಪಾ ನಾಗ್ ಅಧಿಕಾರ ಸ್ವೀಕಾರ

Praja Vahini October 31, 2026 1 minute read
6c51d370-e8de-4766-86f5-a1dc959c0fbd
Spread the love

ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ನೂತನ ಆಯುಕ್ತರಾಗಿ ಶ್ರೀಮತಿ ಶಿಲ್ಪಾ ನಾಗ್ ಸಿ.ಟಿ., ಐಎಎಸ್ ರವರು ಇಂದು ಅಧಿಕಾರ ಸ್ವೀಕರಿಸಿದರು.

ಸ್ಥಾನಾಂತರಗೊಂಡ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ., ಐಎಎಸ್ ರವರು ಅಧಿಕಾರ ಹಸ್ತಾಂತರಿಸಿ ಶುಭಹಾರೈಸಿದರು.

ಡಾ. ರಾಜೇಂದ್ರ ಕೆ.ವಿ.ರವರು ಕೇಂದ್ರ ಸರ್ಕಾರದ ನಿಯೋಜನೆ (Central Deputation) ಮೇರೆಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಶಿಲ್ಪಾ ನಾಗ್ ಅವರು ನೂತನ ಆಯುಕ್ತರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಡಾ. ರಾಜೇಂದ್ರ ಕೆ.ವಿ.ರವರು, ನೂತನ ಆಯುಕ್ತರಿಗೆ ಪಾಲಿಕೆಯ ಗುರಿ, ಕೆಲಸಗಳ ಪ್ರಗತಿ ಹಾಗೂ ಸವಾಲುಗಳ ಕುರಿತಂತೆ ವಿವರಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಲಿರುವ ʼವಾರ್ಡ್ ಒನ್ʼ ಅಭಿಯಾನ, ಇ-ಖಾತಾ ಓಪನ್‌ ಹೌಸ್‌ ಕಾರ್ಯಕ್ರಮ ಸೇರಿದಂತೆ ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ಅಭಿಯಾನ, ಸಿಎಂಐಡಿಪಿ, ಸಿಎಸ್ಎಸ್ಐಪಿ ಕಾಮಗಾರಿಗಳು, ಜಂಕ್ಷನ್ ಅಭಿವೃದ್ಧಿ ಉಪಕ್ರಮ ಮತ್ತಿತರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಒಳನೋಟ ನೀಡಿದರು.

ಕಾಮಗಾರಿ ವಿಭಾಗ, ಕಂದಾಯ, ತೋಟಗಾರಿಕೆ, ಆರೋಗ್ಯ, ವಿದ್ಯುತ್, ಅರಣ್ಯ, ಪಶುಪಾಲನೆ, ಕಲ್ಯಾಣ, ಘನತ್ಯಾಜ್ಯ ನಿರ್ವಹಣೆ, ಕೆರೆ, ವಿಶೇಷ ವಿಭಾಗ, ಜಾಹೀರಾತು, ಎಸ್ಟೇಟ್, ಮಾರುಕಟ್ಟೆ, ಟಿವಿಸಿಸಿ, ಟೌನ್ ವೆಂಡಿಂಗ್ ಸೇರಿದಂತೆ ಪಾಲಿಕೆಯ ಎಲ್ಲ ವಿಭಾಗಗಳು ಹಾಗೂ ಮುಖ್ಯಸ್ಥರನ್ನು ಪರಿಚಯಿಸಿ, ವಿಭಾಗಗಳ ಕೆಲಸ ಕಾರ್ಯಗಳು ಹಾಗೂ ಸಾಧಕ-ಬಾಧಕ ಕುರಿತಂತೆ ನೂತನ ಆಯುಕ್ತರ ಗಮನಕ್ಕೆ ತರಲಾಯಿತು.

ನೂತನ ಆಯುಕ್ತರು ಮಾತನಾಡಿ, ಪಾಲಿಕೆಯ ಗುರಿ ಮತ್ತು ಸವಾಲುಗಳ ಕುರಿತಂತೆ ಮಾರ್ಗದರ್ಶನಕ್ಕಾಗಿ ನಿರ್ಗಮಿತ ಆಯುಕ್ತರಿಗೆ ಕೃತಜ್ಞತೆ ತಿಳಿಸಿದರು. “ಸವಾಲುಗಳಿದ್ದಲ್ಲಿ ಕೆಲಸ ಮಾಡಲು ಹುಮ್ಮಸ್ಸು ದೊರೆಯುತ್ತದೆ. ಪಾಲಿಕೆಯ ಅಭಿವೃದ್ಧಿಗೆ ಆಯುಕ್ತರು ಅಡಿಗಲ್ಲು ಹಾಕಿದ್ದು, ಮುಂದುವರಿಯಲು ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದು, ಸಂತೋಷ ತಂದಿದೆ. ಅಭಿವೃದ್ಧಿಯತ್ತ ಸಾಗುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ತಂಡವಾಗಿ ಕೆಲಸ ಮಾಡೋಣ” ಎಂದರು.

ಶ್ವಾನಗಳ ಮೈಕ್ರೋ ಚಿಪ್ಪಿಂಗ್ ಕಾರ್ಯಕ್ರಮವನ್ನು ಪೈಲೆಟ್ ಆಗಿ ಆರಂಭಿಸುವಂತೆ ಹಾಗೂ ಕಲ್ಯಾಣ ವಿಭಾಗಕ್ಕೆ ಸಂಬಂಧಿಸಿದಂತೆ ಡೇಟಾ ಎಂಟ್ರಿ ಕೆಲಸವನ್ನು ಶೀಘ್ರವಾಗಿ ಮುಗಿಸುವಂತೆ ನೂತನ ಆಯುಕ್ತರು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಅಪರ ಆಯುಕ್ತರಾದ ಕವಿತಾ ರಾಜಾರಾಂ, ಉಪ ಆಯುಕ್ತರಾದ ಸೈಯದಾ ಆಫ್ರೀನ್‌ ಬಾನು ಎಸ್. ಬಳ್ಳಾರಿ, ವಲಯ ಜಂಟಿ ಆಯುಕ್ತರಾದ ಎಂ.ಎಸ್‌.ಎನ್. ಬಾಬು ಮತ್ತು ಡಾ. ರಶ್ಮಿ ಎಂ.ಕೆ., ಮುಖ್ಯ ಅಭಿಯಂತರರು, ವಿಭಾಗ ಮುಖ್ಯಸ್ಥರುಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಆಧುನಿಕ ತಂತ್ರಜ್ಞಾನ ಬಳಕೆಗೆ ಸಚಿವ ಟಿ ರಘುಮೂರ್ತಿ ಕರೆ
Next: ಬೆಂಗಳೂರಿನಲ್ಲಿ ಇಂದಿನಿಂದ BREDAI Property Expo 2026 ಆರಂಭ

Views:

11

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.