ತುಮಕೂರು: ವಿಧಾನ ಪರಿಷತ್ ಚುನಾವಣೆಯ ನಾಲ್ಕೂಕ್ಷೇತ್ರಗಳ ಫಲಿತಾಂಶ ಕಾಂಗ್ರೆಸ್ಗೆ ನಿರಾಸೆ ಮೂಡಿಸಿದೆಎಂದು ಮಾಜಿ ಸಚಿವಕೆಎನ್ ರಾಜಣ್ಣ ಹೇಳಿದ್ದಾರೆ.ಚುನಾವಣಾ ವ್ಯಾಪ್ತಿಯ 35 ವಿಧಾನಸಭಾ ಕ್ಷೇತ್ರಗಳಪೈಕಿ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂಸೋಲುಅನುಭವಿಸಿರುವುದು ವಿಪರ್ಯಾಸ. ಪಕ್ಷದವರೇ ಸರಿಯಾಗಿಕೆಲಸ ಮಾಡದಿರುವುದು ಸೋಲಿಗೆ ಪ್ರಮುಖ ಕಾರಣ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಪಕ್ಷದಲ್ಲಿ ಸೈಡ್ಲೈನ್ ಮಾಡಿದ್ದರಿಂದಕಾಂಗ್ರೆಸ್ ಸೋಲು ಕಂಡಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರಾಜಣ್ಣ,ಸಿದ್ದರಾಮಯ್ಯ ಕಾಂಗ್ರೆಸ್ನ ಆಸ್ತಿ ಎಂದುಹೇಳಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯತ್ ಮತ್ತುತಾಲೂಕು ಪಂಚಾಯತ್ಚುನಾವಣೆಗಳಲ್ಲಿ ಎಲ್ಲವೂಸ್ಪಷ್ಟವಾಗಲಿದೆ ಎಂದಿದ್ದಾರೆ.
ಇಂದಿನ ರಾಜಕೀಯ ಬಹಳ ವೇಗವಾಗಿ ಬದಲಾಗುತ್ತಿದೆ.ಜನರು ಕ್ಷಣಾರ್ಧದಲ್ಲಿ ಮಾಹಿತಿಯನ್ನು ಪಡೆದುಕೊಂಡುತಮ್ಮ ನಿರ್ಧಾರಗಳನ್ನುತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಎನ್ ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.
