Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಯೂಜಿಡಿಯಿಂದಾಗಿ ದಿಬ್ಬಗಂಳಾಂತದ ರಸ್ತೆಗಳು; ಕೇಸರುಮಯ ರಸ್ತೆಯಲ್ಲೇ ನಿತ್ಯ ಸಂಚಾರ
  • State
  • ಶಹಾಪುರ

ಯೂಜಿಡಿಯಿಂದಾಗಿ ದಿಬ್ಬಗಂಳಾಂತದ ರಸ್ತೆಗಳು; ಕೇಸರುಮಯ ರಸ್ತೆಯಲ್ಲೇ ನಿತ್ಯ ಸಂಚಾರ

Praja Vahini September 24, 2026 1 minute read
WhatsApp Image 2026-09-24 at 17.04.01
Spread the love

ಶಹಾಪುರ: ಶಹಾಪುರ ನಗರದಲ್ಲಿ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆಗೆ ಯುಜಿಡಿಗಾಗಿ ತೊಡಿ ಬಿಟ್ಟ ಗುಂಡಿ ಮತ್ತು ರಸ್ತೆಗೆ ಹಾಕಿರುವ ಮಣ್ಣಿನಿಂದ ರಸ್ತೆಯಲ್ಲಾ ಕೆಸರು ಗದ್ದೆಯಾಗಿದ್ದು, ಸಾರ್ವಜನಿಕರು ಓಡಾಡಲು ಬಾರದ ಸ್ಥೀತಿ ತಲುಪಿದ್ದು ಸಾರ್ವಜನಿಕರು ಕಾಮಗಾರಿ ಮಾಡಿದ ಗುತ್ತಿಗೆದಾರ ಮತ್ತು ನಗರಸಭೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ನಗರದ ವಾರ್ಡ್ ನಂ.2ರ ವಿದ್ಯಾರಣ್ಯ ಶಾಲೆಯ ಹತ್ತೀರ ಈಗಾಗಲೇ ಯೂಜಿಡಿಗಾಗಿ ನೆಲ ಅಗೆದು ರಸ್ತೆಯಲ್ಲಾ ಗುಂಡಿ ಮಯ ಮಾಡಿದ್ದು, ತಗ್ಗು ದಿನ್ನೆಗಳಿಂದ ಕೂಡಿದ ರಸ್ತೆಗಳ ಮೇಲೆ ಓಡಾಡುವ ಜನರ ಪ್ರಾಣಸಂಕಟ ಕೇಳುವವರಿಲ್ಲದಾಗಿದೆ. ಸುಮಾರು ತಿಂಗಳುಗಳಿಂದ ಈ ಕಾಮಗಾರಿ ನಡೆಯುತ್ತಿದೆ. ಆದರೆ ಇರುವ ಉತ್ತಮ ರಸ್ತೆಗಳನ್ನು ಒಡೆದು ಹಾಳು ಮಾಡಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರ ಕೂಡ ಹಲವೇಡೆಗಳಲ್ಲಿ ಸಾಧ್ಯವಿಲ್ಲದಂತಾಗಿದೆ. ಉತ್ತಮ ಸ್ಥೀತಿಯಲ್ಲಿದ್ದ ಕಾಂಕ್ರೀಟ್ ರಸ್ತೆಗಳನ್ನು ಜೆಸಿಬಿ ಮೂಲಕ ಅಗೆದು ಅದೇ ರೀತಿ ಬಿಟ್ಟಿದ್ದಾರೆ. ಅದನ್ನು ಮುಚ್ಚುವ ಕೆಲಸ ಗುತ್ತಿಗೆದಾರರು ಮಾಡುತ್ತಿಲ್ಲ. ಒಳಚರಂಡಿ ಕಾಮಗಾರಿ ಮಾಡುವವರು ಯಾವುದೇ ಪೂರ್ವ ತಯಾರಿ ಇಲ್ಲದೇ ಬೇಕಾಬಿಟ್ಟಿಯಾಗಿ ಯೋಜನೆ ಆರಂಭಿಸಿದ್ದಾರೆ ಎಂದು ಜನರು ದೂರುತ್ತಿದ್ದಾರೆ.

ನಗರದ ಅನೇಕ ಬಡಾವಣೆಗಳಲ್ಲಿ ಎಲ್ಲಾ ರಸ್ತೆಗಳಲ್ಲಿ ಚರಂಡಿ ತೆಗೆದು ಅದರ ಮಣ್ಣನ್ನು ಅಲ್ಲಿಯೇ ಬಿಟ್ಟಿದ್ದಾರೆ. ಇದರಿಂದ ರಸ್ತೆಗಳು ದಿಬ್ಬಗಳಾಗಿ ಮಾರ್ಪಟ್ಟಿವೆ. ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲಿ ಹರಿಯುವಂತಾಗಿದೆ. ಚರಂಡಿ ತೆಗೆದು ಮಣ್ಣನ್ನು ರಸ್ತೆಗೆ ಬಿಟ್ಟಿದ್ದಾರೆ. ಇದರಿಂದ ಅನಾಹುತವಾಗುವುದು ಖಂಡಿತ. ಅಧಿಕಾರಿಗಳಿಗೆ ಹೇಳಿದರೂ ಮಣ್ಣನ್ನೂ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಿಲ್ಲಾ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ತೋಡಿಬಿಟ್ಟ ಗುಂಡಿಯಿಂದ ಕೇಸರುಮಯವಾದ ರಸ್ತೆ

ತೋಡಿಬಿಟ್ಟ ಗುಂಡಿಯಿಂದ ಕೇಸರುಮಯವಾದ ರಸ್ತೆಯಿಂದ ತ್ರಿಚಕ್ರ ವಾಹನ ಕೇಸರಲ್ಲಿ ಸಿಕ್ಕಿಕೊಂಡು ನೆಲಕ್ಕೆ ಬಿದ್ದು ಒಳಪೆಟ್ಟಾಗಿವೆ. ಅಂಗವಿಕಲನಾದ ನಾನು ನಿತ್ಯ ಸಂಚಾರ ಮಾಡಬೇಕಂದರೆ ಜೀವ ಕೈಯಲ್ಲಿಡಿದು ಹೋಗಬೇಕು. ನಗರಸಭೆ ಅಧಿಕಾರಿಗಳಿಗೆ, ಯೂಜಿಡಿ ಅಧಿಕಾರಿಗಳು ಕರೆ ಮಾಡಿದರು ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಜನಪ್ರತಿನೀಧಿಗಳು ಸಂಭAಧಪಟ್ಟವರ ಮೇಲೆ ಕ್ರಮ ಕೈಗೊಂಡ ಸಾರ್ವಜನಿಕರ ಹಿತ ಕಾಪಾಡಬೇಕು. ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಬಡಾವಣೆ ನಿವಾಸಿಯಾದ ಭೀಮನಗೌಡ ಗಂಗನಾಳ ಮನವಿ ಮಾಡಿದರು.

About the Author

Praja Vahini

Editor

View All Posts

Spread the love

Post navigation

Previous: ಎಸ್‌ಐಆರ್ ಒಂದು ಪಿತೂರಿ, ಅಸಂವಿಧಾನಿಕ ಪ್ರಕ್ರಿಯೆ: ನಟ ಪ್ರಕಾಶ್ ರಾಜ್ ಆಕ್ರೋಶ
Next: ವಿದ್ಯಾರ್ಥಿಗಳು ಶಿಕ್ಷಣ ಜೊತೆಗೆ ಬೌದ್ಧಿಕವಾಗಿ ಸದೃಢರಾಗಿ

Views:

160

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.