Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಳಪೆ ಆಹಾರ ಪೂರೈಸುತ್ತಿರುವ ನಂದಿ, ಅಶ್ವಿನಿ ಹೋಟೆಲ್ ವಿರುದ್ಧ ಕ್ರಮಕ್ಕೆ ಆಗ್ರಹ
  • Crime
  • State
  • ಶಹಾಪುರ

ಕಳಪೆ ಆಹಾರ ಪೂರೈಸುತ್ತಿರುವ ನಂದಿ, ಅಶ್ವಿನಿ ಹೋಟೆಲ್ ವಿರುದ್ಧ ಕ್ರಮಕ್ಕೆ ಆಗ್ರಹ

Praja Vahini September 21, 2026
WhatsApp Image 2026-09-21 at 07.30.52
Spread the love

ಶಹಾಪುರ: ನಗರದಲ್ಲಿ ನಂದಿ ಇಂಟರ್ ನ್ಯಾಷನಲ್ ಹೋಟೆಲ್ ಮತ್ತು ಅಶ್ವಿನಿ ಬಾರ್ ಆಂಡ್ ರೆಸಿಡೆನ್ಸಿಯಲ್ಲಿ ಜಾತಿ ಆಧಾರದ ಮೇಲೆ ಗ್ರಾಹಕರಿಗೆ ರೂಮ್ ನೀಡುತ್ತಿದ್ದು, ಆಗಾಗ ದಲಿತ ಯುವಕರ ಮೇಲೆ ಹಲ್ಲೆಗಳು ನಡೆಯುತ್ತಿವೆ, ಇನ್ನೂ ಕಳಪೆ ಆಹಾರ ಪೂರೈಕೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಆಹಾರ ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಶರಣಪ್ಪ ಸಾಧು ಸಗರ ಆಗ್ರಹಿಸಿದರು.

ಈ ಕುರಿತು ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಆಹಾರ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಟೀ, ಕಾಫೀ ಕುಡಿಯಲು ಹೋದರೆ ಟೀ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೊಡುವುದಿಲ್ಲ ಹಾಗೂ ಎರಡು ದಿನಗಳ ಹಿಂದೆ ಮಾಡಿ ಟೀ ಕಾಫೀ ನೀಡುತ್ತಿದ್ದಾರೆ. ಹೊಟೇಲ್‌ನಲ್ಲಿ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲ. ಹೆಣ್ಣು ಮಕ್ಕಳಿಗೆ ಮುಜುಗರ ಆಗುತ್ತಿದೆ. ಹೊಟೇಲ್ ಮತ್ತು ಬಾರ್ ಅಂಡ್ ರೆಸಿಡೆನ್ಸಿ ಲಾಡ್ಜ್ನಲ್ಲಿ ಜೂಜು, ಇಸ್ಪಿಟ್ , ವೇಶ್ಯಾವಾಟಿಕೆ ನಡೆಸುವುದರ ಬಗ್ಗೆ ಅನುಮಾನವಿದೆ. ಉಡುಪಿಯಿಂದ ಬಂದ ಹೊಟೇಲ್ ಮಾಲೀಕರು ಸ್ಥಳೀಯರಿಗೆ ಲಾಡ್ಜ್ನಲ್ಲಿ ರೂಮ್ ಕೊಡುತ್ತಿಲ್ಲ ಹೊಟೇಲ್ ಮಾಲೀಕರು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಸ್ವಇಚ್ಛೆಯಂತೆ ನಡೆಸುತ್ತಿದ್ದಾರೆ. ಕೂಡಲೇ ತನಿಖೆ ಮಾಡಬೇಕು, ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಗಪ್ಪ ಸೈದಾಪುರ ರಾಯಪ್ಪ ಗಂಗನಾಳ, ಭೀಮರಾಯ ಜುನ್ನಾ, ಹಣಮಂತರಾಯ ಗಂಗನಾಳ, ದೇವು ಹಾಲಭಾವಿ, ಸುರೇಶ ಪೂಜಾರಿ, ಪವನ್ ಪೂಜಾರಿ, ಸಣ್ಣಸೈದಪ್ಪ ಬಾಣತಿಹಾಳ ಸೇರಿದಂತೆ ಇತರರು ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ: 32,611 ಕೋಟಿ ರೂ. ಯೋಜನೆಗಳಿಗೆ ಅನುಮೋದನೆ: ಸಿಎಂ ಡಿಕೆಶಿ
Next: ಒಂದು ವಾರ ಅಧಿವೇಶನ- ವಿಜಯೇಂದ್ರ ಆಗ್ರಹ

Views:

362

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.