ಚಿಂಚೋಳಿ: ಸರಳತೆ ಹಾಗೂ ಸದಾ ಜನಪರ ಕಾಳಜಿಯಿಂದ ಗುರುತಿಸಿಕೊಂಡಿದ್ದ ವೀರಶೈವ ಲಿಂಗಾಯತ ಸಮಾಜದ ಉಪಾಧ್ಯಕ್ಷರಾದ ಗಣ್ಯ ವ್ಯಕ್ತಿ ಮಲ್ಲಪ್ಪ ಪಡಶೆಟ್ಟಿ ಅವರ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ಗ್ರಾಮದ ಖಂಟ್ವಾಂಗೇಶ್ವರ ಮಠದಲ್ಲಿ ಅತ್ಯಂತ ಗಂಭೀರ ಹಾಗೂ ಭಾವುಕ ವಾತಾವರಣದಲ್ಲಿ ನೆರವೇರಿತು.
ಕಾರ್ಯಕ್ರಮದ ಆರಂಭದಲ್ಲಿ ಮಲ್ಲಪ್ಪ ಪಡಶೆಟ್ಟಿ ಅವರ ಭಾವಚಿತ್ರಕ್ಕೆ ಗಣ್ಯರು ಹಾಗೂ ಕುಟುಂಬದ ಸದಸ್ಯರು ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ನೆರೆದಿದ್ದ ನೂರಾರು ಅಭಿಮಾನಿಗಳು ಮತ್ತು ಹಿತೈಷಿಗಳು ದಿವಂಗತರ ಆತ್ಮಕ್ಕೆ ಶಾಂತಿ ಕೋರಿ ಕೆಲ ನಿಮಿಷ ಮೌನಾಚರಣೆ ಮಾಡಿದರು.
ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ತಾಹೇರ್ ಪಟೇಲ ಮಾತನಾಡಿ ವೀರಶೈವ ಸಮಾಜದ ಉಪಾಧ್ಯಕ್ಷರಾದ ಮಲ್ಲಪ್ಪ ಪಡಶೆಟ್ಟಿ ಅವರು ತಮ್ಮ ಜೀವನದುದ್ದಕ್ಕೂ ಸಮಾಜದ ಹಿತಕ್ಕಾಗಿ ಶ್ರಮಿಸಿದವರು.ಅವರ ಸರಳ ವ್ಯಕ್ತಿತ್ವ, ಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಗುಣ ಹಾಗೂ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿಯಾಗಿದೆ.ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ” ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ
ಶ್ರೀ ಖಂಟ್ವಾಂಗೇಶ್ವರ ವಿರಕ್ತ ಮಠದ ಶ್ರೀ ಪ್ರಭುಮರಿದೇವರು,ಟೆಂಗಿನ ಮಠದ ಸಿದ್ರಾಮೇಶ್ವರ ಮಹಾಸ್ವಾಮಜಿಗಳು,ಗ್ರಾಮದ ಮುಖಂಡರಾದ ಮಹಾರುದ್ರಪ್ಪ ದೇಸಾಯಿ,ಮುರಗೆಪ್ಪ ಕುಕ್ಕಡಿ,ಬಸವರಾಜ ದೇಸಾಯಿ,ಶಿವಕುಮಾರ ಸೊಂತ,ಸೋಮಶೇಖರ್ ತಾರಾಪುರ್,ಶಿವಾನಂದ ಸ್ವಾಮಿ ಕಪೂರ್,ಸಿದ್ದಯ್ಯ ಸ್ವಾಮಿ ಖಜ್ಜಿ,ವೈಜಿನ್ನಾಥ ದಾದಿ,ಗೌಸಮಿಯಾ,ಬಸವಲಿಂಗ್ಯ ಸ್ವಾಮಿ ಹುನ್ನಳಿ, ಶಿವಶರಣಪ್ಪ ಸೊಂತ,ರವಿಕುಮಾರ್ ರಾಠೊಡ್, ನಾಮದೇವ ಪೊಲಿಸ್ ಪಾಟೀಲ, ನಾಗೇಶ ಚಾಂಗಲೇರಾ, ಕಾಂತಪ್ಪ ಪಡಶೆಟ್ಟಿ,ಪರಮೇಶ್ವರ ಪಾಟೀಲ ರಾಮತಿರ್ಥ,ಅಣವೀರ್ ಲಕ್ಷ್ಮಿಕಾಂತ ಕುಕ್ಮಡಿ, ರಾಜಕುಮಾರ ದಬ್ಬಾ, ಸಿದ್ದಯ್ಯ ಕಪೂರ್, ಸೇರಿದಂತೆ ಅನೇಕರು ಇದ್ದರು
