Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಅಂಡರ್‌ಪಾಸ್‌ ಕಾಮಗಾರಿ ದುರಂತ: ಅಧಿಕಾರಿಗಳ ಮತ್ತು ಗುತ್ತಿಗೆದಾರರು ನಿರ್ಲಕ್ಷ್ಯವೇ ಕಾರಣ: ಕೆ.ಗೋಪಾಲಯ್ಯ
  • Bangalore
  • Front news
  • Politics
  • State

ಅಂಡರ್‌ಪಾಸ್‌ ಕಾಮಗಾರಿ ದುರಂತ: ಅಧಿಕಾರಿಗಳ ಮತ್ತು ಗುತ್ತಿಗೆದಾರರು ನಿರ್ಲಕ್ಷ್ಯವೇ ಕಾರಣ: ಕೆ.ಗೋಪಾಲಯ್ಯ

Praja Vahini August 11, 2026
eaa67341-c921-43ca-96c7-900567142b11
Spread the love

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಂಡರ್‌ಪಾಸ್‌ ಕಾಮಗಾರಿ ದುರಂತಕ್ಕೆ ಅಧಿಕಾರಿಗಳ ಹಾಗೂ ಗುತ್ತಿಗೆದಾರ ಅಸಡ್ಡೆ ಮತ್ತು ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಶಾಸಕ ಕೆ. ಗೋಪಾಲಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಘಟನಾ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದುರಂತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಮತ್ತೊಬ್ಬರ ಮೃತದೇಹ ಮಣ್ಣಿನಡಿಯಲ್ಲಿರುವುದು ಕಂಡುಬಂದಿದೆ. ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

​ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಬಲಿ
​”ಮಳೆಗಾಲದ ಸಮಯದಲ್ಲಿ ಇಂತಹ ಬೃಹತ್ ಅಂಡರ್‌ಪಾಸ್‌ ಕಾಮಗಾರಿಗಳನ್ನು ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಅಧಿಕಾರಿಗಳು ಹಾಗೂ ತಜ್ಞರು ಯೋಚಿಸಬೇಕಿತ್ತು. ಇದು ಸಣ್ಣ ಚರಂಡಿ ಕಾಮಗಾರಿಯಲ್ಲ. ಮಳೆಯ ನೀರು ನಿಂತಾಗ ಅದನ್ನು ತೆರವುಗೊಳಿಸುವಾಗ ಈ ದುರಂತ ಸಂಭವಿಸಿದೆ. ಸುಮಾರು 18 ರಿಂದ 19 ಅಡಿ ಎತ್ತರದ ಮಣ್ಣಿನ ಕುಸಿತದಿಂದಾಗಿ ಐದು ಜನರ ಮೇಲೆ ಮಣ್ಣು ಬಿದ್ದಿದೆ. ಮಳೆಗಾಲಕ್ಕೆ ಮುನ್ನವೇ ಇಂತಹ ಕಾಮಗಾರಿಗಳನ್ನು ಮುಗಿಸಬೇಕಿತ್ತು” ಎಂದು ಕೆ. ಗೋಪಾಲಯ್ಯ ಕಿಡಿಕಾರಿದರು.
​ಹಿಂದಿನ ಕಾಮಗಾರಿ ವಿಳಂಬಕ್ಕೆ ಆಕ್ರೋಶ

​”ನಾನು ಶಾಸಕನಾಗುವ ಮುನ್ನವೇ ಪ್ರಾರಂಭವಾಗಿದ್ದ ಈ ಕಾಮಗಾರಿಯು ಅರ್ಧಂಬರ್ಧ ನಿಂತುಹೋಗಿತ್ತು. ಇದಕ್ಕಾಗಿ ಧರಣಿ ಕುಳಿತು 2023ರ ಆರಂಭದಲ್ಲಿ ಅನುಮೋದನೆ ಕೊಡಿಸಿ ಮತ್ತೆ ಕೆಲಸ ಪ್ರಾರಂಭವಾಗುವಂತೆ ಮಾಡಿದೆ. ಆದರೆ ಅಧಿಕಾರಿಗಳು ಸೂಕ್ತ ಯೋಜನೆ ಮತ್ತು ಜಾಗರೂಕತೆ ವಹಿಸದೆ ಕೆಲಸ ಮಾಡಿರುವುದೇ ಈ ಅನಾಹುತಕ್ಕೆ ಕಾರಣ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

About the Author

Praja Vahini

Editor

View All Posts

Spread the love

Post navigation

Previous: ರಾಜ್ಯದಲ್ಲಿ ಗೂಂಡಾಗಿರಿ ಸರಕಾರ- ಆರ್.ಅಶೋಕ
Next: ಕರ್ನಾಟಕ ಸಚಿವ ಸಂಪುಟ ಪುನರ್‌ರಚನೆ: 23 ಸಚಿವರಿಗೆ ಖಾತೆ ಹಂಚಿಕೆ – ರಾಜ್ಯಪಾಲರಿಂದ ಅಧಿಕೃತ ಅಧಿಸೂಚನೆ

Views:

21

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.