ಶಹಾಪುರ: ಸಾಂಸ್ಕೃತಿಕ ಚಿಂತಕ,ವಿಶಾಲ ಹೃದಯ ಶ್ರೀಮಂತಿಕೆ ವ್ಯಕ್ತಿತ್ವವುಳ್ಳ ಶ್ರೀ ರಾಜಾ ಮದನ ಗೋಪಾಲ ನಾಯಕ ಅವರ ತತ್ವ ಆದರ್ಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿವೆ ಎಂದು ಪತ್ರಕರ್ತ ಪ್ರಕಾಶ್ ದೊರೆ ಹೇಳಿದರು.
ನಗರದ ಜೀವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳು ಹಾಗೂ ಮಾಜಿ ಮಂತ್ರಿಗಳಾದ ದಿ.ರಾಜಾ ಮದನ ಗೋಪಾಲ ನಾಯಕ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿಭಾಗವಹಿಸಿ ಮಾತನಾಡಿದರು. ಅವರು ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದರು ಅಲ್ಲದೆ ಈ ಭಾಗದ ಕಲೆ,ಸಾಹಿತ್ಯ,ಸಂಗೀತ, ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ನುಡಿದರು.
ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ಮಾಜಿ ಸಚಿವರಾದ ದಿವಂಗತ ರಾಜಾಮದನ ಗೋಪಾಲ ನಾಯಕ ಅವರ ಕೊಡುಗೆ ಅಪಾರವಾಗಿದೆ ಎಂದು ಸಾಹಿತಿ ಹಾಗೂ ಶಹಾಪೂರ ಬಸ್ ಘಟಕದ ಸಹಾಯಕ ಸಂಚಾರಿ ನಿರೀಕ್ಷಕರಾದ ಅಕ್ಬರ್ ಭಾಷಾ ಹೊಟಗಿ ಹೇಳಿದರು.
ಶಾಲೆಯ ಮುಖ್ಯ ಗುರುಗಳು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿರುವ ಪಂಚಾಕ್ಷರಯ್ಯ ಹಿರೇಮಠ ಮಾತನಾಡಿ ಇಂದಿನ ಪ್ರಸ್ತುತ ರಾಜಕಾರಣಿಗಳು ರಾಜಾ ಮದನ ಗೋಪಾಲ್ ನಾಯಕ ಅವರ ಆದರ್ಶಗಳು ಬೆಳೆಸಿಕೊಳ್ಳಲಿ ಎಂದು ಸಲಹೆ ನೀಡಿದರು.ಈ ಭಾಗದ ಸಾಂಪ್ರದಾಯಿಕ ಕಲೆಗಳು, ಕವಿಗಳಿಗೆ,ಸಾಹಿತಿಗಳಿಗೆ, ಪ್ರೋತ್ಸಾಹ ನೀಡಿ ಉರಿದುಂಬಿಸುತ್ತಿದ್ದರು ಎಂದು ನುಡಿದರು.
ಈ ಸಮಾರಂಭದ ವೇದಿಕೆಯ ಮೇಲೆ ಚಂದ್ರು ವಾರಿ,ಪ್ರೇಮಾ ಕೊಂಚುರ,ದಿವ್ಯ ಭೀ.ಗುಡಿ, ಸೇರಿದಂತೆ ಇನ್ನಿತರರು ಉಪಸಿತರಿದ್ದರು,ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು.
