Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಅಗಲಿದ ಬಸವರಾಜಪ್ಪಗೌಡ ದರ್ಶನಪುರ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ
  • Bangalore
  • Politics
  • State

ಅಗಲಿದ ಬಸವರಾಜಪ್ಪಗೌಡ ದರ್ಶನಪುರ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ

Praja Vahini July 23, 2026 1 minute read
WhatsApp Image 2026-07-23 at 11.59.33
Spread the love

ಶಹಾಪುರ: ಮಾನವೀಯತೆ ಮತ್ತು ಮೌಲ್ಯಧಾರಿತ ರಾಜಕಾರಣದ ಪ್ರತೀಕವಾಗಿದ್ದ ದರ್ಶನಪುರ ಮನೆತನದ ಹಿರಿಯ ಕಳಶವಾಗಿದ್ದ ಬಸವರಾಜಪ್ಪಗೌಡ ದರ್ಶನಪುರ್ ಅಗಲಿಕೆ ಇಡೀ ಸಗರನಾಡಿಗೆ ತುಂಬಲಾರದ ನಷ್ಟ, ಗೌಡರ ಗತ್ತು ನೋಡಿ ಬೆರಗಾಗುವವರೇ ಹೆಚ್ಚು, ಆದರೆ ಅವರ ಹೃದಯದ ಆಳ ಅರಿತವರಿಗೆ ಮಾತ್ರ ಅವರ ಪ್ರೀತಿ ಗೊತ್ತು, ಇಂದು ನಮ್ಮನ್ನೆಲ್ಲ ಅಗಲಿದ ಬಸವರಾಜಪ್ಪಗೌಡ ದರ್ಶನಪುರ್ ಅವರ ಸೇವೆಗಳು ಸದಾ ಚಿರಸ್ಮರಣಿಯ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಈರಣ್ಣ ಮೌರ್ಯ  ಹೇಳಿದರು.

ನಗರದ ಕನಕ ನಗರ ಬಡಾವಣೆಯಲ್ಲಿ ಅಗಲಿದ ಹಿರಿಯ ರಾಜಕಾರಣಿ, ಶಿಕ್ಷಣ ಪ್ರೇಮಿ, ಮಹಾ ದಾಸೋಹಿ ಬಸವರಾಜಪ್ಪಗೌಡ ದರ್ಶನಪುರ ಅವರಿಗೆ ಬಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ ಮೌನಚರಣೆ ಮಾಡಿ ಮಾತನಾಡಿದ ಅವರು, ಕಷ್ಟಕ್ಕೆ ಹೆದರದ, ನಂಬಿದವರನ್ನು ಕೈಬಿಡದ ಧೈರ್ಯವೇ ದರ್ಶನಾಪುರ ಮನೆತನದ ಶಕ್ತಿ. ಅದರ ಮೇರು ಕಳಸವೇ ಬಸವರಾಜಪ್ಪಗೌಡ ದರ್ಶನಪುರ ಅವರು.

ನೇರ ನುಡಿಯ ನಿರ್ಬಿಢೆಯ ವ್ಯಕ್ತಿ-ಶಕ್ತಿಯಾಗಿರುವ ಅವರು ತುಂಬಾ ಸರಳ ಜೀವನ ಸಾಗಿಸಿದರು. ಅಷ್ಟೇ ಸಂಕೀರ್ಣ ಸ್ವಭಾವದ ಜನಾನುರಾಗಿಗಳು. ಮಾನವೀಯ ಅನುಕಂಪವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡವರು. ದರ್ಶನಪುರ ಗ್ರಾಮದ ಸುತ್ತಲಿನ ಹಳ್ಳಿಗಳ್ಳಿ ನೊಂದವರಿಗೆ ಆಸರೆ ಆಗಿದ್ದರು.  ಯಾವುದೇ ಕುಟುಂಬ ಕಲಹಗಳಿರಲಿ ತಮ್ಮ ನೇರ ನುಡಿಯ ಮೂಲಕ ಸತ್ಯದ ನ್ಯಾಯ ಒದಗಿಸಿದ್ದಾರೆ.

ಆ ಭಾಗದಲ್ಲಿ ಯಾವುದೇ ಸಮಸ್ಯೆ ಇದ್ದರು ಮೊದಲು ಗೌಡರ ಹತ್ತಿರವೇ ಹೋಗಿ ನ್ಯಾಯ ಮಾಡಿ ಅವರೇ ಪರಿಹಾರ ಮಾಡಿಕೊಡುತ್ತಿದ್ದರು. ಇದನ್ನೂ ಓದಿ: ಮೂರು ವರ್ಷದಿಂದ ಪಾವತಿಯಾಗದ ಜೆಜೆಎಂ ಬಾಕಿ ಬಿಲ್

ಇಂದಿಗೂ ದರ್ಶನಪುರ್ ಸುತ್ತಮುತ್ತಲು ಪೊಲೀಸ್ ಠಾಣೆ ಮೆಟ್ಟಿಲಿರುವವು ಅಲ್ಪ ಪ್ರಕರಣಗಳು ಮಾತ್ರ. ದೀನ ದಲಿತರ ರಕ್ಷಣೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿರುವರು ದೇವರು ಅವರ ಕುಟುಂಬಕ್ಕೆ ದುಃಖ ಬರುಸುವ ಶಕ್ತಿ ನೀಡಲಿ ಎಂದರು.

ಈ ಸಂದರ್ಭದಲ್ಲಿ ಹಿರಿಯರಾದ ಸೋಮಶೇಖರ ಹಿರೇಮಠ,  ಹಿರಿಯ ಪತ್ರಕರ್ತರಾದ ಅಮರೇಶ್ ಹಿರೇಮಠ, ಅಯ್ಯಣ್ಣ ಇನಂದರ್,  ಅಶೋಕ್ ದಿನ್ನಿ, ನಿಂಗಣ್ಣ ಹಬ್ಬಳ್ಳಿ,  ಮಲ್ಕನಗೌಡ ಇಬ್ರಾಹಿಂಪುರ್, ಅಮರೇಶ್ ಸಜ್ಜನ್, ಸಂದೀಪ್ ಪಾನಿಬಾತೆ, ನಿಜಗುಣ ಕನಕ,    ಸೂಗಪ್ಪ ಸೇರಿದಂತೆ ಬಡಾವಣೆ ಮುಖಂಡರು, ಯುವಕರು ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ಸಮಗ್ರ ಕ್ಲಸ್ಟರುಗಳನ್ನು ಅಭಿವೃದ್ಧಿ ಪಡಿಸಲು ಒತ್ತು: ಎಂ ಬಿ ಪಾಟೀಲ
Next: ಪ್ರಶ್ನೆ ಪತ್ರಿಕೆ ಸೋರಿಕೆ ಎಂಬುದು ರಾಜಕೀಯ ಪಕ್ಷಗಳ ವಿಚಾರವಲ್ಲ, ದೇಶದ ಭವಿಷ್ಯದ ವಿಚಾರ: ಸಿಎಂ ಡಿಕೆಶಿ

Views:

243

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.