ಕೃಷಿ ಅಧಿಕಾರಿಗಳ ತಂಡ ದಾಳಿ/ ಪರಿಶೀಲನೆ
ಶಹಾಪುರ: ತಾಲ್ಲೂಕಿನಲ್ಲಿನ ವಿವಿಧ ಕೃಷಿ ಪರಿಕರ ಮಳಿಗೆಗಳಿಗೆ ಆರ್. ದೇವರಾಜು ಅಪರ ಕೃಷಿ ನಿರ್ದೇಶಕರು, ಜಾಗೃತ ಕೋಶ, ಬೆಂಗಳೂರು ರವರ ನೇತೃತ್ವದಲ್ಲಿ ಅನಿರೀಕ್ಷಿತ ದಾಳಿ ಮಾಡಿ ರಸಗೊಬ್ಬರ, ಬೀಜ ಹಾಗೂ ಕೀಟನಾಶಕ ದಾಸ್ತಾನುಗಳ ಲಭ್ಯತೆಯನ್ನು ಪರಿಶೀಲನೆ ಮಾಡಿದರು.
ವಿವಿಧ ಮಳಿಗೆಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಒಟ್ಟು 06 ಪರಿಕರ ಮಳಿಗೆಯ ಮಾರಾಟಗಾರರಿಗೆ ಕಾರಣ ಕೇಳುವ ನೋಟೀಸ್ ಹಾಗೂ ಮಾರಾಟ ತಡೆ ಆದೇಶ ಜಾರಿ ಮಾಡಲಾಯಿತು. ಮತ್ತು ಕೃಷಿ ಪರಿಕರ ಮಾರಾಟಗಾರರಿಗೆ ಕಾನೂನು ಉಲ್ಲಂಘಿಸದಂತೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ವೈದ್ಯರು ಎರಡನೇ ತಾಯಿ, ಎರಡನೇ ದೇವರು: ಸಿದ್ಧರಾಮೇಶ್ವರ ಸ್ವಾಮೀಜಿ
ಈ ಸಂದರ್ಭದಲ್ಲಿ ಶಿವಕುಮಾರ ಪಾಟೀಲ ಜಂಟಿ ಕೃಷಿ ನಿರ್ದೇಶಕರು, ಜಾಗೃತ ಕೋಶ, ಕಲಬುರಗಿ ಪ್ರವೀಣ ಗವಾಳಿ, ಸಹಾಯಕ ಕೃಷಿ ನಿರ್ದೇಶಕರು, ಜಾಗೃತ ಕೋಶ, ಕಲಬುರಗಿ, ರಾಜಕುಮಾರ ಸಹಾಯಕ ಕೃಷಿ ನಿರ್ದೇಶಕರು ಜಾಗೃತ ಕೋಶ ಯಾದಗಿರಿ, ಸುನಿಲಕುಮಾರ ಸಹಾಯಕ ಕೃಷಿ ನಿರ್ದೇಶಕರು, ಶಹಾಪುರ, ಮಾಣಿಕೇಶ್ವರಿ ಹೆಚ್ ಕೃಷಿ ಅಧಿಕಾರಿಗಳು ಶಹಾಪುರ, ಆಕಾಶ, ಕೃಷಿ ಅಧಿಕಾರಿ ದೊರನಹಳ್ಳಿ ಹಾಗೂ ಇಲಾಖಾ ಸಿಬ್ಬಂದಿಯವರು ಉಪಸ್ಥಿತರಿದ್ದರು.
