ಶಹಾಪುರ: ಡಾಕ್ಟರ್ ಆಗುವ ಕನಸು ಹಲವರಿಗಿರುತ್ತದೆ. ಡಾಕ್ಟರ್ ಆಗಲು ಎಂಬಿಬಿಎಸ್ ಓದಲೇಬೇಕು. ಆದರೆ ಈ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಸಿಗುವುದು ಭಾರಿ ಕಷ್ಟದ ಮಾತು, ಅಂತದರಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರಿಗೆ ಎಂಬಿಬಿಎಸ್ ಸೀಟ್ ಪಡೆದುಕೊಂಡಿದ್ದು ಅದರಲ್ಲಿ ಈಗಾಗಲೇ ಹಿರಿಯ ಸಹೋದರಿಯ ಎಂಬಿಬಿಎಸ್ ಪೂರ್ಣಗೊಂಡು ಹುದ್ದೆಗೆ ಸೇರಲು ತಯಾರಿದ್ದು, ತಮ್ಮ ಸಾಧನೆಯ ಮೂಲಕ ತಮ್ಮ ತಂದೆ ತಾಯಿಗೆ ಹೆಮ್ಮೆ ತರುವಂತ ಕೆಲಸವನ್ನು ಮಾಡಿದ್ದಾರೆ ಎಂದು ಫಕೀರೇಶ್ವರ ಮಠದ ಪೂಜ್ಯ ಗುರುಪಾದ ಮಹಾಸ್ವಾಮಿಗಳು ನುಡಿದರು.
ನಗರದ ಫಕೀರೇಶ್ವರ ಮಠದಲ್ಲಿ ವೈದ್ಯಕೀಯ ವ್ಯಾಸಂಗ ಮುಗಿಸಿ ಸೇವೆಗೆ ಹಾಜರಾಗುತ್ತಿರುವ ಡಾ.ರೂಪಾ ಬಿ ತಳವಾರ ಅಭಿನಂದನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿಕೊಂಡು ಮಾತನಾಡಿ, ಮೂವರು ಸಹೋದರಿಯರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂ.ಬಿ.ಬಿಎಸ್ ಸೀಟು ಪಡೆದುಕೊಂಡು ಪೋಷಕರಿಗೆ ಹೆಮ್ಮೆ ತರುವಂತಹ ಕೆಲಸ ಮಾಡಿದ್ದಾರೆ. ಹಿರಿಯ ಸಮಾಜಿಕ ಹೋರಾಟಗಾರ ಭೀಮರಾಯ ತಳವಾರ(ಹೊಸಮನಿ) ಹಾಗೂ ಇಂದ್ರಮ್ಮ ದಂಪತಿಗಳ ಮೊದಲ ಪುತ್ರಿ ಡಾ.ರೂಪಾ ಅವರು ಡಾಕ್ಟರ್ ಆಗಿದ್ದಾರೆ ಎಂದರು.
ಪತಿ ಪತ್ನಿ ಇಬ್ಬರು ಕಷ್ಟಪಟ್ಟು ಕೆಲಸ ಮಾಡಿ ನಾಲ್ಕು ಜನ ಮಕ್ಕಳನ್ನು ಓದಿಸಿದ್ದು, ಇದರಲ್ಲಿ ಮೂವರು ಹೆಣ್ಣು ಮಕ್ಕಳು ವೈದ್ಯರಾಗುವ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ. ಅವರ ಹಿರಿಯ ಮಗಳಾದ ಡಾ.ರೂಪಾ ಬಿ ತಳವಾರ ಅವರು ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಪಡೆದು ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಎಷ್ಟೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರು ನಮಗೆ ಒಳ್ಳೆಯ ಶಿಕ್ಷಣವನ್ನು ನೀಡಿದ ನಮ್ಮ ತಂದೆ ತಾಯಿಯ ಕನಸನ್ನು ನಾವು ನನಸು ಮಾಡುತ್ತೇವೆ ಎಂದು ಪುತ್ರಿ ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಡಾ .ಶರಣು. ಬಿ ಗದ್ದುಗೆ, ಟಿಎಚ್‌ಒ ಡಾ .ರಮೇಶ ಗುತ್ತೆದಾರ್, ಶ್ರೀಶೈಲ ಹೊಸಮನಿ, ಶಿವುಪುತ್ರ ಜವಳಿ, ಶಿವುಕುಮಾರ ತಳವಾರ, ನಾಗಣ್ಣ ಬಡಿಗೇರ, ರಾಜು ಅಣಬಿ, ಮರೆಪ್ಪ ಜಾಲಿಬೆಂಚಿ, ಸುಭಾಷ ತಳವಾರ, ಬಸವರಾಜ ತಳವಾರ, ಬಸವರಾಜ ಚೆಲುವಾದಿ, ಅಶೋಕ ಡಿಚ್ಚಿ, ಬೀಮರಾಯ ಜುನ್ನಾ, ಸಂಗಣ್ಣ ಗುತ್ತೇದಾರ ,ರಾಮಣ್ಣ ಸಾದ್ಯಾಪುರ, ರಾಹುಲ್ ನಾಟೇಕರ, ಮಲ್ಲಿಕಾರ್ಜುನ ಬೊಮ್ಮನಹಳ್ಳಿ, ಕಾಮಣ್ಣ ವಿಭೂತಿಹಳ್ಳಿ, ಶಿವಶರಣ ತಳವಾರ, ಶರಣು ತಳವಾರ ಸೇರಿದಂತೆ ಅನೇಕರು ದಂಪತಿಗಳಿಗೆ ಮತ್ತು ಡಾ.ರೂಪಾ ಅವರಿಗೆ ಸನ್ಮಾನಿಸಿ ಗೌರವಿಸಿದರು.
