ಕೆ.ಆರ್ ಪುರ: ಇತ್ತೀಚಿನ ದಿನಗಳಲ್ಲಿ ಮಳೆ ಬಂದಾಗ ವಿದ್ಯುತ್ ಕಂಬ ಬೀಳುವುದು ಅಥವಾ ವಿದ್ಯುತ್ ತಂತಿ ಬೀಳುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ಘಟನೆಗಳು ಕಂಡುಬಂದಿದ್ದು, ಇದನ್ನು ಮನಗಂಡ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೈರುತಿ ಬಸವರಾಜ್ ಅವರು ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆಗೆ ಇಂದು (ಶನಿವಾರ ಜೂ. 20) ಚಾಲನೆ ನೀಡಿದ್ದಾರೆ.
ಆನಂದಪುರದಲ್ಲಿ ಐಟಿಐ ವಿದ್ಯುತ್ ಉಪ ಕೇಂದ್ರದಿಂದ ಹೊಸ ಫೀಡರ್ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದ ಅವರು, ಆನಂದಪುರ, ಟಿಸಿಪಾಳ್ಯ ರಸ್ತೆ, ಸಾಯಿಗಾರ್ಡನ್, ಕೆ.ವಿ.ಬಡಾವಣೆ, ಮನ್ನಮ್ ನಗರ, ಗೆದ್ದಲಹಳ್ಳಿ ಸ್ಪರ್ಷ ಆಸತ್ರೆ, ಕೆ.ಆರ್ ಪುರ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಹೆಚ್ಚು ವಿದ್ಯುತ್ ಸಮಸ್ಯೆ ಆಗುತ್ತಿತ್ತು. ಈ ಕಾಮಗಾರಿ ಮುಗಿದ ಕೂಡಲೇ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ಹವಾಮಾನ ಪರಿಸ್ಥಿತಿಗಳು ಹಾಗೂ ತಾಂತ್ರಿಕ ದೋಷಗಳಿಂದ ಉಂಟಾಗುವ ವಿದ್ಯುತ್ ಅಡಚಣೆ ಗಳನ್ನು ಗಮನಾರ್ಹ ವಾಗಿ ಕಡಿಮೆ ಮಾಡಬಹುದು ಎಂದರು. ಕಾಮಗಾರಿ ವೇಳೆ ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: 20 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಥೀಮ್ ಪಾರ್ಕ್: ಕೆಹೆಚ್ ಮುನಿಯಪ್ಪ
ಕಾಮಗಾರಿಗಳು ನಡೆಯುವ ವೇಳೆ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮುಖಂಡರ ಮೇಲಿದೆ ಎಂದು ಹೇಳಿದರು.
