ತಿರುಪತಿ: ವಿಧಾನ ಪರಿಷತ್ ಚುನಾವಣೆ ಮುಗಿಯುತಿದ್ದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಪತ್ನಿ ಉಷಾ ಅವರ ಜೊತೆ ಇಂದು (ಶುಕ್ರವಾರ ಜೂನ್ 19) ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಹೌದು, ನೂತನ ಸಚಿವ ಸಂಪುಟದ ವಿಸ್ತರಣೆಯ ನಂತರ ಸಿಎಂ ಡಿಕೆಶಿ ಅವರ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿ ಮುಂಜಾನೆಯ ದರ್ಶನದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ದರ್ಶನಾಪುರಗೆ ಸಚಿವ ಸ್ಥಾನ ನೀಡಲು ಕುರುಬ ಸಮಾಜದಿಂದ ಸಿದ್ದುಗೆ ಮನವಿ
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿ.ಕೆ. ಶಿವಕುಮಾರ್ ಅವರ ಮೊದಲ ತಿರುಪತಿ ಭೇಟಿ ಇದಾಗಿತ್ತು.
