ಶಹಾಪುರ: ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರ ಹಿರಿತನ, ಅನುಭವ ಹಾಗೂ ರಾಜಕೀಯ ಸೇವೆಯನ್ನು ಪರಿಗಣಿಸಿ ಡಿ.ಕೆ ಶಿವುಕುಮಾರ ಅವರ ಸಚಿವ ಸಂಪುಟದಲ್ಲಿ ಉನ್ನತ ಸಚಿವ ಖಾತೆ ಸಿಗಲು ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸಬೇಕು ಎಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಕುರುಬ ಸಮಾಜದ ಮುಖಂಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ನಂತರ ಮಾತನಾಡಿದ ಮುಖಂಡರು, ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಕಲ್ಯಾಣ ಕರ್ನಾಟಕದಲ್ಲಿ ಅಪ್ರತಿಮಾ ಸಂಘಟನಾ ಚತುರರಾಗಿ, ಪಕ್ಷವನ್ನು ಅತ್ಯಂತ ದಕ್ಷತೆಯಿಂದ ಮುನ್ನಡೆಸಿ, ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರಮುಖ ಖಾತೆಯನ್ನು ನೀಡಬೇಕು. ಕಾಂಗ್ರೆಸ್ ಪಕ್ಷದ ಸಂಘಟನೆಗೂ ಹೆಚ್ಚಿನ ಬಲ ದೊರೆಯಲಿದೆ. ಸುಧಿರ್ಘ ರಾಜಕೀಯ ಅನುಭವ ಮತ್ತು ಸಮರ್ಥ ನಾಯಕತ್ವದಲ್ಲಿ ಪಕ್ಷವು ಮತ್ತಷ್ಟು ಬಲಿಷ್ಠವಾಗಿ ಸಂಘಟಿತಗೊಳ್ಳಲಿದೆ. ಸಾಮಾಜಿಕ ನ್ಯಾಯದ ಬಗೆಗಿನ ಅಚಲ ಬದ್ಧತೆಯನ್ನು ಹೊಂದಿರುವ ದರ್ಶನಾಪುರ ಸಾಹೇಬರಿಗೆ ಸಚಿವ ಸ್ಥಾನ ನೀಡಲು ತಾವು ಸಹ ಒತ್ತಾಯಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ರಾಜ್ಯ ಪರಿಷತ್ ಚುನಾವಣೆ; ಕಾಂಗ್ರೆಸ್ನ 5, ಬಿಜೆಪಿಯ 2 ಅಭ್ಯರ್ಥಿಗಳ ಗೆಲುವು
ಈ ಸಂದರ್ಭದಲ್ಲಿ ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳಿ ರಾಜ್ಯ ನಿರ್ಧೇಶಕರಾದ ಶಾಂತಗೌಡ ನಾಗನಟಿಗಿ, ಭೀಮಣಗೌಡ ದರಿಯಾಪುರ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸದಸ್ಯ ಮಲ್ಲಣಗೌಡ ತಿಪ್ಪನಹಳ್ಳಿ, ಭೀಮಶಂಕರ್ ಹುಲ್ಕಲ್, ರಾಯಪ್ಪ ಚಲುವಾದಿ, ಶಾಂತು ಪಾಟೀಲ್, ಶರಬಣ್ಣ ರಸ್ತಾಪುರ, ರವಿ ರಾಜಾಪುರ, ರಾಯಣ್ಣ ಚಲುವಾದಿ, ಸಿದ್ದಣ್ಣ ಕನ್ಯಾಕೊಳ್ಳುರ, ಬಲಭೀಮ ಮಡ್ನಾಳ, ಮರ್ದಾನಿ ಸಲಾದಪುರ ಸೇರಿದಂತೆ ಕುರುಬ ಸಮಾಜದ ಮುಖಂಡರು, ಯುವಕರು ಇದ್ದರು.
