Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಲುಷಿತ ನೀರು ಸೇವಿಸಿ ಬಿರನೂರ ಗ್ರಾಮಸ್ಥರು ಅಸ್ವಸ್ಥ
  • Uncategorized

ಕಲುಷಿತ ನೀರು ಸೇವಿಸಿ ಬಿರನೂರ ಗ್ರಾಮಸ್ಥರು ಅಸ್ವಸ್ಥ

Praja Vahini June 17, 2026
WhatsApp Image 2026-06-17 at 18.16.33
Spread the love

ಸ್ಥಳಕ್ಕೆ ಡಿಎಚ್‌ಓ, ಇಓ, ಟಿಎಚ್‌ಓ ಬೇಟಿ ಪರಿಶೀಲನೆ

ಶಹಾಪುರ: ತಾಲೂಕಿನ ಬಿರನೂರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಮಹಿಳೆಯರು, ಪುರುಷರು, ಮಕ್ಕಳು ಅಸ್ವಸ್ಥರಾಗಿ ಹತ್ತಿಗುಡೂರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದಲ್ಲಿ ಬೋರವೇಲ್ ಕೆಟ್ಟಿದ್ದು, ಹಳೆಯ ಬಾವಿಯ ನೀರನ್ನು ಸೇವಿಸಿದ್ದು ಅದೇ ಕಾರಣಕ್ಕೆ ವಾಂತಿ ಬೇದಿಯಿಂದ ಜನ ಅಸ್ವಸ್ಥರಾಗಿದ್ದು ಕೂಡಲೇ ಗ್ರಾಮಕ್ಕೆ ಇಓ ಬಸವರಾಜ ಶರಬೈ ಹಾಗೂ ತಾಲೂಕ ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ ಬೇಟಿ ನೀಡಿ ಜನರನ್ನು ಪರೀಕ್ಷೆ ಮಾಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಇನ್ನೂ ಕೇಲವರಿಗೆ ಗ್ರಾಮದಲ್ಲೇ ಗ್ಲೂಕೊಸ್ ನೀಡಿ ಚಿಕಿತ್ಸೆ ನಿಡಲಾಗಿದೆ. ಆದರೆ ಜನರ ವಾಂತಿ ಬೇದಿಗೆ ಕಾರಣ ನಿಖರವಾಗಿಲ್ಲಾ. ಈಗಾಗಲೇ ಅಸ್ವಚ್ಚತೆಯಿಂದಲೇ ನೀರಿನ ಸಮಸ್ಯೆ ಉದ್ಭವವಾಗಿ ಜನರು ಅಸ್ವಸ್ಥತೆಗೆ ಕಾರಣ ಎಂಬುವುದು ಮೇಲ್ನೊಟಕ್ಕೆ ಕಂಡುಬಂದಿದೆ. ಆದರೆ ಅಧಿಕಾರಿಗಳ ಪ್ರಕಾರ ಆಹಾರದಲ್ಲಿಯೂ ಏರುಪೇರು ಆಗಿರಬಹುದು ಎನ್ನುವುದು ಅವರ ವಾದವಿದೆ. ಈ ಬಗ್ಗೆ ತನಿಖೆ ಮಾಡಿ ಜನರ ಜೀವ ರಕ್ಷಣೆ ಮಾಡಬೇಕಾದ ಕೆಲಸ ಅಧಿಕಾರಿಗಳ ಮೇಲಿದೆ.

ಗ್ರಾಮಸ್ಥರ ಅನಿಸಿಕೆ

ಸುಮಾರು 20 ವರ್ಷಗಳಿಂದಲೂ ಬಾವಿಯ ನೀರನ್ನು ಕುಡಿಯುತ್ತಿದ್ದ ಜನರು, ಕಳೆದ ಮೂರು ವರ್ಷಗಳಿಂದ ಬಾವಿಯ ಮೂಲಕ ನೀರನ್ನು ಟ್ಯಾಂಕ್‌ನಲ್ಲಿ ಸ್ಟೋರೇಜ್ ಆಗಿ ಗ್ರಾಮಸ್ಥರಿಗೆ ನೀರು ಪೂರೈಕೆಯಾಗುತ್ತಿದೆ. ಇದೀಗ ನಳ(ನಲ್ಲಿ) ಬಾರದೆ ನೀರು ಇಲ್ಲದ ಕಾರಣ ಜನರು ಬಾವಿಯ ನೀರನ್ನು ಕುಡಿದಿದ್ದಾರೆ. ಆದರೆ ಅದು ಕುಡಿಯಲು ಯೋಗ್ಯವಾಗಿಲ್ಲಾ ಇದರಿಂದ ವಾಂತಿ ಭೇದಿ ಶುರುವಾಗಿದ್ದು, ಗ್ರಾಮಸ್ಥರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಡಿಯಲು ಯೋಗ್ಯವಿರುವ ನೀರನ್ನು ಜನರಿಗೆ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎನ್ನುವುದು ಗ್ರಾಮಸ್ಥರ ಮನವಿಯಾಗಿದೆ.

ಅಧಿಕಾರಿಗಳ ತಂಡ ಬೇಟಿ

ಕಲುಷಿತ ನೀರು ಸೇವಿಸಿ ಜನತೆ ಅಸ್ವಸ್ಥರಾಗಿದ್ದು ಸ್ಥಳಕ್ಕೆ ಡಿಎಚ್‌ಓ ಡಾ.ಮಹೇಶ ಬಿರೆದಾರ , ಇಓ ಬಸವರಾಜ ಶರಬೈ, ಟಿಎಚ್‌ಓ ಡಾ.ರಮೇಶ ಗುತ್ತೇದಾರ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದರು.

ಪಿಡಿಓ ನಿರ್ಲಕ್ಷವೆ ಕಾರಣ

ತಾಲೂಕಿನ ಬಿರನೂರ ಗ್ರಾಮ ಪಂಚಾಯಿತಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಜನತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಪಿಡಿಓ ನಿರ್ಲಕ್ಷವೇ ಮುಖ್ಯ ಕಾರಣವಾಗಿದೆ. ಆಗಾಗ ಗ್ರಾಮದಲ್ಲಿ ನೀರಿನ ಸಮಸ್ಯೆ ಆಗುತ್ತಲೇ ಇದ್ದು, ಅದೇ ನೀರು ಸೇವಿಸುವುದೇ ಗತಿಯಾಗಿದೆ. ಇದರಿಂದ ಗ್ರಾಮಸ್ಥರು ಜೀವ ಭಯದಲ್ಲಿ ಇದ್ದು, ಕರೆ ಮಾಡಿದರೆ ಇಓ ಅವರು ಸ್ವೀಕರಿಸಲ್ಲಾ. ಇನ್ನೂ ಪಿಡಿಓ ಅವರಂತು ತಮಗೂ ಇದಕ್ಕೂ ಸಂಭಂಧವಿಲ್ಲದಂತೆ ಇದ್ದಾರೆ. ಕರೆ ಮಾಡಿದರೆ ಸ್ವೀಕರಿಸಲ್ಲಾ ಪಿಡಿಓ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಮನ್ಸೂರ್ ಆಲಿ ಖಾನ್ ರವರಿಗೆ ಶುಭಕೋರಿದ ಕಾಂಗ್ರೆಸ್ ಮುಖಂಡರು
Next: ಪರಿಷತ್ ಚುನಾವಣೆ; ಅಡ್ಡಮತದಾನದ ಭೀತಿ ಕೈ ಶಾಸಕರು ವಂಡರ್ ಲಾ ದಿಂದ ನೇರ ವಿಧಾನಸೌಧಕ್ಕೆ

Views:

345

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.