ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಲ್ಲಿ ಮಹತ್ವದ ಗ್ಯಾರಂಟಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಹಲವಾರು ರೀತಿ ಬದಲಾವಣೆಗಳನ್ನು ರಾಜ್ಯ ಸರ್ಕಾರ ತಂದಿದ್ದು, ಗೃಹಲಕ್ಷ್ಮಿ ಹಣ ಪಡೆಯುವ ಮನೆಯ ಹಿರಿಯ ಮಹಿಳೆಯರಿಗೆ ಇನ್ಮುಂದೆ ಕಡ್ಡಾಯವಾಗಿ ಬಯೋಮೆಟ್ರಿಕ್ ಸಿಸ್ಟಮ್ ಅನ್ನು ಕಡ್ಡಾಯವಾಗಿ ಮಾಡುವುದರ ಜೊತೆಗೆ ಇದೀಗ ಗೃಹಲಕ್ಷ್ಮಿ ಹಣ ಪಡೆಯಲು ಮಹಿಳೆಯರು ಹೊಸದಾಗಿ ಅಪ್ಲಿಕೇಶನ್ ಹಾಕಬೇಕಾಗಿದೆ.
ಇನ್ನು ಮೊದಲು ಅಪ್ಲಿಕೇಶನ್ ನಲ್ಲಿ ಕೇವಲ ಆರು ಪ್ರಶ್ನೆಗಳಿದ್ದು ಇದೀಗ ಹೊಸದಾಗಿ ಅಪ್ಲಿಕೇಶನ್ ನಲ್ಲಿ ಸುಮಾರು 10 ರಿಂದ 12 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.
ಹೌದು, ಇನ್ಮುಂದೆ ಸರ್ಕಾರಿ ನೌಕರರ ಕುಟುಂಬಕ್ಕೆ ಗೃಹಲಕ್ಷ್ಮಿ ಯೋಜನೆ ಹಣ ಕಟ್ಟಾಗಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಗೃಹಲಕ್ಷ್ಮಿ ಹೊಸ ಅರ್ಜಿಯಲ್ಲಿ ಹೊಸದಾಗಿ ಸೇರಿಸಲಾದ ಪ್ರಶ್ನೆಗಳಲ್ಲಿ ನಿಮ್ಮ ಮನೆಯಲ್ಲಿ ಸರ್ಕಾರಿ ನೌಕರರು ಇದ್ದಾರ? ಎಂಬ ಪ್ರಶ್ನೆಯನ್ನು ಕೂಡ ಕೇಳಲಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಆಗಿದೆ. ಹೊಸ ಅರ್ಜಿ ರಚನೆ ಮಾಡುವಂತೆ ಮುಖ್ಯಮಂತ್ರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದ್ದಾರೆ. ಹೀಗಾಗಿ, ಇಲಾಖೆ ಗೃಹಲಕ್ಷ್ಮೀ ಯೋಜನೆಗೆ ಹೊಸ ಅರ್ಜಿ ಸಲ್ಲಿಕೆ ಮಾಡಬೇಕು. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಏನಿದೆ ಅಂತ ನಾವು ಆಪರೇಷನ್ ಮಾಡೋಣ?: ಹೆಚ್ಡಿಕೆ
ಗೃಹಲಕ್ಷ್ಮೀ ಫಲಾನುಭವಿಗಳ ಕುಟುಂಬದಲ್ಲಿ ಸರ್ಕಾರಿ ನೌಕರರ ಪತ್ತೆಗೆ ಸರ್ಕಾರ ಮುಂದಾಗಿದೆ. ಹೊಸ ಅರ್ಜಿಯಲ್ಲಿ ಕುಟುಂಬದಲ್ಲಿ ಸರ್ಕಾರಿ ನೌಕರರಿದ್ದಾರಾ ಅಂತಾ ಪ್ರಶ್ನೆ ಸೇರಿಸಲಾಗಿದೆ. ಸರ್ಕಾರಿ ನೌಕರರಿದ್ದರೆ ಕುಟುಂಬ ಅರ್ಜಿ ಸಲ್ಲಿಕೆಗೆ ಅರ್ಹರಲ್ವಾ ಎಂಬ ಪ್ರಶ್ನೆ ಮೂಡಿದೆ. ಸರ್ಕಾರಿ ನೌಕರಿ ಪ್ರಶ್ನೆ ಕೇಳಿ ಜರಡಿ ಇಡಿಯಲು ಸರ್ಕಾರ ಮುಂದಾಗಿರುವ ಸಾಧ್ಯತೆ ಇದೆ.
