ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಆಪರೇಷನ್ ರಾಜಕಾರಣದ ಸದ್ದು ಜೋರಾಗಿಯೇ ಕೇಳುತ್ತಿದ್ದು, ಕಾಂಗ್ರೆಸ್ನ ಕೆಲವು ಶಾಸಕರಿಗೆ ಆಪರೇಷನ್ ಕರೆಗಳು ಬರುತ್ತಿದ್ದಾವೆ ಎಂಬ ಮಾತುಗಳು ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಹೌದು, ಮುಂಬರುವ ಪರಿಷತ್ ಚುನಾವಣೆಗೆ ಜೆಡಿಎಸ್‌ನಿಂದ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ನಡೆಸುತ್ತಿದೆ ಎಂಬ ಆರೋಪಕ್ಕೆ ಕುರಿತಂತೆ ಇದೀಗ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆಸಿದ್ದಾರೆ.
ನಗರದಲ್ಲಿ ಈ ಕುರಿತು ಇಂದು (ಬುಧವಾರ ಜೂನ್ 17) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಇಂತಹ ಯಾವುದೇ ಆಪರೇಷನ್ ನಡೆಸುತ್ತಿಲ್ಲ. ನಾವು ಯಾಕೆ ಆಪರೇಷನ್ ಮಾಡೋಣ? ನಮ್ದು ಒಂದು ಸಣ್ಣ ಪಕ್ಷ. ನಮ್ಮ ಪಕ್ಷದಲ್ಲಿ ಏನಿದೆ ಅಂತ ನಾವು ಆಪರೇಷನ್ ಮಾಡೋಣ. ಸರ್ಕಾರ ಅವರ ಕೈಯಲ್ಲಿದೆ. ಮ್ಯಾನ್ ಪವರು, ಮಜಲ್ ಪವರು, ಹಣದ ಪವರು ಎಲ್ಲಾ ಅವರೇ ಇಟ್ಕೊಂಡವ್ರೆ. ಅವರ ಮುಂದೆ ನಾವು ಫೈಟ್ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದ್ರು. ಇದನ್ನೂ ಓದಿ: ಮಾಜಿ ಸಚಿವ ವಿರುದ್ಧ ಭ್ರಷ್ಟಾಚಾರ ಆರೋಪ ರಾಜ್ಯಪಾಲರಿಗೆ ದೂರು!
ಜೆಡಿಎಸ್ ತನ್ನ ಪಕ್ಷದ ಮತಗಳು ಚಲ್ಲಾಪಿಲ್ಲಿ ಆಗಬಾರದು, ಒಟ್ಟಾಗಿರಬೇಕು ಎಂಬ ಉದ್ದೇಶದಿಂದಲೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಗೆಲ್ಲುವ ಉದ್ದೇಶದಿಂದ ಕುತಂತ್ರದ ಮಾರ್ಗ ಅನುಸರಿಸುವ ಪ್ರಶ್ನೆಯೇ ಇಲ್ಲ. ನಮ್ಮ ಅಭ್ಯರ್ಥಿ ಆತ್ಮಸಾಕ್ಷಿ ಮತವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಸರ್ಪ್ಲಸ್ ಮತಗಳ ಬೆಂಬಲಕ್ಕಾಗಿ ಬಿಜೆಪಿ ನಾಯಕರಿಗೆ ಮನವಿ ಮಾಡಲಾಗಿದೆ. ಇದು ನಮ್ಮ ಮತಗಳನ್ನು ಭದ್ರವಾಗಿ ಇಟ್ಟುಕೊಳ್ಳುವ ಸಲುವಾಗಿ ಮಾಡಿದ ಪ್ರಯತ್ನವಷ್ಟೇ ಎಂದವರು ತಿಳಿಸಿದ್ದಾರೆ.
