Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬಡವರ ಉದ್ಧಾರವೇ ನಿಜವಾದ ರಾಜಕಾರಣ
  • Politics
  • State
  • ಶಹಾಪುರ

ಬಡವರ ಉದ್ಧಾರವೇ ನಿಜವಾದ ರಾಜಕಾರಣ

Praja Vahini June 16, 2026
Screenshot_2026-06-16-20-00-41-34_6012fa4d4ddec268fc5c7112cbb265e7
Spread the love

ಶಹಾಪುರ: ಆರೋಗ್ಯವಂತ ಸಮಾಜ ಕಟ್ಟುವುದು ಮತ್ತು ಬಡವರ ಉದ್ಧಾರಕ್ಕಾಗಿ ಕೆಲಸ ಮಾಡುವುದೇ ನಿಜವಾದ ರಾಜಕಾರಣವಾಗಿದ್ದು, ಎಲ್ಲಾ ಸಮುದಾಯದವರಿಗೂ ಭವನ ನಿರ್ಮಾಣಕ್ಕೆ ಆದ್ಯತೆ ನೀಡಿ ಬಡವರಿಗೆ , ಸಭೆ ಸಮಾರಂಭಗಳನ್ನು ಮಾಡಲು ಭವನಗಳು ಪೂರಕವಾಗಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಬಾಪುಗೌಡ ನಗರ ಬಡಾವಣೆಯಲ್ಲಿ ಪ್ರಗತಿಯಲ್ಲಿರುವ ಮುಖ್ಯಮಂತ್ರಿ ವಿಶೇಷ ಅನುದಾನದಡಿಯಲ್ಲಿ 2.20ಕೋಟಿ ರೂ. ವೆಚ್ಚದಲ್ಲಿ ಕನಕ ಭವನ ಮತ್ತು 2 ಕೋಟಿ ರೂ. ವೆಚ್ಚ ವೀರಶೈವ ಭವನ, ಆಶ್ರಯ ಲೇಔಟ್ ಸರ್ವೆ ನಂಬರ 120 ರಲ್ಲಿ 2 ಕೋಟಿ, ಐಡಿಎಸ್‌ಎಮ್‌ಟಿ ಲೇಜೌಟ್ 70 ಲಕ್ಷ ರೂ ವೆಚ್ಚದ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದ ಅವರು
ನಮ್ಮ ಮೇಲೆ ವಿಶ್ವಾಸವಿರಲಿ. ತಾಲೂಕಿನಲ್ಲಿ ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಬಹುತೇಕ ಗ್ರಾಮಗಳಲ್ಲಿ ಆಯಾ ಸಮುದಾಯದಗಳ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಮತ್ತು ಇದೀಗ ಕೋಟ್ಯಾನು ರೂಪಾಯಿ ವೆಚ್ಚದಲ್ಲಿ ನಗರ ಪ್ರದೇಶದಲ್ಲಿ ಭವನಗಳು ಸಜ್ಜುಗೊಳ್ಳಲಿದ್ದು, ನಗರ ವ್ಯಾಪ್ತಿಯ ಜನತೆಗೆ ಅನುಕೂಲವಾಗಲಿದೆ. ಸುಸಜ್ಜಿತ ಕಟ್ಟಡದ ಜೊತೆಗೆ ಮೂಲ ಸೌಕರ್ಯ ಒಳಗೊಂಡಿದೆ. ಅಂದಾಜು ಪಟ್ಟಿಯ ತಕ್ಕಂತೆ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಸಮುದಾಯದ ನಾಯಕರ ಮನವಿಗೆ ತಕ್ಕಂತೆ ಅಗತ್ಯಕ್ಕನುಗುಣವಾದ ಸೌಕರ್ಯವನ್ನು ಸಹ ಕಲ್ಪಿಸಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಬಹುತೇಕ ಮಠ, ಮಂದಿರ, ಕಲ್ಯಾಣ ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಕುರುಬ ಸಮಾಜಕ್ಕೆ ಹೆಚ್ಚಿನ ಒತ್ತು ನೀಡಿ ಅನುದಾನ ಒದಗಿಸಲಾಗುತ್ತಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುವುದರ ಜೊತೆಗೆ ಅಭಿವೃದ್ಧಿಗೆ ಬದ್ದವಾಗಿದ್ದೇವೆ ಎಂದರು.

ನಗರದಲ್ಲಿರುವ ಸಂಗೂಳ್ಳಿ ರಾಯಣ್ಣರ ಮೂರ್ತಿ ಉದ್ಘಾಟನೆಗೆ ಮುಖ್ಯಮಂತ್ರಿ ಡಿ.ಕೆ ಶಿವುಕುಮಾರ ಹಾಗೂ ಸಿದ್ದರಾಮಯ್ಯ ಅವರ ಬಳಿ ದಿನಾಂಕ ಪಡೆದು ಉದ್ಘಾಟನೆ ಮಡಲಾಗುವುದು ಮತ್ತು ಈಗಾಗಲೇ ಪ್ರಗತಿಯಲ್ಲಿರುವ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ೨೦೨೬ರ ಅಂತ್ಯದೊಳಗೆ ಪೂರ್ಣಗೊಂಡು ಚಾಲನೆ ಸಿಗಲಿವೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗೌಡಪ್ಪಗೌಡ ಆಲ್ದಾಳ, ಶಿವುಮಹಾಂತ ಚಂದಾಪುರ, ಡಾ.ಭೀಮಣ್ಣ ಮೇಟಿ, ಕುರುಬ ಸಮಾಜದ ತಾಲೂಕ ಅಧ್ಯಕ್ಷ ಯಲ್ಲಪ್ಪ ನರಿ, ಈರಣಗೌಡ ಮಲ್ಲಾಬಾದಿ, ಶಾಂತಗೌಡ ನಾಗನಟಿಗಿ, ಭೀಮಾಶಂಕರ ಹುಲ್ಕಲ್, ಮಲ್ಲಣಗೌಡ ತಿಪ್ಪನಹಳ್ಳಿ, ಯಮನಪ್ಪ ಅಗಸ್ಥಾಳ, ಶರಣಗೌಡ ಚಾಮನಾಳ, ಭೀಮನಗೌಡ ದರಿಯಾಪುರ, ರಾಯಪ್ಪ ಚುಲವಾದಿ, ಶರಣಬಸವ ಸೈದಾಪುರ, ಸಿದ್ದಪ್ಪ ಕನ್ಯಾಕೊಳ್ಳೂರ , ರವಿ ರಾಜಾಪುರ, ಬಲಭೀಮ ಮಡ್ನಾಳ, ದೇವಿಂದ್ರಪ್ಪ ನಾಶಿ, ನಾನಾಗೌಡ ಮೇಟಿ, ತಿರುಪತಿ ಬಾಣತಿಹಾಳ, ಮರ್ದಾನಿ ಸಲಾದಪುರ, ಎಇಇ ಸೂಗರೆಡ್ಡಿ, ಎಇ ಮರೆಪ್ಪ, ರಾಯಪ್ಪ ಕನ್ಯಾಕೊಳ್ಳುರ ಸೇರಿದಂತೆ ಇತರರು ಇದ್ದರು.
ಕಾಮಗಾರಿ ವೀಕ್ಷಣೆ
ಕನಕ ಭವನ ವೀಕ್ಷಣೆ ಬಳಿಕ ಶಾಸಕರು ಸರ್ವೆ. ನಂ 120 ರ ಆಶ್ರಯ ಲೇಜೌಟ್‌ನಲ್ಲಿ ಪ್ರಗತಿಯಲ್ಲಿರುವ ರಸ್ತೆ, ಚರಂಡಿ ಕಾಮಗಾರಿ ವೀಕ್ಷಿಸಿ ಗುಣಮಟ್ಟದ ವಸ್ತಗಳನ್ನು ಬಳಸಿ ಕಾಮಗಾರಿ ಮಾಡಲು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಗುರುನಾಥರೆಡ್ಡಿ ಹಳಿಸಗರ, ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್, ಎಇಇ ನಾನಾಸಾಬ್ ಸೇರಿದಂತೆ ಅಧಿಕಾರಿಗಳು ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ದೈಹಿಕ ಶಿಕ್ಷಣ ಶಿಕ್ಷಕರ ಭರ್ತಿ ಮಾಡಿ, ಕೆಇಬಿ ಖಾಸಗೀಕರಣಕ್ಕೆ ತಡೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಸಿಎಂಗೆ ಮನವಿ
Next: ಮಾಜಿ ಸಚಿವ ವಿರುದ್ಧ ಭ್ರಷ್ಟಾಚಾರ ಆರೋಪ ರಾಜ್ಯಪಾಲರಿಗೆ ದೂರು!

Views:

200

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.