Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಅನಾಧಿಕೃತವಾಗಿ ಪಾರ್ಕಿಂಗ್ ಮಾಡಿದ್ರೆ ನಿಮ್ಮ ವಾಹನ ಮಂಗಮಾಯ ಆಗೋದು ಗ್ಯಾರಂಟಿ!
  • Bangalore
  • State

ಅನಾಧಿಕೃತವಾಗಿ ಪಾರ್ಕಿಂಗ್ ಮಾಡಿದ್ರೆ ನಿಮ್ಮ ವಾಹನ ಮಂಗಮಾಯ ಆಗೋದು ಗ್ಯಾರಂಟಿ!

Praja Vahini June 12, 2026 1 minute read
WhatsApp Image 2026-06-12 at 12.04.10
Spread the love

ಬೆಂಗಳೂರು: ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಇದನ್ನು ಬಗೆಹರಿಸುವ ಕುರಿತಾಗಿ ಇದೀಗ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ ರಮೇಶ ರವರು ಸಂಚಾರದಟ್ಟನೆ ಹಾಗೂ ಮಳೆ ಸಂದರ್ಭದಲ್ಲಿ ರಸ್ತೆಗಳು ಜಲಾವೃತಗೊಳ್ಳುತ್ತಿರುವ ಸಮಸ್ಯೆಗಳಿಗೆ ತುರ್ತು ನಿಗವಹಿಸುವ ಕುರಿತಾಗಿ ಸಂಚಾರ ಪೊಲೀಸ್ ಹಾಗೂ ಪಾಲಿಕೆ ಅಭಿಯಂತರರೊಂದಿಗೆ ಇಂದು (ಶುಕ್ರವಾರ ಜೂ. 12) ಸಭೆ ನಡೆಸಿದರು.

ಸಭೆಯಲ್ಲಿ ರಸ್ತೆಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾರ್ಯಪ್ರವೃತ್ತರಾಗಲು ಅಭಿಯಂತರರಿಗೆ ಆಯುಕ್ತರು ಸೂಚಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ನೀರು ನಿಲ್ಲುವ ಪ್ರಮುಖ 10 ಜಲಾವೃತ ಪ್ರದೇಶಗಳ ಮೇಲೆ ನಿಗಾ

ಸಂಚಾರ ಪೊಲೀಸರು ಗುರುತಿಸಿರುವ ಹುಳಿಮಾವು ಕೆರೆ ಜಂಕ್ಷನ್, ಸಾಗರ್ ಜಂಕ್ಷನ್‌ನಿಂದ ಸಾಗರ್ ಆಸ್ಪತ್ರೆ, ಹೆಚ್.ಎಸ್.ಆರ್ ಲೇಔಟ್ 14ನೇ ಮುಖ್ಯ ರಸ್ತೆ, ಸೋನಿ ವರ್ಲ್ಡ್ ಜಂಕ್ಷನ್, ಹೊರವರ್ತುಲ ರಸ್ತೆ, ಹೆಚ್.ಎಸ್.ಆರ್ ಲೇಔಟ್ 5ನೇ ಮುಖ್ಯ ರಸ್ತೆ, ಶ್ರೀ ರಂಗಂ ಜಂಕ್ಷನ್, ಬೆಳ್ಳಂದೂರು – ಇಬ್ಬಲೂರು ಜಂಕ್ಷನ್, ವಿಪ್ರೋ ಜಂಕ್ಷನ್ – ಸರ್ಜಾಪುರ ರಸ್ತೆ, ರೂಪೇನ ಅಗ್ರಹಾರ, ಮಡಿವಾಳ ಅಯ್ಯಪ್ಪ ಜಂಕ್ಷನ್ ಗಳ ಮೇಲೆ ಮಳೆ ಸಂಧರ್ಭದಲ್ಲಿ ತೀವ್ರ ನಿಗಾ  ವಹಿಸುವಂತೆ ಅಭಿಯಂತರರಿಗೆ ಸೂಚಿಸಿದರು.

ಟೋಯಿಂಗ್ ವಾಹನಗಳ ನಿಯೋಜನೆ

ವಾಹನಗಳ ಅಡ್ಡ ದಿಡ್ಡಿ ಪಾರ್ಕಿಂಗ್ ನಿಂದ ಸಂಚಾರ ವ್ಯತೆಯ ತಡೆಗಟ್ಟಲು ಅನಾಧಿಕೃತವಾಗಿ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ಟೋಯಿಂಗ್ ಮಾಡಲು ಪಾಲಿಕೆ ಒಟ್ಟು 6 ಟೋಯಿಂಗ್ ವಾಹನಗಳನ್ನು ನೀಡಿರುತ್ತದೆ. ಜಯನಗರಕ್ಕೆ 3 ಹಾಗೂ ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ಮತ್ತು ಬೆಳ್ಳಂದೂರು ಭಾಗಕ್ಕೆ 3 ವಾಹನಗಳನ್ನು ಬಳಸಿಕೊಳುವಂತೆ ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಿದರು. ಮುಂದುವರೆದು ಟೋವಿಂಗ್ ಮಾಡಿದ ವಾಹನಗಳ ನಿಲುಗಡೆಗೆಗಾಗಿ ಮಲ್ಲಸಂದ್ರ ಮೈದಾನ ಹಾಗೂ ಎಜಿಎಸ್ ಲೇಔಟ್ ಮೈದಾನವನ್ನು ಬಳಸಿಕೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಆಯುಕ್ತರು ಸೂಚಿಸಿದರು. ಇದನ್ನೂ ಒದಿ: ರಾಷ್ಟ್ರಪತಿ ಭೇಟಿಯಾಗಿ ಸುದೀರ್ಘ ಸಮಾಲೋಚನೆ ನಡೆಸಿದ ಸಿಎಂ ಡಿಕೆಶಿ

ಬನ್ನೇರುಘಟ್ಟ ಮುಖ್ಯ ರಸ್ತೆ ನೈಸ್ ರೋಡ್ ಅಭಿವೃದ್ಧಿಗೆ ಸೂಚನೆ

ಬನ್ನೇರುಘಟ್ಟ ಮುಖ್ಯರಸ್ತೆಯ ನೈಸ್ ಜಂಕ್ಷನ್ ನಲ್ಲಿ ಉಂಟಾಗುತ್ತಿರುವ ವಿಪರೀತ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮೈಸೂರು ರಸ್ತೆಯ ನೈಸ್ ಜಂಕ್ಷನ್ ಮಾದರಿಯಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯ ನೈಸ್ ಜಂಕ್ಷನ್ ನಲ್ಲಿ ಲೂಪ್ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

 

About the Author

Praja Vahini

Editor

View All Posts

Spread the love

Post navigation

Previous: ರಾಷ್ಟ್ರಪತಿ ಭೇಟಿಯಾಗಿ ಸುದೀರ್ಘ ಸಮಾಲೋಚನೆ ನಡೆಸಿದ ಸಿಎಂ ಡಿಕೆಶಿ
Next: ನಾನು ಜೀವಂತವಾಗಿದ್ದೇನೆ ಸುಳ್ಳು ಸುದ್ದಿ ನಂಬಬೇಡಿ: ದೊಡ್ಡಣ್ಣ

Views:

20

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.