ಸಮಸ್ಯೆ ಹಬ್ಬಿಸುತ್ತಿರುವ ಪಿಡಿಓ ವಿರುದ್ಧ ಮಹಿಳೆಯರ ಹಿಡಿಶಾಪ
ಶಹಾಪುರ: ತಾಲೂಕಿನ ಮೂಡಬೂಳ ಗ್ರಾಮದ ಮಹಿಳೆಯರು ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ ಮತ್ತೊಂದೆಡೆ ಗ್ರಾಮದಲ್ಲಿ ಕೇಲವರು ಮಹಿಳೆಯರು ಶೌಚಾಲಯಕ್ಕೆ ಹೋಗಲು ದಾರಿ ಬಿಡುತ್ತಿಲ್ಲಾ. ಇದರ ನಡುವೆ ಬಯಲು ಶೌಚಾಲಯವೇ ಗತಿ ಎನ್ನುವಂತಾಗಿದ್ದು ನಮಗೆ ನೂತನ ಶೌಚಾಲಯ ಬೇಕೆ ಬೇಕು ಎಂದು ತಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶೌಚಾಲಯದ ಅವ್ಯವಸ್ಥೆ ಬಗ್ಗೆ ಖಂಡಿಸಿ ಈಗಾಗಲೇ ಗ್ರಾ.ಪಂಗೆ ಮುಳ್ಳು ಕಂಠಿ ಬಡಿದು ಪ್ರತಿಭಟನೆ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲಾ. ಇದೀಗ ನಿಮ್ಮ ಬಳಿ ಬಂದಿದ್ದು ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕು. ಶೌಚಾಲಯವು ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದ್ದು. ಇದರಿಂದ ಗ್ರಾಮದ ಮಹಿಳೆಯರು ವಂಚಿತರಾಗಿದ್ದೀವಿ ಎಂದರು.
ಎಂಟತ್ತು ವರ್ಷಗಳಿಂದ ಹಳೆಯ ಶೌಚಾಲಯದಲ್ಲಿ ಹೋಗಕ್ಕೂ ಆಗದೇ ಬಿಡಲು ಆಗದೇ ಕಷ್ಟ ಪಡುತ್ತಿದ್ದೇವೆ. ಚುನಾವಣೆಯಲ್ಲಿ ಸಾಕಷ್ಟು ಭರವಸೆಯನ್ನು ನೀಡುತ್ತಾರೆ. ನಂತರ ನಮ್ಮನ್ನು ಯಾರು ಕೇಳುವುದಿಲ್ಲ. ಶೌಚಾಲಯ ನಿರ್ಮಾಣಕ್ಕಾಗಿ ಹಲವಾರು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲಾ. ಮಹಿಳೆಯರ ಮಾನ ಕಾಪಾಡಬೇಕಾದ ಆಡಳಿತವೇ ಶೌಚಾಲಯದ ದುರಸ್ಥೀಯ ಹೆಸರಲ್ಲಿ ಬಂದಂತಹ ಅನುದಾನ ತಿಂದು ತೇಗಿದ್ದಾರೆ. ಇಂತಹ ಕೆಲಸ ಮಾಡುತ್ತಿರುವುದು ಸರಿಯಲ್ಲ. ಶೀಘ್ರದಲ್ಲೇ ಮಹಿಳೆಯರಿಗೆ ನೂತನ ಶೌಚಾಲಯ ನಿರ್ಮಾಣ ಮಾಡಿಕೊಡಬೇಕು ಶೌಚಾಲಯಕ್ಕೆ ದಾರಿ ಬಿಡದ ಗ್ರಾಮದ ಕೇಲವರ ವಿರುದ್ಧ ಕ್ರಮ ಕೈಗೊಂಡು ಮಹಿಳೆಯರಿಗೆ ಶೌಚಾಲಯಕ್ಕೆ ದಾರಿ ಮಾಡಿಕೊಡಬೇಕು ಎಂದು ಪಟ್ಟು ಹಿಡಿದರು.
ಜನತೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಶೌಚಾಲಯ ಸೌಲಭ್ಯ ಕಲ್ಪಿಸಲು ಪಿಡಿಓ ಹಾಗೂ ಜನಪ್ರತಿನಧಿಗಳು ಹಿಂದುಳಿದಿದ್ದಾರೆ. ಜನರು ತೆರಿಗೆ ರೂಪದಲ್ಲಿ ಆದಾಯ ನೀಡುತ್ತಿದ್ದಾರೆ ಆದರೆ ಜನರಿಗೆ ಬೇಕಾಗಿರು ಸೌಲಭ್ಯ ಕಲ್ಪಿಸಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳಿಗೆ ಜನ ಹಿಡಿಶಾಪ ಹಾಕಿದರು.
ಶೌಚಾಲಯ ನಿರ್ಮಿಸಿಕೊಡಲು ಮನವಿ
ಗ್ರಾಮದಲ್ಲಿ ಶೌಚಾಲಯಕ್ಕೆ ದಾರಿ ಕೊಡದೇ ಕೇಲವರು ಸಮಸ್ಯೆ ಉದ್ಭವಿಸುವಂತೆ ಮಾಡಿದ್ದಾರೆ. ಇಷ್ಟಲ್ಲದೆ ಇದಕ್ಕೆ ಗ್ರಾ.ಪಂ ಆಡಳಿತಾಧಿಕಾರಿಗಳೆ ಎತ್ತಿ ಕಟ್ಟುತ್ತಿದ್ದಾರೆ. ಈ ಬಗ್ಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿದರೆ ಮಹಿಳೆಯರಿಗೆ ಹೋಗಲು ದಾರಿ ಬಿಡಬಹುದು. ಆದರೆ ರಾಜಿ ಸಂದಾನ ಮಾಡಬೇಕಾದ ಪಿಡಿಓ ಸಮಸ್ಯೆ ಹಬ್ಬುವಂತೆ ಮಾಡುತ್ತಿದ್ದಾನೆ. ಮಹಿಳೆಯರು ಪುರುಷರಂತೆ ರಸ್ತೆ ಬದಿಯಲ್ಲಿ ಶೌಚಾಲಯಕ್ಕೆ ಹೋಗಲು ಆಗುವುದಿಲ್ಲ. ಮಹಿಳೆಯರಿಗೆ ಅಗತ್ಯವಿರುವ ಶೌಚಾಲಯ ನಿರ್ಮಿಸಿ ಕೂಡಲು ಅಧಿಕಾರಿಗಳಿಗೆ ಸೂಚಿಸುವಂತೆ ಮಹಿಳೆಯರೆಲ್ಲರೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಗ್ರಾಮದ ಮಹಿಳೆಯರಾದ ಸಾವಿತ್ರಮ್ಮ, ಯಂಕಮ್ಮ, ಮಲ್ಕಮ್ಮ, ಹುಲ್ಗಮ್ಮ, ಶರಣಮ್ಮ ಮನವಿ ಮಾಡಿದರು.
ಶೌಚಾಲಯಕ್ಕೆ ತೆರಳಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ
ಗ್ರಾಮದಲ್ಲಿ ಈಗಾಗಲೇ ಸುಮಾರು 25 ವರ್ಷಗಳ ಹಿಂದಿನ ಹಳೆಯ ಮಹಿಳೆಯರ ಶೌಚಾಲಯವಿದೆ. ಆದರೆ ಶೌಚಾಲಯಕ್ಕೆ ತೆರಳಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದು, ಅದೇ ಗ್ರಾಮಸ್ಥರು ಖಾಸಗಿ ಜಾಗದಲ್ಲಿ ಶೌಚಾಲಯ ನಿರ್ಮಾಣಗೊಂಡಿದೆ ಎಂದು ದಾರಿಗೆ ಮುಳ್ಳು ಹಚ್ಚಿ, ಈ ಬಗ್ಗೆ ತಾ.ಪಂ ಕಛೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಸರ್ವೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಾ.ಪಂ ಇಓ ಬಸವರಾಜ ಶರಬೈ ತಿಳಿಸಿದ್ದಾರೆ.
