ಬೆಂಗಳೂರು: ಪ್ರಿಯಾಂಕ ಖರ್ಗೆ ಅವರು ಗೃಹ ಸಚಿವರ ಸ್ಥಾನ ವಹಿಸಿಕೊಂಡ ಮೇಲೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಸಭೆ ನಡೆಸುತ್ತಿರುವ ಅವರು ಇಂದು (ಬುಧವಾರ ಜೂನ್ 10) REDAI ಕರ್ನಾಟಕ ಸದಸ್ಯರೊಂದಿಗೆ ಸೌಜನ್ಯಯುತ ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಅವರು, ಸರ್ಕಾರ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳ ನಡುವಿನ ಸಹಕಾರವನ್ನು ಬಲಪಡಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು ಎಂದು ತಿಳಿಸಿದರು.
ನಾವು ಉದ್ಯಮದ ದೃಷ್ಟಿಕೋನದಿಂದ ಪ್ರಸ್ತುತ ನಿಯಮಾವಳಿ, ಕಟ್ಟಡ ಸುರಕ್ಷತಾ ಚೌಕಟ್ಟುಗಳು ಹಾಗೂ ಡೇಟಾ ಸೆಂಟರ್ಗಳು ಮುಂತಾದ ಹೊಸ ಕ್ಷೇತ್ರಗಳ ಬೆಳೆಯುತ್ತಿರುವ ಮೂಲಸೌಕರ್ಯ ಅಗತ್ಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಇದನ್ನೂ ಓದಿ: ಮೋದಿ ಐತಿಹಾಸಿಕ ಮೈಲುಗಲ್ಲು; ದೇವರಿಗೆ ವಿಶೇಷ ಪೂಜಿ ಸಲ್ಲಿಸಿದ ಬೊಮ್ಮಾಯಿ
ಕರ್ನಾಟಕ ಸರ್ಕಾರವು ಸುರಕ್ಷಿತ, ಪರಿಣಾಮಕಾರಿ ಮತ್ತು ಭವಿಷ್ಯಕ್ಕೆ ತಯಾರಾದ ನಗರ ಮೂಲಸೌಕರ್ಯವನ್ನು ಸುಗಮಗೊಳಿಸಲು ಅಗತ್ಯವಾದ ಬೆಂಬಲವನ್ನು ಮುಂದುವರಿಸುತ್ತಲೇ ಇರುತ್ತದೆ ಎಂದು ನಾನು ಭರವಸೆ ನೀಡಿದರು.
