ಬೆಂಗಳೂರು: ವಿ ಸೋಮಣ್ಣ ಅವರು ಕೇಂದ್ರ ಸಚಿವರಾದ ಮೇಲೆ ಕರ್ನಾಟಕ ರಾಜ್ಯಕ್ಕೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದಾರೆ.
ಹೌದು, ಕೇಂದ್ರ ಸಚಿವ ವಿ ಸೋಮಣ್ಣ ಅವರು ರೈಲ್ವೆ ಸಚಿವರದಾಗಿನಿಂದ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ತುಮಕೂರು ಮತ್ತು ಯಶವಂತಪುರದಲ್ಲಿರುವ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆಗಳನ್ನು ನಡೆಸುತ್ತಿದ್ದಾರೆ.
ಅದರಂತೆ ಇಂದು (ಮಂಗಳವಾರ ಜೂನ್ 9) ಕಂಟೋನ್ಮೆಂಟ್ನಲ್ಲಿರುವ ಮುಖ್ಯ ಆಡಳಿತ ಕಚೇರಿಯಲ್ಲಿಂದು ನೈಋತ್ಯ ರೈಲ್ವೆ (ನಿರ್ಮಾಣ ಘಟಕ) ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತುಮಕೂರು ಮತ್ತು ಯಶವಂತಪುರದಲ್ಲಿನ ಮುಂಬರುವ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿಗಳನ್ನ ತೋರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ವಿಶಾಖಪಟ್ಟಣ ದುರಂತ; ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ
ಈ ಸಭೆಯಲ್ಲಿ, ಸಿಎಒ ಅಜಯ್ ಶರ್ಮಾ ಅವರು, ಮುಖ್ಯ ಎಂಜಿನಿಯರ್ಗಳಾದ ಪ್ರಸಾದ್, ಶ್ರೀ ಪುರಿ, ಪ್ರೇಮ್ ನಾರಾಯಣ್ ಮತ್ತು ನೈಋತ್ಯ ರೈಲ್ವೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
