ಬೆಂಗಳೂರು: ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷ ಸೇರಿದ ಡಿಕೆ ಶಿವಕುಮಾರ್ ಇಂದು ರಾಜ್ಯ ಆಳುವ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜ ಭವನದಲ್ಲಿರುವ ಗ್ಲಾಸ್ ಹೌಸ್ ನಲ್ಲಿ ಇಂದು (ಬುಧವಾರ ಜೂನ್ 3) ಸಂಜೆ 4:00 5 ನಿಮಿಷಕ್ಕೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ರವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಹಲವಾರು ವರ್ಷಗಳು ಪಕ್ಷಕ್ಕಾಗಿ ಹಗಲು, ರಾತ್ರಿ ಎನ್ನದೆ ದುಡಿದಿರುವ ಕನಕಪುರದ ಬಂಡೆ ಇದೀಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ.
ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ದಿನದಿಂದ ಇಂದಿನವರೆಗೂ ಪಕ್ಷ ಸಂಘಟನೆಗಾಗಿ ಹೈಕಮಾಂಡ್ ನೀಡಿರುವ ಸೂಚನೆಯಂತೆ ಎಲ್ಲ ರೀತಿಯ ಜವಾಬ್ದಾರಿಗಳನ್ನ ಚಾಚು ತಪ್ಪದೆ ನಿರ್ವಹಿಸಿರುವ ದಿಟ್ಟ ನಾಯಕ ಡಿಕೆ ಎಂದರೆ ತಪ್ಪಾಗಲಾರದು.
ಶಿಸ್ತಿನ ಸಿಪಾಯಿಯಂತೆ ಪಕ್ಷವನ್ನು ಬಲವರ್ಧನೆ ಮಾಡಿ 2023ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮವಹಿಸಿ ಹೈಕಮಾಂಡ್ ಸೂಚನೆಯಂತೆ ಹಿರಿಯ ನಾಯಕ ಸಿದ್ದರಾಮಯ್ಯನವರಿಗೆ ಮೊದಲನೇ ಅವಕಾಶವನ್ನು ನೀಡಿ ಸತತ ಮೂರು ವರ್ಷಗಳ ಕಾಲ ಉಪಮುಖ್ಯಮಂತ್ರಿಗಳಾಗಿ ಪಕ್ಷ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನ ಬಗೆಹರಿಸುವುದರಲ್ಲಿ ಯಶಸ್ವಿಯಾಗಿರುತ್ತಾರೆ.
ಪ್ರಸ್ತುತ ಹೈಕಮಾಂಡ್ ಆಶೀರ್ವಾದದ ಮೇರೆಗೆ ಮುಖ್ಯಮಂತ್ರಿಗಳಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಲೋಕಸಭಾ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾದ ರೇವಂತ್ ರೆಡ್ಡಿ, ಕೇರಳ ರಾಜ್ಯದ ಮುಖ್ಯಮಂತ್ರಿಯಾದ ಸತೀಶ್ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರುಗಳು ಕೆ ಸಿ ವೇಣುಗೋಪಾಲ್ ಸುಜೇವಾಲ ಸೇರಿದಂತೆ ಇನ್ನು ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನೂತನ ಉಪಮುಖ್ಯಮಂತ್ರಿಗಳಾಗಿ ಡಾ. ಜಿ ಪರಮೇಶ್ವರ್, ಸಚಿವರಾಗಿ ಕೆಹೆಚ್ ಮುನಿಯಪ್ಪ, ಯು ಟಿ ಖಾದರ್, ಕೃಷ್ಣ ಬೈರೇಗೌಡ, ಬೈರುತಿ ಸುರೇಶ್, ಡಾ. ಶರಣು ಪ್ರಕಾಶ್ ಪಾಟೀಲ್, ರಾಮಲಿಂಗ ರೆಡ್ಡಿ, ಕೆಜೆ ಜಾರ್ಜ್, ಪ್ರಿಯಾಂಕ ಖರ್ಗೆ, ಈಶ್ವರ್ ಈಶ್ವರ್ ಖಂಡ್ರೆ, ಯತೀಂದ್ರ ಸಿದ್ರಾಮಯ್ಯ, ಎಂ ಬಿ ಪಾಟೀಲ್ ಸೇರಿದಂತೆ 13 ಜನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೊತೆ ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
