ಬೆಂಗಳೂರು: ದೇಶದ ಸ್ವಾತಂತ್ರ್ಯ ಹೋರಾಟದಿಂದಲೇ ಜನರ ಪರವಾಗಿ ನಿಂತಿರುವ ಕಾಂಗ್ರೆಸ್ ಪಕ್ಷ, ಇಂದು ಕೂಡಾ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಅಭಿವೃದ್ಧಿಯ ಮೌಲ್ಯಗಳನ್ನು ಕಾಪಾಡುತ್ತಾ ಸಾಗುತ್ತಿದೆ ಎಂದು ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಹೇಳಿದರು.
ನಗರದಲ್ಲಿ ಒಂದು (ಬುಧವಾರ ಜೂನ್ 3) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಡವರು, ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರ ಬದುಕು ಉತ್ತಮವಾಗಬೇಕು ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ವೈಶಿಷ್ಟ್ಯ ಎಂದರು. ಇದನ್ನೂ ಓದಿ: ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂನ ಆಹ್ವಾನಿಸಿದ ಬಂಡೆ
ಧರ್ಮ, ಜಾತಿ, ಭಾಷೆ ಎನ್ನುವ ಭೇದಗಳನ್ನು ಮೀರಿ, “ಒಂದು ಭಾರತ – ಸಮಾನ ಅವಕಾಶಗಳು” ಎಂಬ ಕನಸನ್ನು ನನಸಾಗಿಸಲು ಕಾಂಗ್ರೆಸ್ ಸದಾ ಬದ್ಧವಾಗಿದೆ ಎಂದರು.
