ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರು ಈಗಾಗಲೇ ಕಳೆದ ಒಂದು ವರ್ಷದಿಂದ ಪರಪನ ಅಗ್ರಹಾರ ಜೈಲಿನಲ್ಲಿ ಪಡಬಾರದ ಕಷ್ಟಪಟ್ಟು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಲೀಲಾಜಾಲವಾಗಿ ಲೈಫ್ ಲೀಡ್ ಮಾಡುತ್ತಿದ್ದ ನಟ ದರ್ಶನ್ ಅವರು ಜೈಲಿನಲ್ಲಿ ಸರಿಯಾದ ಊಟ, ಉಪಚಾರ ಇಲ್ಲದೆ ಆರೋಗ್ಯ ಸಮಸ್ಯೆ ಎದುರಾಗಿರುವುದರ ಜೊತೆಗೆ ಮೊದಲಿನ ಮತ್ತು ಇತ್ತೀಚಿನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋವನ್ನು ಹೋಲಿಸಿದರೆ ನಟ ದರ್ಶನವರು ಮಾನಸಿಕವಾಗಿ ಬಹಳ ಕುಗ್ಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಅವರ ಫೋಟೋನೇ ಮಹಾಸಾಕ್ಷಿ ಯಾಗಿದೆ.
ಹೌದು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರ ಸ್ಥಿತಿ ನೋಡಿದರೆ ಮಮ್ಮರ ಮರುಗುವಂತೆ ಆಗುತ್ತಿದೆ. ಆನೆಯಂತಿದ್ದ ದೇಹ ಇದೀಗ ಸೊರಗಿ ಸಪ್ಪಗಾಗಿರುವುದನ್ನು ನೋಡಿ ಅವರ ಅಭಿಮಾನಿಗಳು ಭಾವುಕರಾಗಿದ್ದಾರೆ
ಹಲವು ತಿಂಗಳುಗಳಿಂದ ಜೈಲು ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಕುರಿತು ಅರ್ಜಿ ಸಲ್ಲಿಸಿದರು. ಆದರೆ ಸುಪ್ರೀಂ ಕೋರ್ಟ್ ನಟ ದರ್ಶನ್ ಅವರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿ ಇನ್ನೂ ಒಂದು ವರ್ಷಗಳ ಕಾಲ ಯಾವುದೇ ರೀತಿ ಜಾಮೀನು ಸಿಗಲ್ಲ ಎಂಬ ಆದೇಶ ಹೊರಡಿಸಿರುವ ಬೆನ್ನೆಲೆ ನಟ ದರ್ಶನ್ ಅವರು ಮಾನಸಿಕವಾಗಿ ಇನ್ನಷ್ಟು ಕುಗ್ಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪ್ರತಿಭಾವಂತರು, ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು: ಡಿಕೆಶಿ
ಹಾಗಾದ್ರೆ ನಟ ದರ್ಶನ್ ಅವರಿಗೆ ಇನ್ನು ಎಷ್ಟು ದಿನಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
