Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ದರ್ಶನಾಪುರಗೆ ‘ಡಿಸಿಎಂ’ ಸ್ಥಾನ ನೀಡಲು ಹೆಚ್ಚಿದ ಒತ್ತಡ
  • Politics
  • State
  • ಶಹಾಪುರ

ದರ್ಶನಾಪುರಗೆ ‘ಡಿಸಿಎಂ’ ಸ್ಥಾನ ನೀಡಲು ಹೆಚ್ಚಿದ ಒತ್ತಡ

Praja Vahini May 31, 2026
Screenshot_2026-05-31-20-45-19-87_6012fa4d4ddec268fc5c7112cbb265e7
Spread the love

ಶಹಾಪುರ: ಡಿ.ಕೆ ಶಿವಕುಮಾರ ನೇತೃತ್ವದಲ್ಲಿ ನೂತನ ಸಂಪುಟದಲ್ಲಿ ಶಹಾಪುರ ಮತಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ದಿ.ಎನ್ ಧರಂಸಿಂಗ್ ಅವರ ನಂತರ ಈ ಭಾಗಕ್ಕೆ ಸಿಎಂ, ಡಿಸಿಎಂ ಸ್ಥಾನ ಸಿಕ್ಕೇ ಇಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ದರ್ಶನಾಪುರ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸಿದ್ದು ಆರಬೋಳ ಒತ್ತಾಯಿಸಿದ್ದಾರೆ.

ಈ ವಿಷಯವಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿರುವ ಅವರು ರಾಜ್ಯದ ಪ್ರಭಾವಿ ನಾಯಕರಾಗಿದ್ದು, ದರ್ಶನಾಪುರ ಅವರು ಐದು ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. ಅವರಿಗೆ ಡಿಸಿಎಂ ಮಾಡುವುದರಿಂದ ಕಲ್ಯಾಣ ಕರ್ನಾಟಕದ ಜತೆಗೆ ರಾಜ್ಯದ ಅಭಿವೃದ್ಧಿಯೂ ಆಗಲಿದೆ. ರಾಜ್ಯದಲ್ಲಿ ಮೂರು ಬಾರಿ ಸಚಿವರಾಗಿ ರಾಜ್ಯದ ಪ್ರಗತಿಪರ ಹೊಸ ದಿಕ್ಕು ನೀಡಿದ್ದಾರೆ. ಈ ಹಿಂದಿನ ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರದಲ್ಲಿ ಕಾಂಗ್ರೆಸ್ ಸರ್ಕಾರದ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಿದ್ದಾರೆ, ಸಚಿವರಾಗಿ ಉತ್ತಮ ಆಡಳಿತಾತ್ಮಕ ಅನುಭವದೊಂದಿಗೆ ಜನಸಾಮಾನ್ಯರ ಪರ ಕೆಲಸ ಮಾಡುತ್ತಿದ್ದು, ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿದ್ದಾರೆ. ಪಕ್ಷ ನೀಷ್ಠೆ ಮತ್ತು ಅವರ ಚಾಣಕ್ಷತನ, ಹಿರಿತನ ಪರಿಗಣಿಸಿ ದರ್ಶನಾಪುರ ಅವರನ್ನು ಕಾಂಗ್ರೆಸ್ ಪಕ್ಷದ ವರಿಷ್ಟರು ಉಪಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಹಿರಿಯ, ಚಾಣಕ್ಷ ದರ್ಶನಾಪುರ ಅವರಿಗೆ ‘ಡಿಸಿಎಂ’ ಪಟ್ಟ ನೀಡಿ

ರಾಜ್ಯದ ಹಿರಿಯ ರಾಜಕಾರಣಿ, ಅಭಿವೃದ್ಧಿಯನ್ನೆ ಮೂಲ ಮಂತ್ರವನ್ನಾಗಿಸಿ ಕೊಂಡಿರುವ ಶರಣಬಸಪ್ಪಗೌಡ ದರ್ಶನಾಪುರ ಅವರನ್ನು ನೂತನ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಗುಂಡಪ್ಪ ತುಂಬಿಗಿ ಪಕ್ಷದ ರಾಷ್ಟç ಮತ್ತು ರಾಜ್ಯ ನಾಯಕರಿಗೆ ಒತ್ತಾಯಿಸಿದ್ದಾರೆ.

ಪಕ್ಷದ ಗ್ಯಾರಂಟಿಗಳ ಬಗ್ಗೆ ವಿಶಿಷ್ಟ ಪ್ರಚಾರ, ತವರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಗೆಲುವಿಗೆ ನಿರಂತರ ಶ್ರಮ, ಮತ್ತು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರವಹಿಸಿದರು. ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿಗೆ ಹೆಸರುವಾಸಿಯಾಗಿರುವ ತಮ್ಮದೇ ಆದ ಕೊಡುಗೆ ನೀಡಿರುವ ದರ್ಶನಾಪುರ ಅವರಿಗೆ ಉನ್ನತ ಸಚಿವರಾಗಿ, ಡಿಸಿಎಂ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಸಾಮರ್ಥ್ಯ ಅವರಲ್ಲಿದೆ. ಈಡೀ ರಾಜ್ಯದ ಅಭಿವೃದ್ಧಿಯ ದೃಷ್ಠಿಯಿಂದ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಡಿಸಿಎಂ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಮರ್ಥ ನಾಯಕ ದರ್ಶನಾಪುರ ಅವರನ್ನು ‘ಡಿಸಿಎಂ’ ಮಾಡಿ ರಾಜ್ಯದ ಮುಂದಿನ ಎರಡು ವರ್ಷದ ಕಾಂಗ್ರೆಸ್ ಸರ್ಕಾರದಲ್ಲಿ ಹೈಕಮಾಂಡ ಕ್ರೀಯಾಶೀಲ ನಾಯಕರಿಗೆ ಮೊದಲ ಆದ್ಯತೆ ನೀಡಬೇಕಿದ್ದು ಅದರಲ್ಲಿ ಮುಂಚೂಣಿಯಲ್ಲಿರುವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಡಿಸಿಎಂ ಪಟ್ಟ ನೀಡಬೇಕು. ಈ ವಿಚಾರವನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ಲಾ ಪಟೇಲ್ ಮಕ್ತಾಪುರ ಆಗ್ರಹಿಸಿದ್ದಾರೆ.

ರಾಜ್ಯದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ದರ್ಶನಾಪುರ ಅವರು ತೀರ ಹಿಂದುಳಿದ ಯಾದಗಿರಿ ಭಾಗದ ಸಮಗ್ರ ಅಭಿವೃದ್ಧಿ ಮಾಡಿ, ಅಭಿವೃದ್ಧಿಯ ಹರಿಕಾರರಾಗಿ ಜನರ ಮನಸ್ಸಲ್ಲಿ ಉಳಿದುಕೊಂಡಿದ್ದಾರೆ ರಾಜಕೀಯ ಬದ್ಧತೆ, ಸಾಮಾಜಿಕ ನ್ಯಾಯ ಅಳವಡಿಸಿಕೊಂಡು ಸರ್ವ ಸಮ್ಮತ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರಿಗೆ ಡಿಸಿಎಂ ಸ್ಥಾನ ನೀಡುವ ಮೂಲಕ ರಾಜ್ಯದ ಜನರ ಸೇವೆಗೆ ಅವಕಾಶ ಮಾಡಿಕೊಡಬೇಕು. ಎಲ್ಲಾ ಸಮುದಾಯದವರ ಮನಸ್ಸನ್ನು ಗೆದ್ದಿರುವ ಅವರು ಸಮಸ್ಯೆ ಎಂದು ಹೋದವರಿಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಸದಾ ಗಟ್ಟಿ ಧ್ವನಿ ಎತ್ತುವ ಮನೋಭಾವ ಹೊಂದಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿರುವ ಅವರಿಗೆ ಡಿಸಿಎಂ ಸ್ಥಾನ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಮರಮ್ ಹಾಕಿ ರಸ್ತೆ ಕಾಮಗಾರಿ ಮುಗಿಸುವ ಹುನ್ನಾರ
Next: ಗುಜರಾತ್‌ ಟೈಟಾನ್ಸ್‌ ಬಗ್ಗುಬಡಿದ ಆರ್‌ಸಿಬಿ; ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟ

Views:

29

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.