Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮರಮ್ ಹಾಕಿ ರಸ್ತೆ ಕಾಮಗಾರಿ ಮುಗಿಸುವ ಹುನ್ನಾರ
  • State
  • ಶಹಾಪುರ

ಮರಮ್ ಹಾಕಿ ರಸ್ತೆ ಕಾಮಗಾರಿ ಮುಗಿಸುವ ಹುನ್ನಾರ

Praja Vahini May 30, 2026
Screenshot_2026-05-30-18-28-27-57_6012fa4d4ddec268fc5c7112cbb265e7
Spread the love

ಶಹಾಪುರ: ತಾಲೂಕಿನ ಹೊತಪೇಠ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಡಿಯಲ್ಲಿ ಗ್ರಾಮದ ಮುಖ್ಯ ರಸ್ತೆಯಿಂದ ಗ್ರಾಮ ಪಂಚಾಯಿತಿ ವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು ಗುಣಮಟ್ಟದ ವಸ್ತುಗಳನ್ನು ಬಳಸದೇ ಕೇವಲ ರಸ್ತೆಗೆ ಮರಮ್ ಹಾಕಿ ಕಾಮಗಾರಿ ಮಾಡುತ್ತಿದ್ದು, ತಳಮಟ್ಟದ ಕಾಮಗಾರಿ ಸರಿಯಾಗಿ ನಡೆಯದಿದ್ದರೆ ಮುಂದೆ ರಸ್ತೆ ಕಿತ್ತು ಬರಲಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಗೆ ಗುಣಮಟ್ಟದ ವಸ್ತುಗಳನ್ನು ಬಳಸಿ ಅಂದಾಜು ಪಟ್ಟಿಯ ಪ್ರಕಾರ ಕಾಮಗಾರಿ ಮಾಡಲು ಸೂಚಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮತಕ್ಷೇತ್ರದ ಶಾಸಕರು ಮತ್ತು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಮತಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಭರಪೂರ ಅನುದಾನ ಒದಗಿಸುತ್ತಿದ್ದು ಸರಿಯಾದ ಗುತ್ತಿಗೆದಾರರಿಗೆ ಸಿಗದೆ ರಸ್ತೆಗಳು ಕಾಮಗಾರಿ ಕೈಗೊಂಡ ತಿಂಗಳುಗಳಲ್ಲೇ ಡಾಂಬರ್, ಮಣ್ಣು ಕಿತ್ತು ಬರುತ್ತಿದ್ದು, ಸರಿಯಾದ ಗುತ್ತಿಗೆದಾರರಿಗೆ ಕಾಮಗಾರಿ ನೀಡಬೇಕು ಎನ್ನುವುದು ಅನೇಕರ ವಾದ. ಆದರೆ ಅಧಿಕಾರಿಗಳ ಕೈವಾಡದಿಂದ ಗುತ್ತಿಗೆದಾರರು ಕಾಮಗಾರಿ ತಲೆ ಬುಡ ತಪ್ಪಿಸಿ ಕಳಪೆ ಮಾಡುವಲ್ಲಿ ನಿರತರಾಗಿದ್ದು, ಇದು ಆಗಬಾರದು ಜನರಿಗೆ ಸಚಿವರು ನೀಡಿದ ಯೋಜನೆಗಳ ಫಲ ಸಿಗುವಂತಾಗಬೇಕು ಅಂದಾಗ ಮಾಡಿದ ಕಾಮಗಾರಿಯೂ ಸಾರ್ಥಕವಾಗಲಿದೆ, ಆದರಿಂದ ಗುಣಮಟ್ಟದ ಕಾಮಗಾರಿ ಮಾಡಲು ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಬೇಕು. ಇಲ್ಲವಾದರೆ ಮೇಲಾಧಿಕಾರಿಗಳು ಕಾಮಗಾರಿಯ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಕಾಮಗಾರಿ ಸ್ಥಗಿತಗೊಳಿಸಿ ಗುಣಮಟ್ಟದ ಕಾಮಗಾರಿ ಮಾಡುವವರೆಗೆ ಬಿಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಮಗಾರಿಯಲ್ಲಿ ಕಳಪೆ

ಹೊತಪೇಠ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಡಿಯಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಗುತ್ತಿಗೆದಾರರು ಅಧಿಕಾರಿಗಳ ಒಪ್ಪಂದದ ಮೇರೆಗೆ ಕಾಮಗಾರಿ ಕಳಪೆಯಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಈಗಾಗಲೇ ಇದೇ ಗುತ್ತಿಗೆದಾರ ಕೈಗೊಂಡ ಅನೇಕ ಗ್ರಾಮೀಣ ಭಾಗದ ರಸ್ತೆಗಳು ಇನ್ನೂ ಉದ್ಘಾಟನೆಗೂ ಮೊದಲೇ ಕಿತ್ತು ಬರುತ್ತಿವೆ. ಕಾಮಗಾರಿಗಾಗಿ ಬೇಕಾದ ಗುಣಮಟ್ಟದ ವಸ್ತುಗಳನ್ನು ಬಳಸುವ ಬದಲು ಕೇವಲ ಮರಮ್ ಹಾಕಿ, ಮೇಲೆ ಡಾಂಬರ್ ಹಾಕುವ ಹುನ್ನಾರದಲ್ಲಿದ್ದು, ಇದರಿಂದ ಕಾಮಗಾರಿ ಮಾಡಿದರು ಸಹ ವ್ಯರ್ಥವಾಗಲಿದ್ದು, ಕೂಡಲೇ ಅಧಿಕಾರಿಗಳು ಬೇಟಿ ನೀಡಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲು ಸೂಚಿಸಬೇಕು ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದು ಪಟ್ಟೇದಾರ ಹೇಳಿದರು.

About the Author

Praja Vahini

Editor

View All Posts

Spread the love

Post navigation

Previous: ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿಕೆಶಿ ಆಯ್ಕೆ
Next: ದರ್ಶನಾಪುರಗೆ ‘ಡಿಸಿಎಂ’ ಸ್ಥಾನ ನೀಡಲು ಹೆಚ್ಚಿದ ಒತ್ತಡ

Views:

204

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.