ಶಹಾಪುರ: ಈ ರಾಜ್ಯ ಕಂಡ ಅಪರೂಪದ ನಾಯಕ ಅಹಿಂದ ವರ್ಗಗಳ ಶಕ್ತಿ ರಾಜ್ಯದಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಸಿಎಂ ಸಿದ್ರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಸಲು ಹುಚ್ಚು ಸಾಹಸಕ್ಕೆ ಕೈ ಹಾಕಿದೆ ಎಂದು ಕರ್ನಾಟಕ ಕುರುಬರ ಸಂಘ ರಾಜ್ಯ ಸಂಘಟನಾ ಸಂಚಾಲಕರಾದ ಎಂದು ನಾಗಪ್ಪಗೌಡ ಶಾಖಾಪುರ ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದ ದಿನವೇ ಕಾಂಗ್ರೆಸ್ ಪಕ್ಷದ ಮರಣ ಶಾಸನ. ಸಿದ್ರಾಮಯ್ಯನವರನ್ನು ಮೆಚ್ಚಿ ಅಹಿಂದ ಸಮುದಾಯದಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದವು ಇನ್ನು ಮುಂದೆ ಅಹಿಂದ ವರ್ಗಗಳ ಮತಗಳು ಗಣನಿಯವಾಗಿ ಕಡಿಮೆ ಆಗುತ್ತವೆ ಸಿದ್ರಾಮಯ್ಯನವರ ನಾಯಕತ್ವ ಇಲ್ಲದ ಕಾಂಗ್ರೆಸ್ ಪಕ್ಷದ ಗತಿ ಅದೋ ಗತಿ ಅದಕ್ಕಾಗಿ ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಂದರೆ ಯಾವುದೇ ಕಾರಣಕ್ಕೂ ಸಿದ್ರಾಮಯ್ಯ ಸಾಹೇಬ್ರು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಸಬಾರದು ಇಳಿಸಿದ್ದೆ ಆದ್ರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ. ಕಾಂಗ್ರೆಸ್ ಹೈಕಮಾಂಡಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
