ಬೆಂಗಳೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನ ಬಳಕೆಯ ಪ್ರಮುಖ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬೆಲೆ ಏರಿಕೆಯನ್ನ ಗಮನಿಸದೇ ಜಾಗತಿಕ ನಾಯಕರೊಂದಿಗೆ ರೀಲ್ಸ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ ಖರ್ಗೆ ಅವರು ಆರೋಪಿಸಿದ್ದಾರೆ.
ನಗರದಲ್ಲಿ ಇಂದು (ಶನಿವಾರ ಮೇ 23) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರು ದುಬಾರಿ ದರ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ದೇಶದ ಪ್ರಧಾನಿಯಿಂದ ಈ ರೀತಿಯ ವರ್ತನೆ ನಡೆಯುತ್ತಿದೆ. ದೇಶದಲ್ಲಿ ಇಷ್ಟೊಂದು ಸಮಸ್ಯೆಯಿರುವಾಗ ಪ್ರಧಾನ ಮಂತ್ರಿಗಳು ವಿದೇಶಗಳಿಗೆ ಹೋಗುತ್ತಾರೆ, ರೀಲ್ಸ್ ಮಾಡುತ್ತಾರೆ, ಹೋದಲ್ಲೆಲ್ಲಾ ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದೆ, ನಮಗೆ ಒಳ್ಳೆಯದಾಗಿದೆ ಎಂದು ಹೇಳುತ್ತಾರೆ, ಅದೇ ರೀತಿ ಪತ್ರಿಕೆಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಇದನ್ನೂ ಓದಿ: ಬಿಜೆಪಿಯವರಿಗೆ ಅದು ಹಿಜಾಬ್, ನಮಗೆ ಸಮಾನತೆ ಸಂಕೇತ: ಮಧು ಬಂಗಾರಪ್ಪ
ಇಂದು ವಾರಕ್ಕೆ ಮೂರನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ ಅಂದರೆ ಏನರ್ಥ, ಇವರ ಆರ್ಥಿಕ ನೀತಿಗಳು ವಿಫಲವಾಗಿದೆ ಎಂದು ಎದ್ದುಕಾಣುತ್ತಿದೆ, ವಿದೇಶಗಳ ನಾಯಕರು ಉತ್ತಮ ಸ್ನೇಹಿತರು ಎನ್ನುತ್ತಾರೆ, ಆದರೆ ಅದರಿಂದ ನಮ್ಮ ರಾಷ್ಟ್ರಕ್ಕೆ, ಜನರಿಗೆ ಏನು ಉಪಯೋಗವಾಗಿ ಎಂದು ಕೇಳಿದರು.
