ಸಿನಿಮಾದಲ್ಲಿ ನಟಿಸುವ ಪ್ರತಿಯೊಬ್ಬ ನಟ-ನಟಿಯರು ಅವರವರ ಪಾತ್ರಕ್ಕೆ ತಕ್ಕಂತೆ ಒಡವೆ, ವಸ್ತ್ರಗಳು ಹಾಗೂ ಉಡುಪುಗಳನ್ನು ಧರಿಸಬೇಕಾಗುತ್ತದೆ. ಅದರಂತೆಯೇ ನಟಿ ಕಂಗನಾ ರಣಾವತ್ ಅವರು ಇತ್ತೀಚಿಗಷ್ಟೇ ಕರಿಮಣಿ ಸರ ಮತ್ತು ಹಸಿರು ಬಳೆ ತೊಟ್ಟಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದಕ್ಕೆ ಇದೀಗ ಈ ಕುರಿತು ನಟಿ ಕಂಗನಾ ರಣಾವತ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ನಾನು ಕರಿಮಣಿ ಧರಿಸಿದ್ದು ಹಾಗೂ ಹಸಿರು ಬಳೆ ತೊಟ್ಟಿರುವುದು ಕೇವಲ ಸಿನಿಮಾದಲ್ಲಿ ನಟಿಸಲು ಹೊರತಾಗಿ ನಾನು ರಹಸ್ಯವಾಗಿ ಮದುವೆಯಾಗಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ನಾನು ಪ್ರತಿದಿನ ನಗರದ ಸುತ್ತಮುತ್ತ ಶೂಟಿಂಗ್ ತೆರಳುತ್ತೇನೆ. ಈ ವೇಳೆ ನಾನು ಪಾತ್ರಕ್ಕಾಗಿ ಮಂಗಳಸೂತ್ರ ಮತ್ತು ಬಳೆ ಧರಿಸಿದ್ದಾಗ ಯಾರೋ ತೆಗೆದ ಫೋಟೋ ಈಗ ವೈರಲ್ ಆಗಿದೆ. ಇದರಿಂದ ನನಗೆ ಅನೇಕ ಫೋನ್ ಕರೆಗಳು ಬರುತ್ತಿವೆ. ಆದರೆ ಮದುವೆಯಾದ ಮಹಿಳೆಯ ಲುಕ್‌ನಲ್ಲಿ ಕಾಣಿಸಿಕೊಂಡರೆ ಅದರಲ್ಲಿ ದೊಡ್ಡ ವಿಷಯ ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೇನ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಮಿಂಚಿಂಗ್
ಇದೇ ವೇಳೆ ನಾನು ರಹಸ್ಯವಾಗಿ ಮದುವೆಯಾಗುವುದಿಲ್ಲ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ ಅವರು, ನಟರು ಹಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಾನು ಮದುವೆಯಾದರೆ ಅದನ್ನು ರಹಸ್ಯವಾಗಿ ಇಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
