ರೋಮ್: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಟಲಿಯ ಪ್ರವಾಸದಲ್ಲಿದ್ದು, ಇಟಲಿಯ ರಾಜಧಾನಿ ರೋಮ್ಗೆ ಭೇಟಿ ನೀಡಿದ್ದಾರೆ.
ಇನ್ನು ಇಟಲಿ ರಾಜಧಾನಿ ರೋಮ್ನಲ್ಲಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನ ಭೇಟಿಮಾಡಿದ್ದು, ಭಾರತದ ಪ್ರಸಿದ್ಧ ‘ಮೆಲೋಡಿ’ ಚಾಕೋಲೇಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಹೌದು, ನರೇಂದ್ರ ಮೋದಿ ಹಾಗೂ ಮೆಲೋನಿ ಉತ್ತಮ ಸ್ನೇಹಿತರಾಗಿದ್ದು, ಇದೀಗ ಮೋದಿ ಮೆಲೋಡಿ ಚಾಕೋಲೇಟ್ ಕೊಡುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್ಶಿಪ್ಗೆ 80% ಒಪ್ಪಿದ ರೈತರು; ಜೂನ್ ಮೊದಲ ವಾರದ ಒಳಗಾಗಿ ಪರಿಹಾರ ಬಿಡುಗಡೆ: ಡಿಕೆಶಿ
ಅಲ್ಲದೆ ಮೋದಿ ಚಾಕೋಲೇಟ್ ಕೊಡುವ ವೀಡಿಯೋವನ್ನು ಮೆಲೋನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಉಡುಗೊರೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
