Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಒಣದ್ರಾಕ್ಷಿ ಹಾಲಿನಲ್ಲಿ ನೆನೆಸಿ ತಿಂದರೆ ಏನೆಲ್ಲಾ ಲಾಭಗಳಿವೆ ಗೊತ್ತಾ?
  • Healthy Life

ಒಣದ್ರಾಕ್ಷಿ ಹಾಲಿನಲ್ಲಿ ನೆನೆಸಿ ತಿಂದರೆ ಏನೆಲ್ಲಾ ಲಾಭಗಳಿವೆ ಗೊತ್ತಾ?

Praja Vahini May 20, 2026 1 minute read
WhatsApp Image 2026-05-20 at 16.58.43
Spread the love

ಪುರಾತನ ಕಾಲದಿಂದಲೂ ಸಾಮಾನ್ಯವಾಗಿ ಒಣದ್ರಾಕ್ಷಿಯನ್ನು ಸಿಹಿತಿನಿಸು, ಪಾಯಸ ಹಾಗೂ ಇನ್ನಿತರ ಸಿಹಿ ಪದಾರ್ಥಗಳಿಗೆ ಬಳಸುವುದು ಸರ್ವೇಸಾಮಾನ್ಯ.

ಇದರ ಜೊತೆಗೆ ಕೆಲವರು ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಸೇವನೆ ಮಾಡುತ್ತಾರೆ. ಇದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ ಎಂದು ಸೇವನೆ ಮಾಡುತ್ತಾರೆ. ಕೇವಲ ನೀರಿನಲ್ಲಿ ನೆನೆಸಿ ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಅಷ್ಟೊಂದು ಬೆನಿಫಿಟ್ಸ್ ಸಿಗೋದಿಲ್ಲ. ಹಾಗಾಗಿ ಹಾಲಿನಲ್ಲಿ ರಾತ್ರಿ ಇಡಿ ನೆನಸಿದ ದ್ರಾಕ್ಷಿಯನ್ನು ತಿಂದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಇವೆ ಎಂದು ವೈದ್ಯರು ತಿಳಿಸುತ್ತಾರೆ.

ಹೌದು, ಹಾಲಿನಲ್ಲಿ ಒಣದ್ರಾಕ್ಷಿಯನ್ನು ನೆನೆಸಿ ಬೆಳಿಗ್ಗೆ ಎದ್ದು ಸೇವನೆ ಮಾಡುವುದರಿಂದ ದ್ರಾಕ್ಷಿ ಮತ್ತು ಹಾಲಿನಲ್ಲಿರು ವಕ್ಯಾಲ್ಸಿಯಂ, ಪ್ರೋಟೀನ್, ಐರನ್ ಹಾಗೂ ಫೈಬರ್‌ಗಳನ್ನು ಸಮೃದ್ಧವಾಗಿ ಒದಗಿಸುತ್ತದೆ. ಇದರಿಂದ ಎಲುಬುಗಳು ಬಲವಾಗುವುದರ ಜೊತೆಗೆ ದೇಹದ ಶಕ್ತಿ ಕೂಡ ಹೆಚ್ಚುತ್ತದೆ.

ತೂಕ ಇಳಿಕೆಗೆ ಸಹಾಯ

ತೂಕ ಇಳಿಸುವವರು ಸಾಮಾನ್ಯವಾಗಿ ಹಾಲಿನಲ್ಲಿ ನೆನೆಸಿಟ್ಟ ದ್ರಾಕ್ಷಿಯನ್ನ ಸೇವನೆ ಮಾಡುವುದರಿಂದ ಹೆಚ್ಚು ಹೊತ್ತು ಹೊಟ್ಟೆ ಹಸಿವು ಆಗದ ಅನುಭವ ನೀಡುವುದರ ಜೊತೆಗೆ ಅತಿಯಾಗಿ ತಿನ್ನುವ ಅಭ್ಯಾಸ ಕಡಿಮೆಯಾಗಬಹುದು. ಹೀಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಸಹಕಾರಿಯಾಗಿದೆ.

ರಕ್ತದೊತ್ತಡ ನಿಯಂತ್ರಣ

ಒಣದ್ರಾಕ್ಷಿಯಲ್ಲಿ ಐರನ್ ಮತ್ತು ಪೊಟ್ಯಾಸಿಯಂ ಪ್ರಮಾಣ ಹೆಚ್ಚು ಇರುತ್ತದೆ. ಹಾಲಿನಲ್ಲಿ ರಾತ್ರಿ ಪೂರ್ತಿ ನೆನೆಸಿದಾಗ ಅದರ ಪೋಷಕಾಂಶಗಳನ್ನು ದೇಹ ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. ಪ್ರತಿದಿನ ಬೆಳಗ್ಗೆ ಇದನ್ನು ಸೇವಿಸಿದರೆ ರಕ್ತಹೀನತೆ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಪೊಟ್ಯಾಸಿಯಂ ರಕ್ತದೊತ್ತಡ ನಿಯಂತ್ರಣದಲ್ಲಿರಲು ನೆರವಾಗುತ್ತದೆ. ಇದನ್ನೂ ಓದಿ:  ಪ್ರತಿನಿತ್ಯ ಮೊಸರು ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

ಜೀರ್ಣಕ್ರಿಯೆ ಸುಧಾರಿಸುತ್ತದೆ

ಒಣದ್ರಾಕ್ಷಿಯಲ್ಲಿ ಇರುವ ಡೈಟರಿ ಫೈಬರ್ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿ. ಹಾಲಿನಲ್ಲಿ ನೆನೆಸಿದ ನಂತರ ಇದು ಮೃದುವಾಗುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆಯ ಒಳಗಿನ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಚರ್ಮದ ಆರೋಗ್ಯಕ್ಕೆ ಒಳ್ಳೆಯದು

ಒಣದ್ರಾಕ್ಷಿಯಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಮತ್ತು ಆರೋಗ್ಯಕರ ಕೊಬ್ಬುಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಚರ್ಮ ಒಣಗುವುದು, ಮೊಡವೆ ಮತ್ತು ಕಲೆಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡಿ ಮುಖದ ಕಾಂತಿಯನ್ನೂ ಹೆಚ್ಚಿಸುತ್ತದೆ.

 

About the Author

Praja Vahini

Editor

View All Posts

Spread the love

Post navigation

Previous: ಬಿಡದಿ ಟೌನ್​​ಶಿಪ್​​ಗೆ  80% ಒಪ್ಪಿದ ರೈತರು; ಜೂನ್ ಮೊದಲ ವಾರದ ಒಳಗಾಗಿ ಪರಿಹಾರ ಬಿಡುಗಡೆ: ಡಿಕೆಶಿ
Next: ಇಟಲಿ ಪ್ರಧಾನಿ ಮೆಲೋನಿಗೆ ‘ಮೆಲೋಡಿʼ ಚಾಕೋಲೇಟ್ ಕೊಟ್ಟ ಮೋದಿ

Views:

15

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.