Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಲಬುರಗಿ ನಗರದ ಸಮಗ್ರ ಅಭಿವೃದ್ದಿಗೆ ಬದ್ಧ: ಪ್ರಿಯಾಂಕ್ ಖರ್ಗೆ
  • Politics
  • ಕಲಬುರಗಿ

ಕಲಬುರಗಿ ನಗರದ ಸಮಗ್ರ ಅಭಿವೃದ್ದಿಗೆ ಬದ್ಧ: ಪ್ರಿಯಾಂಕ್ ಖರ್ಗೆ

Praja Vahini May 18, 2026
WhatsApp Image 2026-05-18 at 19.12.28
Spread the love

ಕಲಬುರಗಿ: ಕಲಬುರಗಿ ‌ನಗರದ ಸಮಗ್ರ ಅಭಿವೃದ್ದಿಗಾಗಿ ನೀಲಿನಕ್ಷೆ ತಯಾರಿಸಲಾಗಿದ್ದು ವರ್ತಮಾನ‌ ಹಾಗೂ ಭವಿಷ್ಯದ ಜನರನ್ನು ಗುರಿಯಾಗಿಸಿಕೊಂಡು ಅವರಿಗೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಂಡ ವಿವಿಧ ಯೋಜನೆಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದ ಅವರು, ರೂ 3.16 ಕೋಟಿ ವೆಚ್ಚದಲ್ಲಿ 17 ವಾರ್ಡ್ ಗಳಲ್ಲಿನ ಉದ್ಯಾನವನಗಳ ಅಭಿವೃದ್ದಿ, ರೂ‌ 5 ಕೋಟಿ ವೆಚ್ಚದಲ್ಲಿ 4 ಪ್ರಮುಖ ಸರ್ಕಲ್ ಗಳ ಅಭಿವೃದ್ದಿ, ರೂ‌3.58 ಕೋಟಿ ವೆಚ್ಚದಲ್ಲಿ 18 ರುದ್ರಭೂಮಿಗಳ ಅಭಿವೃದ್ದಿ ಹಾಗೂ ರೂ 25 ಲಕ್ಷ ವೆಚ್ಚದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಅಭಿವೃದ್ದಿ ಹೀಗೆ ಒಟ್ಟು 40 ಕಾಮಗಾರಿಗಳು ಸೇರಿವೆ ಎಂದರು.

ಅಪ್ಪಾ ಕೆರೆ ಹಾಗೂ ಕಲಬುರಗಿ ಕೋಟೆ ಅಭಿವೃದ್ದಿ ಸೇರಿದಂತೆ ಹಲವಾರು ಜನಪರ ಹಾಗೂ ಪ್ರವಾಸೋದ್ಯಮ ಪೂರಕ ಯೋಜನೆಗಳು‌ ಕಲಬುರಗಿಗೆ ಮುಂಬರುವ ದಿನಗಳಲ್ಲಿ ಬರಲಿವೆ ಎಂದ ಖರ್ಗೆ ಕಾಂಗ್ರೆಸ್ ಸರ್ಕಾರ ಕಲಬುರಗಿ ಜಿಲ್ಲೆಯನ್ನು ಅದನ್ನೂ ಪ್ರಮುಖವಾಗಿ ಕಲಬುರಗಿ ನಗರದ ಸಮಗ್ರ ಅಭಿವೃದ್ದಿ ಮಾಡಿ ನವ ನಗರ ನಿರ್ಮಾಣ ಮಾಡಲಿದೆ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆಗೆ ತಾರತಮ್ಯ ಎಸಗುತ್ತಿದೆ ಎಂದು ಹೇಳಿದ ಸಚಿವರು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಜಾರಿಗೆ ತರಲಾದ ಜಲ್ ಜೀವನ್ ಮಿಷನ್ ಕಾರ್ಯಕ್ರಮಕ್ಕೆ ಬೇಕಾಗುವ 15,000 ಕೋಟಿ ಅನುದಾನ ನೀಡಬೇಕಿತ್ತು. ಆದರೆ, ಅನುದಾನ ಬಿಡುಗಡೆ ಮಾಡದೇ ಇರುವುದರಿಂದಾಗಿ ರಾಜ್ಯ ಸರ್ಕಾರ ತನ್ನ ಅನುದಾನ ಬಳಸಿ ಕಾಮಗಾರಿ ಮುಂದುವರೆಸಿದೆ ಎಂದರು.

ಅಡುಗೆ ಅನಿಲ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಸಾರ್ವಜನಿಕರು‌ ಜೀವನ. ನಿರ್ವಹಣೆಗೆ ಪರದಾಡುತ್ತಿದ್ದಾರೆ. ಇದನ್ನು ವಿಕಸಿತ್ ಭಾರತ ಎನ್ನುಬಹುದಾ?  ಜನರು ಸಂಕಟಪಡುತ್ತಿರುವಾಗ ಮೋದಿ ಖರ್ಚು ಕಡಿಮೆ ಮಾಡಿ ಎನ್ನುತ್ತಿದ್ದಾರೆ. ಮನೆ ನಡೆಸಲು ಜನಸಾಮಾನ್ಯರಿಗೆ ಸಾಧ್ಯವಾಗುತ್ತಿಲ್ಲ. ಮೋದಿ ಅವರ ಆರ್ಥಿಕ ನೀತಿ ಕೇವಲ ಅದಾನಿ ಹಾಗೂ ಅಂಬಾನಿಯಂತ ಶ್ರೀಮಂತರಿಗೆ ಮಾತ್ರ ಅನುಕೂಲವಾಗಿದೆ ಹೊರತು ಬಡವರಿಗೆ ಅನುಕೂಲವಾಗಿಲ್ಲ ಎಂದರು. ಇದನ್ನೂ ಓದಿ: ಮಳೆಗಾಲದ ವೇಳೆ ವಿಪತ್ತು ನಿರ್ವಹಣೆಗೆ ತ್ವರಿತ ಕ್ರಮ: ಮಹೇಶ್ವರ್ ರಾವ್

ಮೋದಿ ಕನಿಷ್ಠ 200 ದೇಶಗಳಿಗೆ ಭೇಟಿ ನೀಡಿರಬಹುದು. ಅವರ ಪ್ರವಾಸಕ್ಕೆ ರೂ‌ 850 ಕೋಟಿ ಖರ್ಚಾಗಿದೆ. ಅವರ ಖರ್ಚಿಗೆ ಹೋಲಿಸಿದರೆ, ದೇಶಕ್ಕೆ ನಯಾಪೈಸೆ ಅನುಕೂಲವಾಗಿಲ್ಲ ಎಂದು ಟೀಕಿಸಿದ ಖರ್ಗೆ, ರಾಜ್ಯ ಸರ್ಕಾರ ವಾರ್ಷಿಕ ರೂ 6.50 ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ಕೊಡುತ್ತಿದೆ. ಅದಕ್ಕೆ ಬದಲಾಗಿ ಕೇಂದ್ರ ನಮಗೆ ವಾಪಸ್ ಕೊಡುತ್ತಿರುವುದು ಶೂನ್ಯ ಎಂದರು.

About the Author

Praja Vahini

Editor

View All Posts

Spread the love

Post navigation

Previous: ಮಳೆಗಾಲದ ವೇಳೆ ವಿಪತ್ತು ನಿರ್ವಹಣೆಗೆ ತ್ವರಿತ ಕ್ರಮ: ಮಹೇಶ್ವರ್ ರಾವ್
Next: ನಮ್ಮ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಲು ಬದ್ದವಾಗಿದೆ: ಚಲುವರಾಯಸ್ವಾಮಿ

Views:

15

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.