Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬದುಕು ತ್ಯಜಿಸುವುದು ಅಮೃತ್ ಕಾಲ್ ಅಂತರೆ ಮೋದಿ: ಪ್ರಿಯಾಂಕ ಖರ್ಗೆ
  • Bangalore
  • Politics
  • State

ಬದುಕು ತ್ಯಜಿಸುವುದು ಅಮೃತ್ ಕಾಲ್ ಅಂತರೆ ಮೋದಿ: ಪ್ರಿಯಾಂಕ ಖರ್ಗೆ

Praja Vahini May 16, 2026 1 minute read
WhatsApp Image 2026-05-16 at 16.29.25
Spread the love

ಬೆಂಗಳೂರು: ಪೆಟ್ರೋಲ್, ಡೀಸೆಲ್ ಮಿತವಾಗಿ ಬಳಸಿ, ಒಂದು ವರ್ಷದವರೆಗೆ ಯಾವುದೇ ರೀತಿ ಚಿನ್ನ ಖರೀದಿ ಮಾಡಬೇಡಿ ಎಂದು ನರೇಂದ್ರ ಮೋದಿಯವರು ಇಡೀ ದೇಶದ ಜನತೆಗೆ ಕರೆ ನೀಡಿದ್ದಾರೆ.

ಇನ್ನು ಮೋದಿಯವರ ಮಾತಿಗೆ ದೇಶದಲ್ಲಿ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಇದೀಗ ಮೋದಿ ಅವರ ಮಾತಿಗೆ ಸಚಿವ ಪ್ರಿಯಾಂಕ ಖರ್ಗೆ ಅವರು ಗುಡುಗಿದ್ದಾರೆ.

ತಮ್ಮ ವೈಫಲ್ಯದ ಆಡಳಿತದ ಕಾರಣಕ್ಕೆ ಜನರಿಂದ ತ್ಯಾಗವನ್ನು ಬಯಸುವುದಕ್ಕೆ “ಅಮೃತ ಕಾಲ” ಎಂದು ಹೆಸರಿಟ್ಟಿದ್ದಾರೆ ಪ್ರಧಾನಿ ಮೋದಿ! ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಜವಾಬ್ದಾರಿಯನ್ನು ಜನರ ತಲೆಗೆ ವರ್ಗಾಯಿಸುವ ಕಲೆ ಮೋದಿಯವರಿಗೆ ಚೆನ್ನಾಗಿ ತಿಳಿದಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ಕೋವಿಡ್ ನಿರ್ವಹಣೆಯ ವೈಫಲ್ಯದ ಸಮಯದಲ್ಲಿ ತಟ್ಟೆ ಬಡಿಯಿರಿ, ದೀಪ ಹಚ್ಚಿರಿ ಎನ್ನುತ್ತಲೇ ಲಕ್ಷಾಂತರ ಮಂದಿಯನ್ನು ಬಲಿ ಕೊಟ್ಟಿದ್ದಾಯ್ತು.

ನೋಟ್ ಬ್ಯಾನ್ ಸಮಯದಲ್ಲಿ “50 ದಿನಗಳ ಸಮಯ ಕೊಡಿ, ಪರಿಸ್ಥಿತಿ ಸರಿ ಹೋಗದಿದ್ದರೆ ನೀವು ಕೊಡುವ ಶಿಕ್ಷೆಗೆ ನಾನು ಸಿದ್ದ” ಎನ್ನುತ್ತಲೇ ನೂರಾರು ಜನರ ಜೀವಕ್ಕೆ ಕಂಟಕವಾಗಿದ್ದಾಯ್ತು.

ಈಗ ಹೊಸ ವರಸೆಯಾಗಿ, ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಮಿತವಾಗಿ ಬಳಸಿ, ಸರಳ ಜೀವನ ನಡೆಸಿ ಎಂಬ ಉಪದೇಶಗಳು ಶುರುವಾಗಿವೆ, ಈ ಉಪದೇಶಗಳು ಯಾವ ಭೀಕರ ದಿನಗಳ ಮುನ್ಸೂಚನೆ BJP Karnataka ? 2024 – “ಕಾಂಗ್ರೆಸ್ ನಿಮ್ಮ ಮಂಗಳಸೂತ್ರವನ್ನು ಕಸಿಯುತ್ತದೆ.”

2026 – ಬಂಗಾರದ ಮೇಲಿನ ಆಮದು ಸುಂಕ 6%ನಿಂದ 15%ಗೆ ಏರಿಕೆ, ಬಂಗಾರದ ಬೆಲೆ ಸಾರ್ವಕಾಲಿಕ ಏರಿಕೆ ಹಾಗೂ ಬಂಗಾರ ಖರೀದಿಸಬೇಡಿ ಎಂಬ ಬಿಟ್ಟಿ ಉಪದೇಶ! ಈಗ ಮಂಗಳಸೂತ್ರ ಕಸಿಯಲು ಕೈಹಾಕಿದವರು ಯಾರು? ಇದಕ್ಕೆ ಬಿಜೆಪಿಗರು ಉತ್ತರಿಸುವರೇ? ಎಂದು ಪ್ರಶ್ನಿಸಿದ್ದಾರೆ.

ಐತಿಹಾಸಿಕ ದಾಖಲೆ ಮಟ್ಟದ ಗ್ಯಾಸ್ ಬೆಲೆ ಏರಿಕೆಯ ನಂತರ ಈಗ ಇಂಧನ ತೈಲಗಳ ಬೆಲೆ ಏರಿಕೆಯ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ದುಸ್ತರವಾಗಿರುವ ಜನರ ಬದುಕನ್ನು ಇನ್ನಷ್ಟು ದುಸ್ತರವಾಗಿಸುವ ಅಚ್ಚೆ ದಿನಗಳಲ್ಲಿ ಬಂಗಾರ ತ್ಯಜಿಸುವುದನ್ನು ದೇಶಭಕ್ತಿ ಎನ್ನಲಾಗುತ್ತಿದೆ, ಮುಂದೆ ಅಮೃತ ಕಾಲದಲ್ಲಿ ಬದುಕು ತ್ಯಜಿಸುವುದನ್ನು ದೇಶಭಕ್ತಿ ಎನ್ನಲಾಗುತ್ತದೆ!. ಇದನ್ನೂ ಓದಿ: ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುತ್ತೇವೆ ಎಂಬ ನಮ್ಮ ಸಂಕಲ್ಪ ಬರಿ ಬಾಯಿ ಮಾತಿನದ್ದಲ್ಲ: ಸಿಎಂ

ಭಾರತವು ಎಕನಾಮಿಕಲ್ ಎಮರ್ಜೆನ್ಸಿ ಸ್ಥಿತಿಯ ಎದುರು ನಿಂತಿದೆಯೇ? ದೇಶದ ಖಜಾನೆಯ ಪರಿಸ್ಥಿತಿ ಹೇಗಿದೆ? ಇಂಧನ ಭದ್ರತೆಗೆ ಸರ್ಕಾರ ಕೈಗೊಂಡ ಕ್ರಮಗಳೇನು? ಬಂಗಾರ ಖರೀದಿಸಬೇಡಿ ಎಂಬ ಹೇಳಿಕೆ ನೀಡುವ ಮುನ್ನ 85 ಬಿಲಿಯನ್ ಡಾಲರ್ ಗಾತ್ರದ ಭಾರತದ ಜ್ಯುವೆಲ್ಲರಿ ಮಾರ್ಕೆಟ್ ನಂಬಿ ಬದುಕುತ್ತಿರುವ ಕುಟುಂಬಗಳ ರಕ್ಷಣೆಯ ಬಗ್ಗೆ ಯೋಚಿಸಿದ್ದಾರೆಯೇ? ಇವರಿಗೆ ಸರ್ಕಾರ ನೀಡುವ ಪರಿಹಾರಗಳೇನು?

ಈ ಎಲ್ಲದರ ಬಗ್ಗೆ ಪ್ರಧಾನಿಯವರು ಶ್ವೇತ ಪತ್ರ ಹೊರಡಿಸಲಿ, ಇಲ್ಲವೇ ವಿಶೇಷ ಅಧಿವೇಶನ ಕರೆದು ಚರ್ಚಿಸಲಿ ಅಥವಾ ಪತ್ರಿಕಾಗೋಷ್ಠಿಯನ್ನಾದರೂ ನಡೆಸಿ ನೈಜ ಪರಿಸ್ಥಿತಿಯನ್ನು ತಿಳಿಸಲಿ! ಎಂದಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುತ್ತೇವೆ ಎಂಬ ನಮ್ಮ ಸಂಕಲ್ಪ ಬರಿ ಬಾಯಿ ಮಾತಿನದ್ದಲ್ಲ: ಸಿಎಂ
Next: ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ: ಶರಣಪ್ರಕಾಶ ಪಾಟೀಲ್‌

Views:

21

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.