ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
ಹೌದು, ನಿವೇದಿತಾ ಗೌಡ ಅವರು ಇಂದು (ಮಂಗಳವಾರ ಮೇ. 12) ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ರಾತ್ರಿ 12 ಗಂಟೆಯಿಂದಲೇ ಭರ್ಜರಿಯಾಗಿ ತಮ್ಮ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ನಿವೇದಿತಾ ಗೌಡ ಅವರು ತಮ್ಮ ಬೆಸ್ಟ್ ಫ್ರೆಂಡ್ ಗಳ ಜೊತೆ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.
ಇನ್ನು ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ನಿವೇದಿತಾ ಗೌಡ ಅವರ ಅಭಿಮಾನಿಗಳು ವಿಧ ವಿಧ ಕಾಮೆಂಟ್ಸ್ ಗಳ ಮೂಲಕ ಹುಟ್ಟು ಹಬ್ಬದ ಶುಭ ಕೋರಿದ್ದಾರೆ. ಇದನ್ನೂ ಓದಿ: ಡಿಂಪಲ್ ಕ್ವೀನ್ ರಚಿತಾ ರಾಮ್ ಬಣ್ಣದ ಪಯಣಕ್ಕೆ 14 ವರ್ಷದ ಸಂಭ್ರಮ
ಅಲ್ಲದೆ Instagram ಖಾತೆಯಲ್ಲಿ ಹ್ಯಾಪಿ ಬರ್ತಡೆ ಟು ಮಿ ಎಂದು ತಮಗೆ ತಾವೇ ವಿಶ್ ಮಾಡಿಕೊಂಡಿದ್ದಾರೆ.
ಈ ಯುನಿವರ್ಸ್ ಅದರ ಫೇವರೆಟ್ ಹುಡುಗಿ ಮತ್ತೊಂದು ಅಧ್ಯಾಯ ಬರೆದಾಗಿದೆ. ಹ್ಯಾಪಿ ಬರ್ತಡೆ ಟು ಮಿ ಎಂದು ತಮಗೆ ತಾವೇ ವಿಶ್ ಮಾಡಿಕೊಂಡಿದ್ದಾರೆ.
