ದರ್ಶನಾಪುರ ದಂಪತಿಗಳಿಗೆ ಸನ್ಮಾನ/ ಬೃಹತ್ ಕಾರ್, ಬೈಕ್ ರ‍್ಯಾಲಿ
ಶಹಾಪುರ: ರಡ್ಡಿ ಸಮಾಜದಲ್ಲಿ ಬಡವರಿದ್ದಾರೆ ಆದರೆ ಅವರು ಕೊಡಗೈ ದಾನಿಗಳಾಗಿದ್ದಾರೆ, ರಡ್ಡಿ ಸಮಾಜದ ಶೈಕ್ಷಣಿಕ ಸಾಮಾಜಿಕವಾಗಿ ಅಭಿವೃದ್ದಿಗೆ ಮುಂದಾಗಬೇಕು, ಒಬ್ಬ ಗೃಹಿಣಿಯಾಗಿ ಮನೆಯ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ ಸಮಾಜಕ್ಕೂ ಮಾದರಿಯಾಗಬಲ್ಲ ಕೆಲಸ ಮಾಡಿದ ಕೀರ್ತಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ ಅವರ ಬದುಕು ಅನುಕರಣೀಯ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ತಾಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಜಗಕ್ಕೆ ಹಿತವನ್ನೇ ಬಯಸಿದ ಮಹಿಳೆ ಶಿವಭಕ್ತೆ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿಯ 604ನೇ ಜಯಂತಿ ಆಚರಣೆ ಹಾಗೂ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪ ಉದ್ಘಾಟನೆ ಕಾರ್ಯಕ್ರಮ ನೇರವೆರಿಸಿ ಮಾತನಾಡಿದ ಅವರು, ತಾವು ಸಾರಿದ ಮೌಲ್ಯ ಮತ್ತು ತತ್ವಗಳಿಗೆ ಬದ್ಧವಾಗಿ ನಡೆದುಕೊಂಡ ಹೇಮರೆಡ್ಡಿ ಮಲ್ಲಮ್ಮನವರು ಪ್ರಸಕ್ತ ಸಮಾಜದ ಎಲ್ಲ ಮಹಿಳೆಯರಿಗೂ ಆದರ್ಶಪ್ರಾಯರು. ಸಂಸಾರದ ಎಲ್ಲ ನೋವು-ನಲಿವುಗಳನ್ನು ಅನುಭವಿಸಿದ ಇವರು ಭಿನ್ನವಾಗಿ ನಿಲ್ಲಲು ಆಧ್ಯಾತ್ಮಿಕ ಶಕ್ತಿಯೆ ಕಾರಣ.
ಜಾನಪದದಲ್ಲಿ ಇವರನ್ನು ಗುರುತಿಸುವ ಕೆಲಸವಾಗಿದೆ, ಜಾನಪದ ಸಾಹಿತ್ಯ ಕಲೆಗಳ ಮೂಲಕ ಇನ್ನೂ ಜೀವಂತವಾಗಿರಲು ಅವರ ವ್ಯಕ್ತಿತ್ವದಲ್ಲಿನ ಗಟ್ಟಿತನವೇ ಕಾರಣ. ಒಂದು ವೇಳೆ ಇಂದಿನ ಮಹಿಳೆಯರು ಆಧ್ಯಾತ್ಮಕ ನೆಲೆಯಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆದರೆ ಖಂಡಿತ ಯಶಸ್ಸು ಸಿಗುತ್ತದೆ ಎಂದರು.
ಹೇಮರೆಡ್ಡಿ ಮಲ್ಲಮ್ಮನ ಬದುಕು ಮನುಕುಲಕ್ಕೆ ಆದರ್ಶ
ಶಿವಶರಣರಲ್ಲಿ ಪ್ರಜ್ವಲಿಸಿದ ಹೇಮರೆಡ್ಡಿ ಮಲ್ಲಮ್ಮ ದೈವಭಕ್ತಿ, ಕಾಯಕ ನಿಷ್ಠೇ ದಾನ ಧರ್ಮದಿಂದ ಆದರ್ಶ ಗೃಹಿಣಿಯಾಗುವ ಮೂಲಕ ಲೋಕ ಪ್ರಸಿದ್ದೀ ಪಡೆದಿದ್ದರು. ಹೇಮರೆಡ್ಡಿ ಮಲ್ಲಮ್ಮನ ಬದುಕು ಮನುಕುಲಕ್ಕೆ ಆದರ್ಶ. ಮಲ್ಲಮ್ಮ ಅವರ ವ್ಯಕ್ತಿತ್ವ ಎಂದಿಗೂ ಭಾರತೀಯ ಮಹಿಳೆಯರಿಗೆ ಆದರ್ಶವಾಗಿ ನಿಲ್ಲುತ್ತದೆ. ಜೀವನದಲ್ಲಿ ಹೇಳಿಕೊಳ್ಳಲೂ ಆಗದಷ್ಟು ಕಷ್ಟಗಳನ್ನು ಅನಿಭವಿಸಿದರೂ ಅವುಗಳನ್ನು ಸಂತೋಷದಿಂದ ಸ್ವೀಕರಿಸಿ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಿದವರು ಹೇಮರೆಡ್ಡಿ ಮಲ್ಲಮ್ಮ ಎಂದು ಶರಣಗೌಡ ಕಂದಕೂರ ಗುರುಮಿಠಕಲ್ ಶಾಸಕರು ಹೇಳಿದರು.
ಬೆಳಗ್ಗೆ ಕಾರ್ಯಕ್ರಮ ನಿಮಿತ್ಯ ನಗರದಲ್ಲಿ ಬೈಕ್, ಕಾರ್ ಬೃಹತ್ ರ‍್ಯಾಲಿ ನಡೆಯಿತು. ನಗರದ ದಿಗ್ಗಿ ಅಗಸಿಯಿಂದ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ವೃತ್ತದ ಮೂಖಾಂತರ ಭೀಮರಾಯನಗುಡಿಯಿಂದ ಗೋಗಿ ಗ್ರಾಮದ ವರೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಭಾರತಿ ಎಸ್. ದರ್ಶನಾಪುರ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪೂಜ್ಯ ವಿದ್ಯಾಮನ್ನಾ ಶಿವಾಭಿನವ ತಪೋಭಿನವ ಶಿವಾಚಾರ್ಯರತ್ನ ಜಗದಾರಾಧ್ಯ ಜಯಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಜಾಲಹಳ್ಳಿ ಮಠ, ಮಾಗಣಗೇರಿಯ ಭ್ರಹ್ಮನ್ಮಠದ ಪೂಜ್ಯ ಶಿವಾಚಾರ್ಯ ರತ್ನ ಡಾ. ವಿಶ್ವರಾಧ್ಯ ಮಾಹಾಸ್ವಾಮೀಗಳು, ಪೂಜ್ಯ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯರು ಹೆಡಗಿಮದ್ರಿ, ಪೂಜ್ಯ ಸೂಗೂರೇಶ್ವರ ಶಿವಾಚಾರ್ಯ, ಪೂಜ್ಯ ಶ್ರೀ ಗುರುಪಾದ ಮಹಾಸ್ವಾಮಿಗಳು, ಚರಬಸವೇಶ್ವರ ಗದ್ದುಗೆಯ ಪೂಜ್ಯ ಬಸವಯ್ಯ ಶರಣರು, ಸಿಂಗನಳ್ಳಿಯ ಪ್ರಣವಾನಂದ ಮಾಹಾಸ್ವಾಮೀಗಳು, ಗೋಗಿ ದರ್ಗಾ ಷರೀಫ ಸಜ್ಜಾದೆ ನಸೀನ ಪೂಜ್ಯ ಸೈಯದ್ ಖಲಿಮುಲ್ಲಾ ಹುಸೇನಿ, ಹಾಗೂ ಸೈಯದ್ ಆಸೀಫ ಉಲ್ಲಾ ಹುಸೇನಿ ಸಜ್ಜಾದೆ ನಸೀನ ದರ್ಗಾ ಷರೀಫ, ಗೋಗಿ, ಮತ್ತು ಚಾಮನಾಳದ ಪೂಜ್ಯ ಬಸವಯ್ಯ ಸ್ವಾಮಿಗಳು, ವೇ.ಮೂ ಶರಣಯ್ಯ ಸ್ವಾಮಿಗಳು, ವೇ.ಮೂ. ಬಸಯ್ಯ ಸ್ವಾಮಿಗಳು ಗೋಗಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಯಾದಗಿರಿ ಶಾಸಕ ಚೆನ್ನರೆಡ್ಡಿ ಪಾಟೀಲ್ ತುನ್ನೂರ, ಮಹೇಶರೆಡ್ಡಿ ಮುದ್ನಾಳ, ರಾಜಶೇಖರಗೌಡ ವಜ್ಜಲ್, ಶಾಂತಗೌಡ ಪಾಟೀಲ್, ಶಂಕರಗೌಡ ವಣಿಕ್ಯಾಳ, ರಾಯಪ್ಪಗೌಡ ಹುಡೇದ, ಸುಭಾಷಗೌಡ ದೇವಣಗಾಂವ, ಮಾಣಿಕರೆಡ್ಡಿ ಮಲ್ಹಾರ ಸೇರಿದಂತೆ ಮುಖಂಡರು ಇತರರು ಇದ್ದರು.
