ಚೆನ್ನೈ: ತಮಿಳುನಾಡಿನಲ್ಲಿ ಕಳೆದ ಒಂದು ವಾರದಿಂದ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದ ನಟ ವಿಜಯ್ ಅವರಿಗೆ ಕೊನೆಗೂ ಬೇರೆ ಪಕ್ಷದ ಬೆಂಬಲ ಸಿಕ್ಕಿದೆ.
ಹೌದು, ತಮಿಳುನಾಡಿನಲ್ಲಿ ಮೊದಲನೇ ಬಾರಿಗೆ ಪಕ್ಷ ಕಟ್ಟಿ ಮೊದಲನೇ ಬಾರಿ ಚುನಾವಣೆಗೆ ಸ್ಪರ್ಧಿಸಿ 108 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ ನಟ ವಿಜಯ್ಗೆ ಕೊನೆಗೂ ಟಿವಿಕೆಗೆ ವಿಸಿಕೆ ಬೇಷರತ್ ಬೆಂಬಲ ಘೋಷಿಸಿದೆ.
ವಿಸಿಕೆ ಇಬ್ಬರು ಶಾಸಕರು ಟಿವಿಕೆಗೆ ಬೆಂಬಲ ಪತ್ರ ನೀಡಿದ್ದಾರೆ. ಸರಳ ಬಹುಮತ ಬೆನ್ನಲ್ಲೇ ವಿಜಯ್ ಚೆನ್ನೈ ನಿವಾಸದಿಂದ ನಿರ್ಗಮಿಸಿದ್ದಾರೆ. ಇಂದು ಸಂಜೆ ರಾಜ್ಯಪಾಲ ಅರ್ಲೇಕರ್ ಅಲಭ್ಯರಾಗಿದ್ದಾರೆ. ಸಂಜೆ 7:10ಕ್ಕೆ ರಾಜ್ಯಪಾಲರು ಕೇರಳದ ತಿರುವನಂತಪುರಕ್ಕೆ ತೆರಳಲಿದ್ದಾರೆ. ಹೀಗಾಗಿ, ಅದಕ್ಕೂ ಮುನ್ನ ರಾಜ್ಯಪಾಲರ ಭೇಟಿಗೆ ವಿಸಿಕೆ ಇಬ್ಬರು ಶಾಸಕರು ಟಿವಿಕೆಗೆ ಬೆಂಬಲ ಪತ್ರ ನೀಡಿದ್ದಾರೆ.
ವಿಜಯ್ ನೇತೃತ್ವದ ಒಕ್ಕೂಟವು ಈಗಾಗಲೇ 116 ಚುನಾಯಿತ ಶಾಸಕರ ಬೆಂಬಲವನ್ನು ಹೊಂದಿದ್ದು, ವಿಸಿಕೆಯ 2 ಸ್ಥಾನಗಳನ್ನು ಸೇರಿಸಿದಾಗ, ಅದರ ಬಲವು 118 ಕ್ಕೆ ಏರುತ್ತದೆ. ಇದು ರಾಜ್ಯದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ ಶಾಸಕರ ಸಂಖ್ಯೆಯಾಗಿದೆ. ಇದನ್ನೂ ಓದಿ: ಹಿರಿಯ ಜೀವಿಗೆ ಪಾದಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ
ವಿಸಿಕೆ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಟಿವಿಕೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
