Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಹಣಬಲ, ತೋಳ್ಬಳದಿಂದ ಜನರತೀರ್ಪು ಬದಲಾಗಬಾರದು: ಸಚಿವ ಮುನಿಯಪ್ಪ‌
  • Bangalore
  • Politics

ಹಣಬಲ, ತೋಳ್ಬಳದಿಂದ ಜನರತೀರ್ಪು ಬದಲಾಗಬಾರದು: ಸಚಿವ ಮುನಿಯಪ್ಪ‌

Praja Vahini May 9, 2026 1 minute read
WhatsApp Image 2026-05-09 at 14.27.26
Spread the love

ಬೆಂಗಳೂರು: ಮತಪಟ್ಟಿ ಪರಿಷ್ಕರಣೆ ವೇಳೆ ಕೆಲ ಸಮುದಾಯಗಳ ಮತಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕುವ ಆರೋಪಗಳ ಬಗ್ಗೆ ಕಾಂಗ್ರೆಸ್ ಎಚ್ಚರಿಕೆಯಿಂದ ಕೆಲಸ ಮಾಡಲಿದೆ ಎಂದು ಆಹಾರ ಸಚಿವರಾದ ಕೆಹೆಚ್ ಮುನಿಯಪ್ಪ‌ ಅವರು ಹೇಳಿದ್ದಾರೆ.

ನಗರದಲ್ಲಿ ಇಂದು (ಶನಿವಾರ ಮೇ 9) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್.ಐ.ಆರ್ ಪ್ರಕ್ರಿಯೆ ಬಗ್ಗೆ ದೇಶದಾದ್ಯಂತ ಗೊಂದಲವಿದ್ದು, ಬೂತ್ ಮಟ್ಟದಲ್ಲಿ ಬಿ.ಎಲ್.ಓ-1 ಹಾಗೂ ಬಿ.ಎಲ್.ಓ-2 ವ್ಯವಸ್ಥೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಮಮತಾ ಬ್ಯಾನರ್ಜಿ ಉಲ್ಲೇಖಿಸಿ ಮಾತನಾಡಿದ ಸಚಿವರು, ಲಕ್ಷಾಂತರ ಮತಗಳನ್ನು ಮತಪಟ್ಟಿಯಿಂದ ತೆಗೆದು ಹಾಕುವಂತಹ ಘಟನೆಗಳು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು. ಹಣಬಲ, ತೋಳ್ಬಳ ಅಥವಾ ತಿರುಚಿದ ಕ್ರಮಗಳಿಂದ ಜನರತೀರ್ಪು ಬದಲಾಗಬಾರದು ಈ ಬಾರಿ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ವಿಶೇಷ ಎಚ್ಚರಿಕೆ ವಹಿಸಲಿದೆ ಎಂದು ಸ್ಪಷ್ಟಪಡಿಸಿದರು.

ಕೇರಳದಲ್ಲಿ ಶೇ.100ರಷ್ಟು ಶಿಕ್ಷಣ ಪ್ರಮಾಣ ಇರುವುದರಿಂದ ಅಲ್ಲಿ ಇಂತಹ ಅಕ್ರಮಗಳಿಗೆ ಅವಕಾಶ ಕಡಿಮೆ ಎಂದು ಸಚಿವರು ಅಭಿಪ್ರಾಯಪಟ್ಟರು. ರಾಜ್ಯದ ಜನರು ಅತ್ಯಂತ ವಿದ್ಯಾವಂತರಾಗಿದ್ದು, ಸಾಮಾನ್ಯ ಕಾರ್ಮಿಕರೂ ಉನ್ನತ ಶಿಕ್ಷಣ ಪಡೆದವರಾಗಿರುವುದರಿಂದ ಮತದಾರರ ಹಕ್ಕುಗಳ ಬಗ್ಗೆ ಹೆಚ್ಚಿನ ಜಾಗೃತಿ ಇದೆ ಎಂದು ಹೇಳಿದರು. ಇದನ್ನೂ ಓದಿ: ಟೋಯಿಂಗ್; ವಾಹನ ಸವಾರರೇ ಎಚ್ಚರ..ಎಚ್ಚರ

ನಾಳೆ ಅರಮನೆ ಮೈದಾನದ ಗಾಯತ್ರಿ ವಿಹಾರ 4 ರಲ್ಲಿ ಬೆಳಗ್ಗೆ 11 ಗಂಟೆಗೆ ಕರ್ನಾಟಕ ಮಾದರ ಮಹಾಸಭಾದ  ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆಯನ್ನು ಆಯೊಜಿಸಲಾಗಿದೆ ಎಂದು ತಿಳಿಸಿದರು.

About the Author

Praja Vahini

Editor

View All Posts

Spread the love

Post navigation

Previous: ಟೋಯಿಂಗ್; ವಾಹನ ಸವಾರರೇ ಎಚ್ಚರ..ಎಚ್ಚರ
Next: ಹಿರಿಯ ಜೀವಿಗೆ ಪಾದಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ

Views:

22

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.