ಚೆನ್ನೈ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನಿನ್ನೆ (ಸೋಮವಾರ ಮೇ. 04) ರಂದು ಹೊರಬಿದ್ದಿದ್ದು, ಇಡೀ ದೇಶವೇ ಬೆರಗಾಗುವಂತೆ ಮಾಡಿರುವ ತಮಿಳುನಾಡಿನ ವಿಧಾನಸಭಾ ಚುನಾವಣೆ ಫಲಿತಾಂಶ ಇಷ್ಟು ದಿನದ ರಾಜಕೀಯದಲ್ಲಿ ಧೀಮಂತ ನಾಯಕರಾಗಿ ಹೊರಹೊಮ್ಮಿದ ಹಲವು ಘಟಾನುಘಟಿ ನಾಯಕರನ್ನೇ ತಲೆಕೆಳಗೆ ಆಗುವಂತೆ ಮಾಡಿದೆ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ.
ಹೌದು, ಇತ್ತೀಚಿಗಷ್ಟೇ ತಮಿಳುನಾಡಿನಲ್ಲಿ ಹೊಸ ಟಿವಿಕೆ ಎಂಬ ಪಕ್ಷವನ್ನು ಕಟ್ಟಿ, ಸಾಮಾನ್ಯ ಜನರನ್ನ ಧೀಮಂತ ನಾಯಕರನ್ನಾಗಿ ಹೊರಮಿಸಿರುವ ಟಿವಿಕೆ ಪಕ್ಷ ಇಡೀ ದೇಶದ ಜನರ ಮೆಚ್ಚುಗೆಯ ಪಕ್ಷವಾಗಿ ಹೊರಹೊಮ್ಮಿದೆ.
ಯೆಸ್…ದಶಕಗಳ ಕಾಲದ ರಾಜಕೀಯ ಅನುಭವವಿರುವ ಡಿಎಂಕೆ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ವಿರುದ್ಧ ಕೇವಲ ಒಂದೇ ಒಂದು ಮತದ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.
ಮತ ಎಣಿಕೆಯ ಆರಂಭದಿಂದಲೂ ಪೆರಿಯಕರುಪ್ಪನ್ ಮತ್ತು ಸೀನಿವಾಸ ಸೇತುಪತಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪ್ರತಿ ಸುತ್ತಿನಲ್ಲೂ ಮುನ್ನಡೆಯು ಕ್ಷಣಕ್ಷಣಕ್ಕೂ ಬದಲಾಗುತ್ತಿತ್ತು. ಅಂತಿಮ ಸುತ್ತಿನ ಎಣಿಕೆ ಮುಗಿದಾಗ ಇಬ್ಬರ ನಡುವಿನ ವ್ಯತ್ಯಾಸ ಕೇವಲ ಒಂದು ಮತವಾಗಿತ್ತು. ಮರು ಎಣಿಕೆಯ ನಂತರವೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗದ ಕಾರಣ, ಸೀನಿವಾಸ ಸೇತುಪತಿ ಅವರನ್ನು ವಿಜೇತರೆಂದು ಘೋಷಿಸಲಾಯಿತು. ಇದನ್ನೂ ಓದಿ: ಡಿಎಂಕೆ ಭದ್ರಕೋಟೆ ಚಿದ್ರಗೊಳಿಸಿದ ಟಿವಿಕೆ
ಟಿವಿಕೆಯ ಚೊಚ್ಚಲ ಚುನಾವಣೆಯಲ್ಲಿ ಐತಿಹಾಸಿಕ ಜಯ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಇದು ಮೊದಲ ಚುನಾವಣೆಯಾಗಿದ್ದು, ಆಡಳಿತಾರೂಢ ಡಿಎಂಕೆಯ ಪ್ರಭಾವಿ ಸಚಿವರನ್ನು ಸೋಲಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಯುವ ನಾಯಕ ಶ್ರೀನಿವಾಸ ಸೇತುಪತಿ ಅವರ ಈ ‘ಜಾಕ್ಪಾಟ್’ ಗೆಲುವು ಹೊಸ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಿದೆ.
