ಚೆನ್ನೈ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಇಂದು (ಸೋಮವಾರ ಮೇ. 04) ಹೊರಬಿದ್ದಿದ್ದು ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಭದ್ರಕೋಟೆಯನ್ನ ಟಿವಿಕೆ ಪಕ್ಷವು ಚಿದ್ರ ಗೊಳಿಸಿದೆ.
ಹೌದು, ಇದೇ ಮೊದಲನೇ ಬಾರಿಗೆ ಪಕ್ಷ ಕಟ್ಟಿ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟ ನಟ ದಳಪತಿ ವಿಜಯ್ ಅವರು ತಮಿಳುನಾಡಿನಲ್ಲಿ ಬಹುಮತದಿಂದ ಗೆದ್ದು ಬೀರಿದ್ದಾರೆ. ಇದರಿಂದಾಗಿ ಡಿಎಂಕೆ ಬದ್ರಕೋಟೆಯಾಗಿದ್ದ ತಮಿಳುನಾಡು ಇದೀಗ ಟಿವಿಕೆ ತೆಕ್ಕೆಗೆ ಬರಲಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ, ದ್ರಾವಿಡ ಮುನ್ನೇತ್ರ ಕಳಗಂ ಅಭ್ಯರ್ಥಿ ಎಂ.ಕೆ. ಸ್ಟಾಲಿನ್ ಉತ್ತರ ಚೆನ್ನೈನ ಕೊಳತ್ತೂರು ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ವಿ.ಎಸ್.ಬಾಬು ವಿರುದ್ಧ ಸೋಲುಂಡಿದ್ದು, ಆಡಳಿತಾರೂಢ ಪಕ್ಷಕ್ಕೆ ನಟ ದಳಪತಿ ವಿಜಯ್ ಶಾಕ್ ಮೇಲೆ ಶಾಕ್ ನೀಡಿದ್ದಾರೆ. ಉಭಯ ಅಭ್ಯರ್ಥಿಗಳ ನಡುವೆ ಆರಂಭದಿಂದಲೂ ಭಾರಿ ಪೈಪೋಟಿ ಇತ್ತಾದರೂ ಅಂತಿಮವಾಗಿ ಎಂ.ಕೆ. ಸ್ಟಾಲಿನ್ ಟಿವಿಕೆ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದ ಜನರು ಬಿಜೆಪಿ ಬೆಂಬಲಿಸುವ ಮೂಲಕ ದುರಾಡಳಿತಕ್ಕೆ ತಕ್ಕ ಉತ್ತರ ನೀಡಿದೆ: ಆರ್ ಅಶೋಕ್
ಕಳೆದ ಕೆಲವು ವರ್ಷಗಳಿಂದ ಕೊಳತ್ತೂರು ಕ್ಷೇತ್ರ ಡಿಎಂಕೆಯ ಭದ್ರ ಕೋಟೆಯಾಗಿದ್ದು, ಎಂ.ಕೆ. ಸ್ಟಾಲಿನ್ 2011ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2021ರ ಚುನಾವಣೆಯಲ್ಲಿ ಅವರು ಎಐಎಡಿಎಂಕೆ ಅಭ್ಯರ್ಥಿ ಆದಿ ರಾಜಾರಾಮ್ ವಿರುದ್ಧ 70,000ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. ಆದರೆ ಈ ಬಾರಿಯ ಚುನಾವಣಾ ಫಲಿತಾಂಶ ಡಿಎಂಗೆ ಮರ್ಮಾಘಾತ ಉಂಟುಮಾಡಿದೆ.
