ಬೆಂಗಳೂರು: ಲೋಕಪ್ರಸಿದ್ಧ ಬೆಂಗಳೂರು ಕರಗವನ್ನ ಎಷ್ಟು ಅದ್ದೂರಿಯಾಗಿ ಮಾಡುತ್ತಾರೋ ಅಷ್ಟೇ ಅದ್ದೂರಿಯಾಗಿ ಎಸ್.ಜಿ ಪಾಳ್ಯ ಹಾಗೂ ತಾವರೇಕೆರೆ, ಚಿಕ್ಕ ಅಡುಗೋಡಿ, ಮಡಿವಾಳ ಪ್ರದೇಶದಲ್ಲಿ ಅದ್ದೂರಿಯಾಗಿ ಕರಗ ಉತ್ಸವವನ್ನು ಮಾಡಿದ್ದಾರೆ.
ಇನ್ನು ಈ ಕರಗ ಉತ್ಸವದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಭಾಗಿಯಾಗಿದ್ದರು.
ಹೌದು, ಲೋಕಪ್ರಸಿದ್ಧ ಬೆಂಗಳೂರಿನ ಕರಗವನ್ನು ಇಷ್ಟು ಹತ್ತಿರದಿಂದ ನೋಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ಮಂಜಣ್ಣ ಅವರ ಮುಂದಾಳತ್ವದಿಂದ ನಾವು ಎಲ್ಲರೂ ನಮ್ಮ ಊರಿನಲ್ಲೆ ಈ ಪವಿತ್ರ ಸಂಪ್ರದಾಯಗಳು, ಆಚರಣೆಗಳು ಮತ್ತು ವೈಭವಮಯ ಕರಗೋತ್ಸವವನ್ನು ನೇರವಾಗಿ ಕಾಣುವ ಭಾಗ್ಯ ಹೊಂದಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು. ಇದನ್ನೂ ಓದಿ: ನೂತನ ಆರ್‌ಟಿಓ ಕಚೇರಿ ಉದ್ಘಾಟನೆ
ಅಲ್ಲದೆ ಈ ಅದ್ಭುತ ಕರಗ ಮಹೋತ್ಸವವನ್ನು ಅದ್ಭುತವಾಗಿ ಆಯೋಜಿಸಿದ ಎಸ್‌ಟಿಡಿ ಮಂಜಣ್ಣ ಅವರಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದರು.
